ETV Bharat / sukhibhava

ನೀವು ಜಂಕ್​ಫುಡ್ ತಿಂತೀರಾ? ಹಾಗಾದರೆ ನಿಮ್ಮ ನಿದ್ದೆಗೆ ಬರುತ್ತೆ ಕುತ್ತು..! - ನಿದ್ರೆಯ ಮೂರನೇಯ ಹಂತವೇ

ಜಂಕ್​ಫುಡ್​ಗಳು ಈಗಾಗಲೇ ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ ಎಂದು ತಿಳಿಸಿದೆ. ಇದೀಗ ಈ ಆಹಾರಗಳು ನಿದ್ದೆಯ ಗುಣಮಟ್ಟದ ಮೇಲೂ ಪ್ರಭಾವ ಬೀರುತ್ತದೆ ಎಂಬುದು ಪತ್ತೆಯಾಗಿದೆ.

Damage to the quality of deep sleep due to consumption of junk food

author img

By

Published : May 31, 2023, 4:36 PM IST

ಬೆಂಗಳೂರು: ಆಳವಾದ ನಿದ್ದೆಯಲ್ಲಿನ (ಡೀಪ್​ ಸ್ಲೀಪ್​) ಕಡಿಮೆ ಗುಣಮಟ್ಟಕ್ಕೆ ಕಾರಣ ಅನಾರೋಗ್ಯಕರ ಆಹಾರ ಪದ್ದತಿ ಆಗಿದೆ ಎಂದು ಸಣ್ಣ ಗಾತ್ರದ ಅಧ್ಯಯನವೊಂದು ತಿಳಿಸಿದೆ. ನಿದ್ರೆಯ ಮೂರನೇಯ ಹಂತವೇ ಈ ಆಳವಾದ ನಿದ್ದೆಯಾಗಿದೆ. ಈ ವೇಳೆ ನೆನಪು ಸೇರಿದಮತೆ ಉಪ ಪ್ರಜ್ಞೆಗಳನ್ನು ಸರಿ ಮಾಡಿ ಮತ್ತೆ ಜೋಡಿಸಲು ಸಾಧ್ಯ.

ಜೊತೆಗೆ ಇದು ಸ್ನಾಯು ಬೆಳವಣಿಗೆ ಹಾಗೂ ಪ್ರತಿರಕ್ಷಣಾ ವ್ಯವಸ್ಥೆಗೆ ಅಗತ್ಯವಾಗಿದೆ. ಸ್ವೀಡನ್​ನ ಉಪ್ಸಲ ಯುನಿವರ್ಸಿಟಿ ಸಂಶೋಧಕರು ಹೇಗೆ ಜಂಕ್​ ಫುಡ್​ಗಳು ನಿದ್ದೆಗೆ ಅಡ್ಡಿ ಮಾಡುತ್ತದೆ ಎಂದು ವಿಶ್ಲೇಷಿಸಿದ್ದಾರೆ. ಆರೋಗ್ಯಯುತ ಭಾಗಿದಾರರು ಅನಾರೋಗ್ಯಕರ ಆಹಾರವನ್ನು ಸೇವಿಸಿದ್ದಾರೆ. ಇದೇ ವೇಳೆ ಅವರು ಆರೋಗ್ಯಯುತ ಆಹಾರವನ್ನು ಸರಿಯಾದ ಕ್ರಮದಲ್ಲಿ ಸೇವನೆ ಮಾಡಿಲ್ಲ.

ಜರ್ನಲ್​ ಆಫ್​ ಒಬೆಸಿಟಿಯಲ್ಲಿ ಈ ಅಧ್ಯಯನ ಪ್ರಕಟಿಸಲಾಗಿದೆ. ಈ ವೇಳೆ, ಜಂಕ್​ ಫುಡ್​ ತಿಂದ ಭಾಗಿದಾರರ ಆಳವಾದ ನಿದ್ರೆಯು ಆರೋಗ್ಯಯುತ ಆಹಾರ ಸೇವನೆ ಮಾಡುವವರಿಗೆ ಹೋಲಿಕೆ ಮಾಡಿದಾಗ ಅದರ ಗುಣಮಟ್ಟದಲ್ಲಿ ಕುಸಿತ ಕಂಡು ಬಂದಿದೆ. ಕಳಪೆ ಆಹಾರ ಮತ್ತು ಕಳಪೆ ನಿದ್ರೆ ಅನೇಕ ಸಾರ್ವಜನಿಕ ಆರೋಗ್ಯ ಪರಿಸ್ಥಿತಿ ಅಪಾಯವನ್ನು ಹೆಚ್ಚಿಸಿದೆ ಎಂದು ಉಪ್ಸಲ ಯುನಿವರ್ಸಿಟಿ ಅಸೋಸಿಯೇಟ್​​ ಪ್ರೊ ಜೊನಥನ್​ ಸೆಡೆರರ್ನೆಸ್ ತಿಳಿಸಿದ್ದಾರೆ.

ಈ ರೀತಿ ಅಧ್ಯಯನ: ಈ ಅಧ್ಯಯನಕ್ಕಾಗಿ ಒಟ್ಟಾರೆ 15 ಆರೋಗ್ಯ ಸಾಮಾನ್ಯ ತೂಕದ ಭಾಗಿದಾರರನ್ನು ಬಳಕೆ ಮಾಡಲಾಗಿದೆ. ಎರಡು ಭಾಗದಲ್ಲಿ ಈ ಸಂಬಂಧ ಅಧ್ಯಯನ ನಡೆಸಿದ್ದು, ಮೊದಲು ಭಾಗಿದಾರರ ನಿದ್ದೆಯೂ ಸಾಮಾನ್ಯವಾಗಿದ್ದು, ಅವರ ರಾತ್ರಿ ನಿದ್ರೆ ಅವಧಿ ಏಳರಿಂದ 9 ಗಂಟೆ ಆಗಿದೆ. ​ಭಾಗಿದಾರರಿಗೆ ಆರೋಗ್ಯ ಮತ್ತು ಅನಾರೋಗ್ಯಕರ ಆಹಾರವನ್ನು ಯಾದ್ರಿಚ್ಛಿಕವಾಗಿ ನೀಡಲಾಗಿದೆ. ಎರಡು ಆಹಾರದಲ್ಲೂ ಒಂದೇ ಪ್ರಮಾಣದ ಕ್ಯಾಲೋರಿಯನ್ನು ನೀಡಲಾಗಿದ್ದು, ಅವರ ದೈನಂದಿನ ಅಗತ್ಯಕ್ಕೆ ತಕ್ಕಂತೆ ಹೊಂದಾಣಿಕೆ ಮಾಡಲಾಗಿದೆ.

ಅನಾರೋಗ್ಯಕರ ಆಹಾರ ಪದ್ದತಿ ಹೆಚ್ಚಿನ ಸಕ್ಕರೆ, ಸ್ಯಾಚುರೆಡೇಟ್​ ಫ್ಯಾಡ್​ ಮತ್ತು ಹೆಚ್ಚಿನ ಸಂಸ್ಕರಿತ ಆಹಾರವನ್ನು ಹೊಂದಿದೆ. ಪ್ರತಿ ಡಯಟ್​ ಅನ್ನು ವಾರಗಳ ಕಾಲ ಸೇವನೆ ಮಾಡಲಾಗಿದೆ. ಈ ವೇಳೆ ಭಾಗಿದಾರರ ನಿದ್ರೆ, ದೈಹಿಕ ಚಟುವಟಿಕೆ, ಆಹಾರದ ಸಮಯವನ್ನು ವೈಯಕ್ತಿಕ ಮಟ್ಟದಲ್ಲಿ ನಿರ್ವಹಣೆ ಮಾಡಲಾಗಿದೆ. ಆರೋಗ್ಯಯುತ ಮತ್ತು ಡಯಟ್​ ಸೇವಿಸುವ ಸಮಯದಲ್ಲಿ ಅವರು ಒಂದೇ ಅವಧಿಯ ನಿದ್ರೆಯನ್ನು ಹೊಂದಿದ್ದಾರೆ.

ಈ ವೇಳೆ, ಅವರ ಆಳವಾದ ನಿದ್ದೆಯಲ್ಲಿನ ನಿಧಾನ ಅಲೆ ಕ್ರಿಯಾಚಟುವಟಿಕೆ ಪರಿಶೀಲನೆ ನಡೆಸಿದಾಗ ಆರೋಗ್ಯಯುತ ಆಹಾರ ಸೇವನೆ ಮಾಡುವವರಲ್ಲಿ ಉತ್ತಮವಾಗಿದೆ ಎಂದು ಸೆಡೆರ್ನೆಸ್​ ತಿಳಿಸಿದ್ದಾರೆ. ಎರಡನೇ ರಾತ್ರಿಗೂ ಇದು ಮುಂದುವರೆದಿದೆ. ಅನಾರೋಗ್ಯಕರ ಆಹಾರವು ಆಳವಾದ ನಿದ್ದೆಯಲ್ಲಿ ಗುಣಮಟ್ಟ ಹೊಂದಿಲ್ಲ ಎಂಬುದು ವಿಜ್ಞಾನಿಗಳು ತಿಳಿಸಿದ್ದಾರೆ. ಇದೇ ರೀತಿಯ ಬದಲಾವಣೆ ವಯಸ್ಸಾದವರಲ್ಲಿ ಮತ್ತು ನಿದ್ರಾಹೀನರಲ್ಲಿ ಕಂಡು ಬರುತ್ತದೆ. ಇದು ನಿದ್ರೆಯ ದೃಷ್ಟಿಕೋನವನ್ನು ಊಹಿಸಲಾಗಿದೆ. ಅಂತಹ ಪರಿಸ್ಥಿತಿಗಳಲ್ಲಿ ಆಹಾರಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಬೇಕಿದೆ ಎಂದಿದ್ದಾರೆ ಅಧ್ಯಯನಕಾರರು.

ಇದನ್ನೂ ಓದಿ: ಆತಂಕ ನೀಗಿಸಲು ಜಪಾನಿನ ಜನಪ್ರಿಯ ಆಹಾರ ನ್ಯಾಟೋ ಪರಿಣಾಮಕಾರಿ: ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.