ಹೈದರಾಬಾದ್ : ಕೆಲವು ಕಡೆ ಲಸಿಕೆ ಹಾಕಿಸಿಕೊಂಡರೆ ಎಲ್ಲಿ ಋತುಚಕ್ರದ ಮೇಲೆ ಪರಿಣಾಮ ಬೀರುತ್ತದೋ ಎಂಬ ಭಯದಿಂದ ಲಸಿಕೆ ಹಾಕಿಸಿಕೊಳ್ಳಲು ಕೆಲವು ಮಹಿಳೆಯರು ಹಿಂದೇಟು ಹಾಕಿದ್ದುಂಟು. ಆದರೆ, ಸಂಶೋಧಕರು ಈ ಸಂಬಂಧ ಕೆಲವೊಂದು ಅಧ್ಯಯನಗಳನ್ನು ನಡೆಸಿ ವರದಿ ಬಿಡುಗಡೆ ಮಾಡಿದ್ದಾರೆ.
ಒರೆಗಾನ್ ಹೆಲ್ತ್ & ಸೈನ್ಸ್ ಯೂನಿವರ್ಸಿಟಿಯ ಸಂಶೋಧಕರು ಈ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಇವರ ಪ್ರಕಾರ ಋತು ಚಕ್ರಗಳು ಸಾಮಾನ್ಯವಾಗಿ ತಿಂಗಳಿಂದ ತಿಂಗಳಿಗೆ ಸಣ್ಣ ಪ್ರಮಾಣದಲ್ಲಿ ಬದಲಾಗುತ್ತವೆ. ಇದು ಸಾಮಾನ್ಯ ಎಂದಿದ್ದಾರೆ.
ಕೊರೊನಾ ಲಸಿಕೆ ಇತರ ಮುಟ್ಟಿನ ಗುಣಲಕ್ಷಣಗಳನ್ನು ಹೇಗೆ ಪ್ರಭಾವಿಸುತ್ತದೆ ಎಂಬುದನ್ನು ನಿರ್ಧರಿಸಲು ಹೆಚ್ಚುವರಿ ಸಂಶೋಧನೆ ಅಗತ್ಯವಿದೆ ಎಂದೂ ಸಹ ತಿಳಿಸಿದ್ದಾರೆ.
ಮಹಿಳೆಯರಲ್ಲಿ ಕೇವಲ ಒಂದು ಸಣ್ಣ, ತಾತ್ಕಾಲಿಕ ಋತುಚಕ್ರದ ಬದಲಾವಣೆಯನ್ನು ಲಸಿಕೆ ಹಾಕಿಸಿಕೊಂಡವರಲ್ಲಿ ಅಧ್ಯಯನವು ಕಂಡು ಹಿಡಿದಿದೆ ಎನ್ನುತ್ತಾರೆ ಎನ್ಐಹೆಚ್ನ ಯುನಿಸ್ ಕೆನಡಿ ಶ್ರಿವರ್ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ ಅಂಡ್ ಹ್ಯೂಮನ್ ಡೆವಲಪ್‌ಮೆಂಟ್ (NICHD)ನ ನಿರ್ದೇಶಕಿ ಡಯಾನಾ ಡಬ್ಲ್ಯೂ ಬಿಯಾಂಚಿ.
ಈ ಅಧ್ಯಯನದಿಂದ ತಿಳಿದು ಬಂದ ಈ ಫಲಿತಾಂಶದಿಂದ ಕೊರೊನಾ ಲಸಿಕೆಯಿಂದ ಏನಾದರು ಸಂಭವಿಸಬಹುದೇ ಎಂದು ಅಂದುಕೊಂಡಿರುವ ಮಹಿಳೆಯರಿಗೆ ಸಲಹೆ ನೀಡುವ ಅವಕಾಶವನ್ನು ಒದಗಿಸುತ್ತದೆ ಎಂದು ಬಿಯಾಂಚಿ ಹೇಳಿದ್ದಾರೆ.
ಸಂಶೋಧಕರು ನ್ಯಾಚುರಲ್ ಸೈಕಲ್ಸ್ ಎಂಬ ಪೆರ್ಟಿಲಿಟಿ ಟ್ರ್ಯಾಕಿಂಗ್ ಅಪ್ಲಿಕೇಶನ್‌ನಿಂದ ಗುರುತಿಸಲ್ಪಟ್ಟ ಡೇಟಾವನ್ನು ವಿಶ್ಲೇಷಿಸಿದ್ದಾರೆ. ಇದರಲ್ಲಿ ಬಳಕೆದಾರರು ತಮ್ಮ ತಾಪಮಾನ ಮತ್ತು ಅವರ ಮುಟ್ಟಿನ ಚಕ್ರಗಳ ಡೇಟಾವನ್ನು ನವೀಕರಿಸಿದ್ದಾರೆ.
ಈ ಅಧ್ಯಯನದಲ್ಲಿ 3,959 ಮಹಿಳೆಯನ್ನ ತೊಡಗಿಸಲಾಗಿತ್ತು. ಇದರಲ್ಲಿ 2,403 ಮಂದಿ ಲಸಿಕೆಗಳನ್ನು ಪಡೆದಿದ್ದರೆ, 1,556 ಮಹಿಳೆಯರು ಲಸಿಕೆ ಪಡೆದಿರಲಿಲ್ಲ. ಹೆಚ್ಚಿನದಾಗಿ ಫಿಜರ್ ಮತ್ತು ಮಾಡರ್ನಾ ಲಸಿಕೆಗಳನ್ನು ಇವರು ಪಡೆದಿದ್ದಾರೆ. ಇವರಲ್ಲಿ ಉಂಟಾಗುವ ಋತುಚಕ್ರದಲ್ಲಿ ಹೆಚ್ಚಿನದೇನು ಬದಲಾವಣೆ ಕಂಡು ಬಂದಿಲ್ಲ ಎಂಬುದನ್ನು ಇಲ್ಲಿ ಕಂಡುಕೊಳ್ಳಲಾಗಿದೆ.
ಹಾಗೆಯೇ ಲಸಿಕೆ ಹಾಕಿಸಿಕೊಳ್ಳದ ಮಹಿಳೆಯರಲ್ಲಿಯೂ ಹೆಚ್ಚೇನು ಬದಲಾವಣೆ ಇಲ್ಲ. ಆದರೆ, ಒಂದು ದಿನದ ಅಂತರ ಕಂಡು ಬಂದಿದೆ ಎಂಬುದನ್ನು ಅಧ್ಯಯನದಲ್ಲಿ ಉಲ್ಲೇಖಿಸಲಾಗಿದೆ. ಮತ್ತು ಎರಡೂ ಲಸಿಕೆ ಹಾಕಿಸಿಕೊಂಡ ಮಹಿಳೆಯಲ್ಲಿ ಹೆಚ್ಚು ಎಂದರೆ 8 ದಿನಗಳ ಅಂತರ ಎಂದು ಕಂಡುಕೊಳ್ಳಲಾಗಿದೆ.
ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ಗೈನೊಕಾಲಜಿ ಮತ್ತು ಪ್ರಸೂತಿಶಾಸ್ತ್ರದ ಪ್ರಕಾರ, ಬದಲಾವಣೆಯು ಎಂಟು ದಿನಗಳಿಗಿಂತ ಕಡಿಮೆಯಿದ್ದರೆ ಚಕ್ರದ ಸಮಯದಲ್ಲಿನ ವ್ಯತ್ಯಾಸವು ಸಾಮಾನ್ಯವಾಗಿದೆ ಎಂದಿದೆ.