ಬೆಂಗಳೂರು: ಪ್ರತಿ ನಿತ್ಯ ಅಥವಾ ವಾರದಲ್ಲಿ ಮೂರು ದಿನ ಒಂದು ಹಿಡಿಯಷ್ಟು ವಾಲ್ನಟ್ ಸೇವಿಸುವ ಮಕ್ಕಳ ಅರಿವಿನ ಸಾಮರ್ಥ್ಯದಲ್ಲಿ ಅದರಲ್ಲೂ ವಿಶೇಷವಾಗಿ ಏಕಾಗ್ರತೆಯಲ್ಲಿ ಹೆಚ್ಚಿನ ಸುಧಾರಣೆ ಕಾಣಬಹುದು ಎಂದು ಅಧ್ಯಯನ ತಿಳಿಸಿದೆ. ಸ್ಪಾನಿಷ್ ಸಂಶೋಧಕರ ನೇತೃತ್ವದಲ್ಲಿ ಈ ಅಧ್ಯಯನ ನಡೆಸಲಾಗಿದ್ದು, ಇಕ್ಲಿನಿಕಲ್ಮೆಡಿಸಿನ್ ಜರ್ನಲ್ನಲ್ಲಿ ಈ ಅಧ್ಯಯನ ಪ್ರಕಟಿಸಲಾಗಿದೆ. ನಿಯಮಿತವಾಗಿ ವಾಲ್ನಟ್ ಸೇವನೆಯಿಂದ ಅರಿವಿನ ಅಭಿವೃದ್ಧಿ ಜೊತೆಗೆ ಮಾನಸಿಕ ಪಕ್ವತೆ ಕಾರಣವಾಗುತ್ತದೆ.
ಮಿದುಳಿನ ಆರೋಗ್ಯ ವೃದ್ದಿ: ಈ ಹಿಂದಿನ ಅಧ್ಯಯನದಲ್ಲಿ ನಟ್ಸ್ಗಳು (ಒಣಹಣ್ಣುಗಳು) ಮಿದುಳಿನ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ತೋರಿಸಿದೆ. ಹದಿ ಹರೆಯದವರಲ್ಲಿ ಅರಿವಿನ ಬೆಳವಣಿಗೆಯಲ್ಲಿ ನಿರ್ಣಾಯಕ ಹಂತದಲ್ಲಿ ಯಾವ ರೀತಿ ಪರಿಣಾಮ ಹೊಂದಿದೆ ಎಂಬುದನ್ನು ಪತ್ತೆ ಮಾಡಿಲ್ಲ. ವಾಲ್ನಟ್ಗಳಲ್ಲಿ ಆಲ್ಫಾ- ಲಿನೋಲೆನಿಕ್ ಫ್ಯಾಟಿ ಆಸಿಡ್ನಲ್ಲಿ ಸಮೃದ್ಧವಾಗಿದೆ. ಒಮೆಗಾ-3 ವಿಧದಲ್ಲಿದೆ. ಮೆದುಳಿನ ಬೆಳವಣಿಗೆಯಲ್ಲಿ ಮೂತಭೂತ ಪಾತ್ರವಹಿಸುತ್ತದೆ ಎಂಬುದು ತೋರಿಸಿದೆ.
ಹದಿಹರೆಯ ವಯಸ್ಸಿನಲ್ಲಿ ಹಾರ್ಮೋನ್ಗಳ ಬದಲಾವಣೆ ಕಂಡುಬರುವುದು ಸಮು. ಈ ವೇಳೆ ವಾಲ್ನಟ್ಗಳು ಸಿನಾಪ್ಟಿಕ್ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಮಿದುಳಿನ ಭಾಗವು ಮಾನಸಿಕ ಪಕ್ವತೆಯನ್ನು ಸಕ್ರಿಯಗೊಳಿಸುತ್ತದೆ. ಇದು ಸಂಕೀರ್ಣವಾದ ಭಾವನಾತ್ಮಕ ಮತ್ತು ಅರಿವಿನ ಕಾರ್ಯವನ್ನು ಸಕ್ರಿಯ ಗೊಳಿಸುತ್ತದೆ. ನರಕೋಶಗಳು ಈ ರೀತಿಯ ಕೊಬ್ಬಿನಾಮ್ಲದ ಪೋಷಣೆ ಹೊಂದಿರುತ್ತದೆ ಎಂದು ಜೋರ್ಡಿ ಜುಲ್ವೆಜ್ ತಿಳಿಸಿದ್ದಾರೆ.
ಇದನ್ನು ಓದಿ: ಬೇಸಿಗೆಯಲ್ಲಿ ತಂಪು ಮಾತ್ರವಲ್ಲ, ಮನಸ್ಸಿಗೆ ಉಲ್ಲಾಸವನ್ನು ನೀಡುತ್ತದೆ ಈ ಬಗೆ ಬಗೆಯ ಲಸ್ಸಿಗಳು
ಪ್ರೌಢಶಾಲಾ ಮಕ್ಕಳ ಮೇಲೆ ಅಧ್ಯಯನ: ಈ ಅಧ್ಯಯನಕ್ಕಾಗಿ 12 ವಿವಿಧ ಪ್ರೌಢಶಾಲೆಗಳ 11 ರಿಂದ 16 ವರ್ಷದ ವಯೋಮಾನದ 700 ವಿದ್ಯಾರ್ಥಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ನಿಯಂತ್ರಿತ ಗುಂಪು ಆರು ತಿಂಗಳ ಕಾಲ 30 ಗ್ರಾಂ ವಾಲ್ನಟ್ ಪ್ರತಿ ದಿನ ಸೇವಿಸುವಂತೆ ಸೂಚಿಸಲಾಗಿದೆ. ಮತ್ತೊಂದು ಗುಂಪಿಗೆ ಯಾವುದೇ ರೀತಿಯ ಈ ಕ್ರಮ ಜರುಗಿಸಿಲ್ಲ.
ಈ ವೇಳೆ ಕನಿಷ್ಠ 100 ದಿನಗಳವರೆಗೆ ವಾಲ್ನಟ್ ಸೇವಿಸಿದ ಹದಿಹರೆಯದವರಲ್ಲಿ ಏಕಾಗ್ರತೆ ಹೆಚ್ಚಿದೆ. ಜೊತೆಗೆ ಹೈಪರ್ ಆಕ್ಟಿವಿಟಿ ಡಿಸಾರ್ಡರ್ ಸಮಸ್ಯೆ ಹೊಂದಿರುವವರ ನಡುವಳಿಕೆಯಲ್ಲೂ ಗಮನಾರ್ಹ ಬದಲಾವಣೆ ಕಂಡು ಬಂದಿದೆ ಎಂದು ಅಧ್ಯಯನ ತಿಳಿಸಿದೆ.
ಹದಿ ಹರೆಯದ ಯುವಕ ಮತ್ತು ಯುವತಿಯರು ದಿನಕ್ಕೆ ಬೆರಳು ಎಣಿಕೆಯಷ್ಟು ಅಥವಾ ವಾರದಲ್ಲಿ ಕನಿಷ್ಠ ಮೂರು ದಿನ ವಾಲ್ನಟ್ ಸೇವನೆ ಮಾಡುವುದರಿಂದ ಅವರ ಅರಿವಿನ ಸಾಮರ್ಥ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡು ಬಂದಿದೆ. ಇದು ಹದಿ ಹರೆಯದವರ ಸವಾಲುಗಳನ್ನು ಎದುರಿಸಲು ಮತ್ತು ಪ್ರೌಢವಸ್ಥೆಯಲ್ಲಿ ಉಂಟಾಗುವ ಹಾರ್ಮೋನ್ಗಳ ಬದಲಾವಣೆ ನಿಯಂತ್ರಿಸಲು ಸಹಾಯ ಮಾಡುತ್ತದೆ. ಮಿದುಳಿನ ಬೆಳವಣಿಗೆ ಮತ್ತು ಸಂಕೀರ್ಣ ನಡವಳಿಕೆ ಹದಿ ಹರೆಯದ ಸಮಯದಲ್ಲಿ ಕಾಣಬಹುದು. ಈ ವೇಳೆ ಅವರಿಗೆ ಉತ್ತಮ ಪೋಷಕಾಂಶದ ಅಗತ್ಯವಿರುತ್ತದೆ ಎಂದು ಅರಿಯಡ್ನಾ ಪಿನಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಮಕ್ಕಳ ಶಾಲಾ ರಜಾದಿನಗಳು ಸ್ಕ್ರೀನ್ ಟೈಂನಲ್ಲಿ ಕಳೆದು ಹೋಗದಿರಲಿ