ETV Bharat / sukhibhava

ಹೆಚ್ಚು ಕಾಫಿ ಆರೋಗ್ಯಕ್ಕೆ ಒಳ್ಳೆಯದಲ್ಲ; ಆದ್ರೆ, ಈ ಅನುಕೂಲಗಳೂ ಇವೆ! - ರಿಫ್ರೇಶ್​ಮೆಂಟ್​ ಸಿಗುತ್ತದೆ

ಕೆಫೀನ್ ಸೇವಿಸುವುದರಿಂದ ದೇಹದ ಕೊಬ್ಬು ಕರಗುತ್ತದೆ. ಡಯಾಬಿಟೀಸ್​ ಕಡಿಮೆ ಮಾಡಲು ಇದು ಸಹಾಯಕಾರಿ.

Coffee reduces the risk of weight loss and diabetes

author img

By

Published : Mar 16, 2023, 10:49 AM IST

ಲಂಡನ್​: ಬೆಳಗ್ಗೆ ಎದ್ದಾಕ್ಷಣ ಅಥವಾ ಮೂಡ್​ ಕೆಟ್ಟಾಗ ಕಾಫಿ ಕುಡಿಯುವುದರಿಂದ ಒಂದು ರಿಫ್ರೆಶ್​ಮೆಂಟ್​ ಸಿಗುತ್ತದೆ. ಭಾರತೀಯರೂ ಸೇರಿದಂತೆ ಜಗತ್ತಿನೆಲ್ಲೆಡೆ ಕಾಫಿಪ್ರಿಯರ ಸಂಖ್ಯೆ ಕಡಿಮೆ ಏನಿಲ್ಲ. ಕಾಫಿಯಲ್ಲಿ ಕೆಫೀನ್​ ಅಂಶ ಸಮೃದ್ದವಾಗಿದೆ. ಇದು ದೇಹದ ಬೊಜ್ಜು ನಿವಾರಣೆಗೆ ಸಹಾಯ ಮಾಡುತ್ತದೆ. ಟೈಪ್​2 ಡಯಾಬೀಟಿಸ್​ ಅಪಾಯವನ್ನೂ ತಡೆಯಲು ಸಹಾಯ ಮಾಡುತ್ತದೆ ಎಂಬುದನ್ನು ಸಂಶೋಧನೆ ತಿಳಿಸಿದೆ.

ಈ ಸಂಬಂಧ ಇಂಪೀರಿಯಲ್​ ಕಾಲೇಜ್​ ಲಂಡನ್​ ಅಧ್ಯಯನ ನಡೆಸಿದ್ದು, ಬೇಗ ಜೀರ್ಣಕ್ರಿಯೆ ಹೊಂದಿರುವ ಜನರ ರಕ್ತದಲ್ಲಿ ಹೆಚ್ಚಿನ ಮಟ್ಟದ ಕೆಫೀನ್​ ಹೊಂದಿರುತ್ತಾರೆ. ಇದರಿಂದ ಅವರು ಆರೋಗ್ಯ ಲಾಭ ಪಡೆಯಬಹುದು ಎಂದು ತಿಳಿಸಿದ್ದಾರೆ. ಬಿಎಂಜೆ ಮೆಡಿಸಿನ್​ ಜರ್ನಲ್​ನಲ್ಲಿ ವರದಿ ಪ್ರಕಟವಾಗಿದ್ದು, ದೇಹದಲ್ಲಿನ ಕಾಫಿ ಚಯಾಪಚಯಗೊಳ್ಳುವ ವೇಗವು ತೂಕದ ಮೇಲೂ ಪರಿಣಾಮ ಹೊಂದಿರುತ್ತದೆ. ಇದಕ್ಕಾಗಿ 10 ಸಾವಿರ ಯುರೋಪಿಯನ್ ಜನರ ಮೇಲೆ ಸಂಶೋಧನೆ ನಡೆಸಲಾಗಿದೆ. ಇಂಥ ಚಯಾಪಚಯ ಕ್ರಿಯೆಯ ವೇಗದಲ್ಲಿ ಸಿವೈಪಿ1ಎ2 ಮತ್ತು ಎಎಚ್​ಆರ್​​ ಜೀನ್‌ಗಳನ್ನು ಪತ್ತೆ ಮಾಡಲಾಗಿದೆ. ವಂಶವಾಹಿನಿಗಳು ರಕ್ತದಲ್ಲಿನ ಕೆಫೀನ್​ ಮಟ್ಟದಲ್ಲಿ ಹೇಗೆ ಕೆಲಸ ಮಾಡುತ್ತದೆ. ದೇಹದ ಬಿಎಂಐ ಮತ್ತು ದೇಹದ ಕೊಬ್ಬಿನೊಂದಿಗೆ ಸಂಬಂಧ ಹೊಂದಿದೆಯೇ ಎಂದು ಅಧ್ಯಯನದಲ್ಲಿ ಬಳಸಲಾಗಿದೆ.

ಕೆಫೀನ್ ಮೆಟಾಬಾಲಿಸಮ್‌ ವಿಚಾರದಲ್ಲಿ ಆನುವಂಶಿಕ ರೂಪಾಂತರಗಳನ್ನು ಹೊಂದಿರುವ ಜನರು ಸರಾಸರಿ ಕಡಿಮೆ ಕಾಫಿ ಕುಡಿಯುತ್ತಾರೆ. ಆದರೆ ತ್ವರಿತವಾಗಿ ಚಯಾಪಚಯಗೊಳ್ಳುವ ಜನರಿಗಿಂತ ಅವರ ರಕ್ತದಲ್ಲಿ ಹೆಚ್ಚಿನ ಮಟ್ಟದ ಕೆಫೀನ್ ಹೊಂದಿರುತ್ತಾರೆ. ಇದು ಟೈಪ್ 2 ಡಯಾಬೀಟಿಸ್​ನ ಅಪಾಯದ ಅರ್ಧದಷ್ಟು ಕಡಿತವು ತೂಕ ನಷ್ಟದಿಂದ ನಡೆಸಲ್ಪಡುತ್ತದೆ ಎಂದು ಸಂಶೋಧಕರು ಪತ್ತೆ ಮಾಡಿದ್ದಾರೆ.

ಕೆಫೀನ್ ಚಯಾಪಚಯವನ್ನು ಹೆಚ್ಚಿಸುತ್ತದೆ, ಕೊಬ್ಬನ್ನು ಕರಗಿಸುತ್ತದೆ. ಹಸಿವನ್ನೂ ಕಡಿಮೆ ಮಾಡುತ್ತದೆ. ಪ್ರತಿನಿತ್ಯ 100ಮಿಲಿ ಗ್ರಾಂ ಕೆಫೀನ್​ ಸೇವನೆಯು ದಿನಕ್ಕೆ ಸುಮಾರು 100 ಕ್ಯಾಲೋರಿಗಳಷ್ಟು ಶಕ್ತಿ ಹೆಚ್ಚಿಸುತ್ತದೆ ಎಂದು ಅಂದಾಜಿಸಲಾಗಿದೆ. ಕಾಫಿಯಲ್ಲಿನ ಕೆಫೀನ್​ ಬೊಜ್ಜು ಮತ್ತು ಟೈಪ್​ 2 ಡಯಾಬಿಟೀಸ್​ ಅಪಾಯ ತಗ್ಗಿಸುತ್ತದೆ ಎಂದು ಸಂಶೋಧನೆ ತಿಳಿಸಿದರೂ, ಅಧ್ಯಯನಕಾರರು ಅತಿ ಹೆಚ್ಚಿನ ಕಾಫಿ ಸೇವನೆಗೆ ಶಿಫಾರಸು ಮಾಡಿಲ್ಲ. ಇದು ಸಂಶೋಧನೆಯ ಉದ್ದೇಶವಲ್ಲ ಎಂದಿದ್ದಾರೆ. ಸಕ್ಕರೆ ಮತ್ತು ಕೊಬ್ಬನ್ನು ಹೊಂದಿರುವ ಯಾವುದೇ ಕೆಫೀನ್ ಮಾಡಿದ ಪಾನೀಯಗಳು ಧನಾತ್ಮಕ ಪರಿಣಾಮಗಳನ್ನು ಸಮತೋಲನ ಮಾಡುತ್ತದೆ.

ಈ ಹಿಂದಿನ ಅಧ್ಯಯನದಲ್ಲಿ 70-150 ಮಿಲಿ ಗ್ರಾಂ ಕೆಫೀನ್ ಪ್ರಮಾಣ ಹೊಂದಿರುವ ಕಾಫಿಯನ್ನು ದಿನಕ್ಕೆ ಮೂರರಿಂದ ಐದು ಕಪ್​ ಕಾಫಿಯನ್ನು ಕುಡಿಯುವುದರಿಂದ ಟೈಪ್ 2 ಡಯಾಬೀಟೀಸ್​​ ಮತ್ತು ಹೃದಯರಕ್ತನಾಳದ ಕಾಯಿಲೆಯ ಕಡಿಮೆ ಅಪಾಯ ಹೊಂದಿದೆ ಎಂಬ ಸಂಶೋಧನೆ ಪ್ರಕಟಗೊಂಡಿತು. ಈ ಸಂಶೋಧನೆ ಆಧಾರದ ಮೇಲೆ ಅಧ್ಯಯನ ಮಾಡಲಾಗಿದೆ.

ಕಾಫಿಯ ರೂಪದಲ್ಲಿ ಕೆಫೀನ್ ಸೇವಿಸುವುದರಿಂದ ಕೊಬ್ಬು ಕರಗಿ, ವಿಶ್ರಾಂತಿಯೂ ಲಭ್ಯವಾಗುತ್ತದೆ ಎಂಬುದಕ್ಕೆ ಅನೇಕ ಪುರಾವೆಗಳಿದೆ. ಆದರೆ, ಅತಿ ಹೆಚ್ಚು ಅಥವಾ ಇದರ ತಪ್ಪಾದ ಬಳಕೆಯಿಂದಾಗಿ ತೂಕ ಹೆಚ್ಚಾಗಬಹುದು. ಸ್ಥೂಲಕಾಯ ಆಧಾರದ ಮೇಲೆ ಇದನ್ನು ನಿರ್ಧರಿಸಲಾಗದು ಎಂದಿದ್ದಾರೆ.

ಇದನ್ನೂ ಓದಿ: ಮಾನಸಿಕ ಮತ್ತು ದೈಹಿಕ ತೊಂದರೆಗಳಿಗೆ ಕಾರಣವಾಗುತ್ತಿರುವ ಆಟಿಸಂ ಮಕ್ಕಳ ಆರೈಕೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.