ETV Bharat / sukhibhava

ಕಾಡುವ ಕಣ್ಣಿನ ಕಪ್ಪು ವರ್ತುಲ ಸಮಸ್ಯೆಗೆ ಮನೆಯಲ್ಲೇ ಇದೆ ಮದ್ದು!

ಕಪ್ಪು ವರ್ತುಲಗಳಿಗೆ ಮನೆಯಲ್ಲಿಯೇ ಸಿಗುವ ಕೆಲವು ಔಷಧಗಳು ರಾಮಬಾಣವಾಗಿದ್ದು, ಇವುಗಳ ಬಳಕೆ ಮೂಲಕ ಇದಕ್ಕೆ ಪರಿಹಾರ ಕಂಡು ಕೊಳ್ಳಬಹುದಾಗಿದೆ.

dark-circles-prevent-method
dark-circles-prevent-method
author img

By ETV Bharat Karnataka Team

Published : Dec 6, 2023, 1:28 PM IST

ಹೈದರಾಬಾದ್​: ಒತ್ತಡ ಮತ್ತು ನಿದ್ರೆ ಹೀನತೆ ಮತ್ತು ಹಾರ್ಮೋನ್​ ಅಸಮತೋಲನಗಳಿಂದ ಕಣ್ಣಿನ ಕೆಳಗೆ ಕಪ್ಪು ವರ್ತುಲಗಳು ಕಾಡುವುದು ಸಾಮಾನ್ಯ. ಈ ಕಪ್ಪು ವರ್ತುಲಗಳಿಂದ ಮುಖದ ಸೌಂದರ್ಯ ಹಾಳಾಗುವುದು ಸುಳ್ಳಲ್ಲ. ಈ ಕಾರಣಕ್ಕೆ ಆರಂಭದಿಂದಲೇ ಈ ಕಪ್ಪು ವರ್ತುಲಗಳ ನಿವಾರಣೆಗೆ ಕ್ರಮವಹಿಸಬೇಕು. ಕಪ್ಪು ವರ್ತುಲಗಳಿಗೆ ಮನೆಯಲ್ಲಿಯೇ ಸಿಗುವ ಕೆಲವು ಔಷಧಗಳು ರಾಮಬಾಣವಾಗಿದ್ದು, ಇವುಗಳ ಬಳಕೆ ಮೂಲಕ ಇದಕ್ಕೆ ಪರಿಹಾರ ಕಂಡು ಕೊಳ್ಳಬಹುದಾಗಿದೆ.

ಆಲೂಗಡ್ಡೆ: ಆಲೂಗಡ್ಡಿಯಲ್ಲಿ ಆ್ಯಂಟಿ ಆಕ್ಸಿಡೆಂಟ್​​ ಇದ್ದು, ಇವು ಚರ್ಮಕ್ಕೆ ಉತ್ತಮವಾಗಿದೆ. ಇದು ಕಣ್ಣಿನ ಕೆಳಗೆ ಮೂಡುವ ಕಪ್ಪು ವರ್ತುಲವನ್ನು ತಗ್ಗಿಸುತ್ತದೆ. ಆಲೂಗಡ್ಡೆಯನ್ನು ಸಣ್ಣದಾಗಿ ವೃತ್ತಾಕಾರವಾಗಿ ಕತ್ತರಿಸಿ, 10 ನಿಮಿಷ ಕಣ್ಣ ಕೆಳಗೆ ಇಡಿ. ಬಳಿಕ ಮುಖವನ್ನು ತಣ್ಣೀರಿನಿಂದ ತೊಳೆಯಿರಿ. ಪ್ರತಿನಿತ್ಯ ಈ ರೀತಿ ಮಾಡುವುದರಿಂದ ಉತ್ತಮ ಫಲಿತಾಂಶವನ್ನು ಪಡೆಯಬಹುದು.

ಪುದಿನಾ: ಪುದಿನಾ ಎಲೆಗಳಲ್ಲಿ ಮೆತನೊಲ್​ ಇದ್ದು, ಇವು ಚರ್ಮವನ್ನು ಪುನರ್ಜೀವನಗೊಳಿಸುವ ಅಂಶವನ್ನು ಹೊಂದಿರುತ್ತದೆ. ಇದು ಕೂಡ ಕಣ್ಣಿನ ಕಪ್ಪು ವರ್ತುಲ ಮತ್ತು ನೆರಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ. ಪುದಿನಾ ಎಲೆಗಳನ್ನು ಚೆನ್ನಾಗಿ ಜಜ್ಜಿ ಅದನ್ನು ಕಪ್ಪು ವರ್ತುಲದಲ್ಲಿ ಹಚ್ಚಿ ಐದು ನಿಮಿಷ ಬಿಟ್ಟು ತೊಳೆಯಬಹುದು.

ಅರಿಶಿಣ: ಇದರಲ್ಲಿ ಕ್ಯೂರಿಕ್ಯುಮಿನ್​ ಎಂಬ ವಿಶೇಷ ರಾಸಾಯನಿಕ ಹೊಂದಿದೆ. ಇದು ಚರ್ಮದ ಹೊಳಪಿಗೆ ಸಹಾಯ ಮಾಡುತ್ತದೆ. ಇದು ಮೊಡವೆ, ಕಪ್ಪು ವರ್ತುಲ ಸಮಸ್ಯೆಗೆ ರಾಮಬಾಣ. ಬಾದಾಮಿ ಎಣ್ಣೆಗೆ ಅರ್ಧ ಸ್ಪೂನ್​ ಅರಿಶಿಣ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಹಚ್ಚಿ. ಒಂದು ಗಂಟೆ ಬಳಿಕ ತೊಳೆಯಬೇಕು. ವಾರದಲ್ಲಿ ಮೂರು ದಿನ ಈ ರೀತಿ ಮಾಡಿ ಬಳಿಕ ನೋಡಿ. ಕಪ್ಪು ವರ್ತುಲ ಕಡಿಮೆ ಮಾಡುತ್ತದೆ.

ಹಾಲು: ಹಾಲಿನಲ್ಲಿನ ಲ್ಯಾಕ್ಟಿಕ್​ ಆಮ್ಲವೂ ತ್ವಚೆಗೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಇದು ಕೂಡ ಕಣ್ಣಿನ ಕಪ್ಪು ವರ್ತುಲ ಮತ್ತು ನೆರಿಗೆ ಕಡಿಮೆ ಮಾಡುತ್ತದೆ. ಹಾಲನ್ನು ಹತ್ತಿ ಬಟ್ಟೆಯಲ್ಲಿ ಅದ್ದಿ ಚೆನ್ನಾಗಿ ಸವರಿ. 15 ನಿಮಿಷದ ಬಳಿಕ ತಣ್ಣೀರಿನಿಂದ ತೊಳೆಯಿರಿ.

ಐ ಪ್ಯಾಕ್​: ಇದು ಕೂಡ ಡಾರ್ಕ್​ ಸರ್ಕಲ್​ ಕಡಿಮೆ ಮಾಡುವಲ್ಲಿ ಸಹಾಯಕಾರಿ. ಈ ಪ್ಯಾಕ್​ ಮಾಡಲು ನಾಲ್ಕ ಹನಿ ನಿಂಬೆ ಹಣ್ಣಿನ ರಸ, ಅರ್ಧ ಸ್ಪೂನ್​​ ತೆಂಗಿನ ಎಣ್ಣೆ, ಒಂದು ಚಮಚ ಸೌತೆಕಾಯಿ ರಸ ಹಾಕಿ ಚೆನ್ನಾಗಿ ಕಲಸಿ ಅದನ್ನು ಕಣ್ಣಿಗೆ ಹಚ್ಚಿ, ಮಸಾಜ್​ ಮಾಡಿ. 10 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ. ವಾರದಲ್ಲಿ ಕನಿಷ್ಠ ಒಂದು ದಿನ ಈ ಪ್ಯಾಕ್​ ಹಾಕುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.

ಇದನ್ನೂ ಓದಿ: ನಿಮ್ಮ ಡಯಟ್​ನಲ್ಲಿ ಸೇರಿಸಿ ಮೆಂತ್ಯೆ ಕಾಳಿನ ರಸ; ಆಮೇಲೆ ನೋಡಿ ಮ್ಯಾಜಿಕ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.