ETV Bharat / sukhibhava

ಫಾರ್ಮಾ​ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಲಿದೆ ಕೋಶ, ಜೀನ್​ ಚಿಕಿತ್ಸೆ: ವರದಿ - ಆರೋಗ್ಯ ಕ್ಷೇತ್ರದ ಬೆಳವಣಿಗೆ

ಕೋಶ ಮತ್ತು ಜೀನ್​ ಚಿಕಿತ್ಸೆಯು ಮುಂಬರುವ ವರ್ಷದಲ್ಲಿ ಸ್ಥಾಪಿತ ಚಿಕಿತ್ಸಾ ವಿಧಾನವಾಗಲಿದೆ ಎಂದು ವರದಿ ತಿಳಿಸಿದೆ.

Cell and gene therapy impact on the pharmaceutical industry

author img

By ETV Bharat Karnataka Team

Published : Dec 29, 2023, 7:33 PM IST

ನ್ಯೂಯಾರ್ಕ್​: 2024ರಲ್ಲಿ ಫಾರ್ಮಾಸ್ಯೂಟಿಕಲ್​​ ಉದ್ಯಮದಲ್ಲಿ ಕೋಶ ಮತ್ತು ಜೀನ್​ ಥೆರಪಿ (ಸಿಜಿಟಿ) ಹೆಚ್ಚಿನ ಪರಿಣಾಮ ಬೀರಲಿದೆ ಎಂದು ವರದಿ ಹೇಳಿದೆ. ಈ ಅಧ್ಯಯನ ವರದಿಯನ್ನು 115 ಆರೋಗ್ಯ ವಲಯ ಉದ್ಯಮದ ವೃತ್ತಿಪರರ ಸಮೀಕ್ಷೆ ಆಧರಿಸಿ ತಯಾರಿಸಲಾಗಿದೆ ಎಂದು ಡಾಟಾ ಮತ್ತು ಅನಾಲಿಟಿಕ್ಸ್​ ಕಂಪನಿ ಗ್ಲೋಬಲ್​ಡಾಟಾ ವರದಿ ತಿಳಿಸಿದೆ.

ಶೇ.18ರಷ್ಟು ವೈದ್ಯಕೀಯ ವೃತ್ತಿಪರರು ಸಿಜಿಟಿ ಚಿಕಿತ್ಸೆಯನ್ನು ಮನವರಿಕೆ ಮಾಡಿಕೊಂಡಿದ್ದಾರೆ. ಮುಂದಿನ ವರ್ಷ ಫಾರ್ಮಾ (ಔಷಧ ವಲಯ) ಕ್ಷೇತ್ರದಲ್ಲಿ ಇದು ಪ್ರಾಬಲ್ಯ ಮೆರೆಯಲಿದೆ. ಕೋಶ ಮತ್ತು ಜೀನ್​ ಚಿಕಿತ್ಸೆಯು ನಿಧಾನವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿನ ಗಮನ ಪಡೆಯುತ್ತಿದೆ. ಇದರ ಸಂಪೂರ್ಣ ಸಾಮರ್ಥ್ಯದ ಕುರಿತು ಇನ್ನೂ ಅರಿವಿಗೆ ಬಂದಿಲ್ಲ. 2010ರಲ್ಲೇ ಪ್ರೊಸ್ಟೇಟ್​ ಕ್ಯಾನ್ಸರ್​​ಗೆ ಕೋಶ ಚಿಕಿತ್ಸೆಗೆ ಅನುಮೋದನೆ ಪಡೆಯಲಾಗಿದ್ದು, ಭರವಸೆದಾಯಕ ಚಿಕಿತ್ಸೆಯಾಗಿ ಹೊರಹೊಮ್ಮಿದೆ.

ಕೋಶ, ಜೀನ್​ ಚಿಕಿತ್ಸೆಯು ಮುಂಬರುವ ವರ್ಷದಲ್ಲಿ ಸ್ಥಾಪಿತ ಚಿಕಿತ್ಸಾ ವಿಧಾನವಾಗಲಿದೆ ಎಂದು ಗ್ಲೋಬಲ್​ ಡಾಟಾ ನಿರೀಕ್ಷಿಸಿದೆ. ಉನ್ನತ ಅಭಿವೃದ್ಧಿ, ಉತ್ಪಾದನಾ ವೆಚ್ಚ, ಕ್ಲಿನಿಕಲ್​ ಪ್ರಯೋಗದಲ್ಲಿನ ವಿಫಲತೆಯ ಅಪಾಯ, ಬೆಲೆ ಏರಿಕೆ ಮತ್ತು ಮರು ಪಾವತಿಯ ಒತ್ತಡ ಈ ಹೊಸ ಚಿಕಿತ್ಸೆಯೊಂದಿಗಿದೆ ಎಂದು ತಿಳಿಸಿದೆ.

ಈ ಉದ್ಯಮವು ಹೊರಗುತ್ತಿಗೆಯ ಮೂಲಕ ಹೆಚ್ಚಿನ ಅಭಿವೃದ್ಧಿ ವೆಚ್ಚವನ್ನು ಸರಿದೂಗಿಸಲು ಪ್ರಯತ್ನಿಸಬಹುದು. ಬೇಯರ್ಸ್​ ಘೋಷಣೆ ಇದಕ್ಕೊಂದು ಇತ್ತೀಚಿನ ಉದಾಹರಣೆ. ನವೆಂಬರ್​ 2023ಯಲ್ಲಿ ಚೀನಾದ ಶಾಂಘೈ ಫಾರ್ಮಾಸ್ಯೂಟಿಕಲ್​ ಜೊತೆಗೆ ಬೇಯರ್ಸ್​​ ಸಹಕಾರವನ್ನು ಘೋಷಿಸಿತು. ಸಿಜಿಟಿಗೆ ಮೊದಲ ಚೀನಾದ ಪ್ರಯೋಗಾಲಯವಾಗಿದ್ದು, ಕ್ಯಾನ್ಸರ್​ ಔಷಧ ಅಭಿವೃದ್ಧಿ ಮಾಡಲಿದೆ. ಸಿಜಿಟಿ ಅಭಿವೃದ್ಧಿಗೆ ಚೀನಾದಂತಹ ದೇಶಗಳು ಆಕರ್ಷಣೀಯ ಮಾರುಕಟ್ಟೆಯಾಗಿದೆ.

2029ರ ಹೊತ್ತಿಗೆ ಜಾಗತಿಕ ಸಿಜಿಟಿ ಮಾರುಕಟ್ಟೆಯ ಯೋಜನೆಗಳು 80 ಡಾಲರ್​ ಬಿಲಿಯನ್​ ತಲುಪಲಿದೆ ಎಂದು ವರದಿ ಅಂದಾಜಿಸಿದೆ. ಸೆಲ್​ ಮತ್ತು ಜೀನ್​ ಚಿಕಿತ್ಸೆಯಲ್ಲಿ ಆಂಕೋಲಾಜಿ ಪ್ರಮುಖವಾಗಿದ್ದು, ಇದರಲ್ಲಿ ಹೆಚ್ಚಿನ ಪ್ರಗತಿ ಕಾಣಲಿದೆ. 2029ರಲ್ಲಿ ಆಂಕೋಲಾಜಿ ಕ್ಷೇತ್ರದ ಸಿಜಿಟಿ ಮಾರುಕಟ್ಟೆ ಶೇ.44ರಷ್ಟಿರಲಿದೆ. ಕೋಶ ಮತ್ತು ಜೀನ್ ಚಿಕಿತ್ಸೆಗಳು ಮುಖ್ಯವಾಗಿ ಆಂಕೊಲಾಜಿ ಕ್ಷೇತ್ರದಲ್ಲಿ ಬಳಸಲು ಅನುಮೋದಿಸಲ್ಪಟ್ಟಿದೆ. ಆದರೆ, ಈ ಚಿಕಿತ್ಸೆಯನ್ನು ಆನುವಂಶಿಕ ಕಾಯಿಕೆಗೆ ಹೆಚ್ಚಾಗಿ ಬಳಕೆ ಮಾಡಬಹುದು. ನ್ಯೂರೋ ಡಿಜೆನೆರೇಟಿವ್, ಆಟೋಇಮ್ಯೂನ್ ಮತ್ತು ಹೃದಯರಕ್ತನಾಳದ ಕಾಯಿಲೆಗಳ ಚಿಕಿತ್ಸೆಗೆ ಈ ಸಿಜಿಟಿ ಹೆಚ್ಚಿನ ಪ್ರಯೋಜನ ಹೊಂದಿದೆ. (ಐಎಎನ್​ಎಸ್​)

ಇದನ್ನೂ ಓದಿ: ಅಪರೂಪದ ರೋಗಗಳ ವಿರುದ್ಧ ಹೋರಾಟಕ್ಕೆ ಭಾರತಕ್ಕಿರುವ ಸವಾಲೇನು?: ಕಾರಣ ಬಿಚ್ಚಿಟ್ಟ ವರದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.