ETV Bharat / sukhibhava

'ವಾಂತಿ, ವಾಕರಿಕೆ ನಿರೋಧಕ ಔಷಧಿಗಳು ಸ್ಟ್ರೋಕ್‌ ಅಪಾಯವನ್ನು ಮೂರು ಪಟ್ಟು ಹೆಚ್ಚಿಸುತ್ತದೆ' - ಮಿದುಳು ಸ್ಟ್ರೋಕ್‌

ಸಾಮಾನ್ಯವಾಗಿ ಬಳಸುವ ವಾಂತಿ ಮತ್ತು ವಾಕರಿಕೆ ನಿರೋಧಕ ಔಷಧಿಗಳು ಪಾರ್ಶ್ವವಾಯು ಅಪಾಯವನ್ನು ಮೂರು ಪಟ್ಟು ಹೆಚ್ಚಿಸಬಹುದು ಎಂದು BMJ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ..

ಔಷಧಿ, drugs
ಔಷಧಿ
author img

By

Published : Mar 25, 2022, 12:46 PM IST

ಮೈಗ್ರೇನ್ ಹೊಂದಿರುವವರು ಅಥವಾ ಕೀಮೋಥೆರಪಿ ಹಾಗೂ ರೇಡಿಯೊ ಥೆರಪಿಗೆ ಒಳಗಾಗುವವರು ವಾಕರಿಕೆ ಮತ್ತು ವಾಂತಿಯಿಂದ ಬಳಲುತ್ತಿರುತ್ತಾರೆ. ಹೀಗಾಗಿ, ಅವರು ಆಂಟಿಡೋಪಮಿನರ್ಜಿಕ್ ಆಂಟಿಮೆಟಿಕ್ಸ್ (ADAs) ಔಷಧಿಗಳನ್ನು ಬಳಸುತ್ತಾರೆ. BMJ ನಡೆಸಿದ ಅಧ್ಯಯನದ ಪ್ರಕಾರ, ಮೆದುಳಿಗೆ ಹರಿಯುವ ರಕ್ತದ ಮೇಲೆ ಎಡಿಎ ಹೆಚ್ಚು ಪರಿಣಾಮ ಬೀರಲಿದ್ದು, ಈ ಔಷಧಿಗಳು ಪಾರ್ಶ್ವವಾಯು ಅಪಾಯವನ್ನು ಮೂರು ಪಟ್ಟು ಹೆಚ್ಚಿಸಬಹುದು ಎಂದು ತಿಳಿದು ಬಂದಿದೆ.

ಈ ಅಧ್ಯಯನಕ್ಕಾಗಿ 2012 ಮತ್ತು 2016ರ ನಡುವೆ ಮೊದಲ ಬಾರಿಗೆ ರಕ್ತದ ಕೊರತೆಯಿಂದ ಪಾರ್ಶ್ವವಾಯುಗೆ ಒಳಗಾದ 2,612 ರೋಗಿಗಳನ್ನು ಬಳಸಿಕೊಳ್ಳಲಾಗಿದೆ. ಆಂಟಿ ಸೈಕೋಟಿಕ್ಸ್‌ನಂತೆ ಎಡಿಎಗಳು ಆಂಟಿಡೋಪಮಿನರ್ಜಿಕ್ ಔಷಧಿಗಳಾಗಿವೆ. ಇವು ಮೆದುಳಿನಲ್ಲಿ ಡೋಪಮೈನ್ ಚಟುವಟಿಕೆಯನ್ನು ತಡೆಯುವ ಮೂಲಕ ಕಾರ್ಯ ನಿರ್ವಹಿಸುತ್ತವೆ. ಆಂಟಿ ಸೈಕೋಟಿಕ್ಸ್ ಪಾರ್ಶ್ವವಾಯುವಿನ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಕೆಲವು ಕಾಯಿಲೆಗಳು ಯಾವ ಸೂಚನೆ ಕೊಡದೆ ಬರುತ್ತವೆ. ಅಂತಹ ಕಾಯಿಲೆಗಳಲ್ಲಿ ಪಾರ್ಶ್ವವಾಯು ಅಥವಾ ಲಕ್ವಾ ಕೂಡ ಒಂದು. ಮಿದುಳಿನ ರಕ್ತ ಸಂಚಾರ ಕಡಿಮೆಯಾಗಿ ಮಿದುಳಿನ ಕಾರ್ಯ ಕಡಿತಗೊಳ್ಳುವುದನ್ನು ಮಿದುಳು ಸ್ಟ್ರೋಕ್‌ ಎನ್ನಲಾಗುತ್ತದೆ. ಇದು ರಕ್ತದ ಕೊರತೆಯಿಂದ ಆಗಬಹುದು ಅಥವಾ ರಕ್ತ ಸ್ರಾವ ಮತ್ತು ಅಡತಡೆಗಳಿಂದ ಉಂಟಾಗಬಹುದು.

ಒಬ್ಬ ಸಾಮಾನ್ಯ ಮನುಷ್ಯನಿಗೆ ಈ ಸ್ಟ್ರೋಕ್‌ನ ಬಗ್ಗೆ ಅಷ್ಟು ಅರಿವಿರುವುದಿಲ್ಲ ಮತ್ತು ಈ ರೀತಿ ಆದಾಗ ಯಾವ ರೀತಿಯ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಅರಿವಿರುವುದಿಲ್ಲ. ಮಧುಮೇಹ ಮತ್ತು ಅಧಿಕ ರಕ್ತದೊತ್ತಡ , ಧೂಮಪಾನ, ಅಧಿಕ ಬೊಜ್ಜು, ಕೊಲೆಸ್ಟ್ರಾಲ್ ಮತ್ತು ಹೃದ್ರೋಗಗಳು ಪಾರ್ಶ್ವವಾಯುವಿಗೆ ಮುಖ್ಯ ಕಾರಣವಾಗಬಹುದು.

ಸ್ಟ್ರೋಕ್ ವಿಧಗಳು: 1) ರಕ್ತಕೊರತೆಯ ಸ್ಟ್ರೋಕ್: ರಕ್ತ ಹೆಪ್ಪುಗಟ್ಟುವಿಕೆ ಅಥವಾ ರಕ್ತ ಸಂಚಲನೆ ಆಗದಿದ್ದಾಗ ರಕ್ತಕೊರತೆಯ ಸ್ಟ್ರೋಕ್ ಸಂಭವಿಸುತ್ತದೆ. ಪ್ಲೇಕ್ ಎಂದು ಕರೆಯಲ್ಪಡುವ ಕೊಬ್ಬು ರಕ್ತಸಂಚಾರಕ್ಕೆ ಅಡೆತಡೆ ಉಂಟುಮಾಡಬಹುದು. 2) ಹೆಮೊರಾಜಿಕ್ ಸ್ಟ್ರೋಕ್: ಮೆದುಳಿನಲ್ಲಿ ರಕ್ತನಾಳ ಸಿಡಿದಾಗ/ಒಡೆದಾಗ ಹೆಮೊರಾಜಿಕ್ ಸ್ಟ್ರೋಕ್ ಸಂಭವಿಸುತ್ತದೆ. ಇದು ಮೆದುಳಿನ ಅಂಗಾಂಶವನ್ನು ಹಾನಿಗೊಳಿಸುತ್ತದೆ.

ಸ್ಟ್ರೋಕ್​ ತಡೆಗಟ್ಟುವ ಕ್ರಮಗಳು: ಪಾರ್ಶ್ವವಾಯು ತಡೆಗಟ್ಟಲು ಅನೇಕ ಕ್ರಮಗಳಿವೆ. ಅವುಗಳೆಂದರೆ, ಅಧಿಕ ರಕ್ತದೊತ್ತಡ ನಿಯಂತ್ರಣ. ಆಹಾರದಲ್ಲಿ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡುವುದು. ತಂಬಾಕು ಸೇವನೆ ತ್ಯಜಿಸುವುದು. ಮಧುಮೇಹ ನಿಯಂತ್ರಿಸುವುದು. ಆರೋಗ್ಯಕರ ತೂಕವನ್ನು ಕಾಪಾಡಿಕೊಳ್ಳುವುದು. ಹಣ್ಣುಗಳು ಮತ್ತು ತರಕಾರಿಗಳ ಹೆಚ್ಚು ಸೇವನೆ. ನಿಯಮಿತವಾಗಿ ವ್ಯಾಯಾಮ ಮಾಡುವುದು. ಆಲ್ಕೋಹಾಲ್ ಮಿತವಾಗಿ ಸೇವನೆ.

ಇದನ್ನೂ ಓದಿ: ಕೊರೊನಾ ದಾಳಿಯಿಂದ ಟೈಪ್ 2 ಮಧುಮೇಹದ ಅಪಾಯ ಹೆಚ್ಚು: ಅಧ್ಯಯನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.