ತಿರುವನಂತಪುರಂ: ಕೇರಳದಲ್ಲಿ 9-12 ವರ್ಷ ಮಕ್ಕಳಲ್ಲಿ ಡೆಂಘೀ ಸೆರೋಪ್ರೆವೆಲೆನ್ಸ್ ಕಂಡು ಬಂದಿದೆ ಎಂದು ಹೊಸ ಅಧ್ಯಯನದಲ್ಲಿ ಕಂಡು ಬಂದಿದೆ. 9-12 ವರ್ಷದ ಮಕ್ಕಳಲ್ಲಿ ಶೇ 30.9ರಷ್ಟು ಮತ್ತು 5 ರಿಂದ 8 ವರ್ಷದ ಮಕ್ಕಳಲ್ಲಿ ಶೇ 24.6ರಷ್ಟು ಮಕ್ಕಳಲ್ಲಿ ಇದು ಪತ್ತೆಯಾಗಿದೆ ಎಂದು ದಿ ಲ್ಯಾನ್ಸೆಟ್ ರೀಜನಲ್ ಹೆಲ್ತ್ ಸೌತ್ಈಸ್ಟ್ ಏಷ್ಯಾ ಜರ್ನಲ್ನಲ್ಲಿ ಪ್ರಕಟವಾದ ಲೇಖನದಲ್ಲಿ ವರದಿಯಾಗಿದೆ.
ಇದು 5-12 ವರ್ಷದ ಮಕ್ಕಳಲ್ಲಿ ಡೆಂಘೀ ಇರುವಿಕೆ ಕುರಿತು ಹಾಗೂ ಸೊಳ್ಳೆಗಳ ವಾಹಕದ ವೈರಲ್ ರೋಗದ ಸಂಕೀರ್ಣತೆ ಮೇಲೆ ಬೆಳಕು ಚೆಲ್ಲಿದೆ ಎಂದು ಅಧ್ಯಯನ ತಿಳಿಸಿದೆ. ಸೆರೋಪ್ರೆವೆಲೆನ್ಸ್ ಎಂಬುದು ಜನಸಂಖ್ಯೆಯಲ್ಲಿನ ವ್ಯಕ್ತಿಗಳ ಆಧಾರದ ಮೇಲೆ ಅವರ ಸೆರೊಲೊಜಿ (ರಕ್ತದಲ್ಲಿರುವ ಸೆರಂ) ಇರುವಿಕೆ ಆಧಾರಿತವಾಗಿದೆ. 5,236 ಮಂದಿಯ ಗಾತ್ರದ ಆಧಾರದ ಮೇಲೆ ಈ ಅಧ್ಯಯನ ನಡೆಸಲಾಗಿದ್ದು, ಪ್ರಾದೇಶಿಕ ಬದಲಾವಣೆಗಳು ತೆರೆದುಕೊಳ್ಳುವಿಕೆಯನ್ನು ಇದು ಪ್ರದರ್ಶಸಿದೆ. ಜೊತೆಗೆ ಅಧ್ಯಯನವೂ ಇದನ್ನು ತಡೆಗಟ್ಟುವಿಕೆ ಮಾದರಿ ಗುರಿಯ ಅವಶ್ಯಕತೆಯನ್ನು ಒತ್ತಿ ಹೇಳಿದೆ.
ಈ ಇರುವಿಕೆಯು ಇತರ ಸಾಂಕ್ರಾಮಿಕತೆ ಇರುವ ದೇಶಗಳಿಗಿಂತ ಕಡಿಮೆ ಆಗಿದೆ. ಆದರೂ ಇದು ಸಿಂಗಾಪೂರದಲ್ಲಿ ಹೆಚ್ಚಾಗಿದೆ ಎಂದು ಅಧ್ಯಯನ ತಿಳಿಸಿದೆ. ಈ ತಂಡದ ಜೊತೆಗೆ ತಿರುವನಂತಪುರದ ಸರ್ಕಾರಿ ಮೆಡಿಕಲ್ ಕಾಲೇಜ್, ಕೇರಳ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವೂ ಅಧ್ಯಯನ ನಡೆಸಿದೆ. ತಂಡ ಪರಿಣಾಮಕಾರಿ ಲಸಿಕೆ ನಿಯಮ ಮತ್ತು ಸಾರ್ವಜನಿಕ ಆರೋಗ್ಯ ಮಧ್ಯಸ್ಥಿಕೆ ಅರ್ಥೈಸಿಕೊಳ್ಳುವಿಕೆ ಒತ್ತಿ ಹೇಳಿದೆ.
ಈ ಡೆಂಘೀ ಸೆರೋಪ್ರೆವೆಲೆನ್ಸ್ ನಗರ ಪ್ರದೇಶದಲ್ಲಿ ಹೆಚ್ಚಿದೆ. ಅದರಲ್ಲೂ ಕಡಿಮೆ ಸಾಮಾಜಿಕ ಆರ್ಥಿಕ ಗುಂಪಿನ ಜನರಲ್ಲಿ ಕಂಡು ಬಂದಿದೆ. ಬಾಲಕಿಯರಿಗಿಂತ ಬಾಲಕರಲ್ಲಿ ಹೆಚ್ಚಿನ ಮಟ್ಟದಲ್ಲಿ ಇದು ಕಂಡು ಬಂದಿದ್ದು, ಬಟ್ಟೆ ಮತ್ತು ಇತರ ಚಟುವಟಿಕೆ ಮಾದರಿಯೊಂದಿಗೆ ಸಂಬಂಧ ಹೊಂದಿದೆ.
ಅಧ್ಯಯನವು ಕೇರಳದಲ್ಲಿ ಹೈಪರ್‌ಡೆಮಿಕ್ ಪರಿಸ್ಥಿತಿ ಸೂಚಿಸುತ್ತದೆ. ಎಲ್ಲ ನಾಲ್ಕು ಡೆಂಘೀ ಸೆರೋಟೈಪ್‌ಗಳು ಪರಿಚಲನೆಗೊಳ್ಳುತ್ತಿವೆ. ಅಧ್ಯಯನವೂ ವರ್ಷದಿಂದ ವರ್ಷಕ್ಕೆ ವಿವಿಧ ತಳಿಗಳ ಹೊರಹೊಮ್ಮುವಿಕೆ ಎತ್ತಿ ತೋರಿಸಿದೆ.
ಸಂಶೋಧಕರು ಡೆಂಘೀ ಪ್ರಕರಣದ ಒಂದು ಭಾಗದಲ್ಲಿ ಮಾತ್ರ ಕಂಡು ಬಂದಿದೆ. ಜೊತೆಗೆ ಶೇ 89ರಷ್ಟು ಮಕ್ಕಳು ಈ ಹಿಂದೆ ತಾವು ಡೆಂಘೀ ಸೋಂಕಿಗೆ ಗುರಿಯಾದ ಬಗ್ಗೆ ಮಾಹಿತಿಯನ್ನು ಹೊಂದಿಲ್ಲ ಎಂದು ತಿಳಿಸಿದ್ದಾರೆ. ಈ ರೀತಿ ಡೆಂಘೀ ಪತ್ತೆಯಾಗದ ವ್ಯಕ್ತಿಗಳು ಪ್ರಾಥಮಿಕ ಸೋಂಕಿನ ಪ್ರಸರಣದ ಮೂಲವಾಗಿದ್ದಾರೆ. ಈ ಹರಡುವಿಕೆ ನಿಯಂತ್ರಕ್ಕೆ ಅಗತ್ಯ ಕ್ರಮ ಮತ್ತು ತಡೆಗಟ್ಟುವಿಕೆ ಕ್ರಮವಹಿಸಬೇಕು ಎಂದು ಅಧ್ಯಯನ ತಿಳಿಸಿದೆ. ಈ ಅಧ್ಯಯನಕ್ಕೆ ಸಂಶೋಧಕರು ಕ್ಲಾಸ್ರೂಮ್ನಲ್ಲಿ ವಿದ್ಯಾರ್ಥಿಗಳನ್ನು ಯಾದ್ರಚಿಕವಾಗಿ ಆಯ್ಕೆ ಮಾಡಿದ್ದಾಗಿ ತಿಳಿಸಿದ್ದಾರೆ. ಡೆಂಘೀ ತಡೆಗಟ್ಟುವಿಕೆ ತಂತ್ರವನ್ನು ಗಮನಾರ್ಹವಾಗಿ ಅಳವಡಿಸಿಕೊಳ್ಳುವ ಕುರಿತು ಅಧ್ಯಯನ ತಿಳಿಸಿದೆ.
ಇದನ್ನೂ ಓದಿ: ಡೌನ್ ಸಿಂಡ್ರೋಮ್ ಕಾಯಿಲೆ, ಅರಿವಿನ ಕಾರ್ಯಾಚರಣೆ ಹೆಚ್ಚಿಸುವಲ್ಲಿ ವ್ಯಾಯಾಮ ಸಹಾಯಕ; ಅಧ್ಯಯನ