ETV Bharat / sukhibhava

ಬೆಕ್ಕುಗಳಿಂದಲೂ ಹರಡಬಹುದು ಕೋವಿಡ್​ ಸೋಂಕು!

ಮನೆಯಲ್ಲಿ ಸಾಕಿದ ಬೆಕ್ಕುಗಳಲ್ಲಿ ಸೋಂಕು ದೃಢಪಟ್ಟರೆ, ಅವು ಸುಲಭವಾಗಿ ಮನೆ ಮಂದಿಯ ಜೊತೆಗೆ ಪರಿಸರಕ್ಕೂ ಹರಡುವ ಸಾಧ್ಯತೆ ಇರುತ್ತದೆ.

Cats can spread Covid-19 infection study

author img

By

Published : Jun 1, 2023, 1:09 PM IST

ನ್ಯೂಯಾರ್ಕ್​: ಕೋವಿಡ್​ ಸೋಂಕಿಗೆ ಕಾರಣವಾಗುವ ಸಾರ್ಸ್​ ಕೋವ್​ 2 ವೈರಸ್​ಗಳನ್ನು ಹರಡುವಲ್ಲಿ ಬೆಕ್ಕುಗಳು ಪ್ರಮುಖ ಪಾತ್ರವಹಿಸುತ್ತವೆ ಎಂದು ಹೊಸ ಅಧ್ಯಯನ ತಿಳಿಸಿದೆ. ಅಲ್ಲದೇ, ವಾತಾವರಣವೂ ಕೂಡ ಸಾಂಕ್ರಾಮಿಕವಾಗುತ್ತದೆ ಎಂದು ಎಚ್ಚರಿಸಿದೆ. ವ್ಯಾಗೆನಿಂಗನ್​ ವಿಶ್ವವಿದ್ಯಾಲಯ ಮತ್ತು ಸಂಶೋಧಕರು 16 ಬೆಕ್ಕುಗಳ ಮೇಲೆ ಈ ಅಧ್ಯಯನ ನಡೆಸಿದ್ದಾರೆ. ನೈಸರ್ಗಿಕವಾಗಿ ಸೋಂಕಿತ ವ್ಯಕ್ತಿಯೊಬ್ಬನಲ್ಲಿದ್ದ ಸಾರ್ಸ್​ ಕೋವ್ ವೈರಸ್​ ಸೋಂಕುಗಳು ಬೆಕ್ಕುಗಳಲ್ಲಿ ಪರೋಕ್ಷವಾಗಿ ಕಂಡು ಬಂದಿವೆ.

ವೈರಸ್​​ಗೆ ನೇರವಾಗಿ ಒಡ್ಡಿಕೊಂಡ ಬೆಕ್ಕುಗಳನ್ನು ಮೂರು ವಾರಗಳ ಕಾಲ ಅಧ್ಯಯನ ನಡೆಸಲಾಗಿದೆ. ನಾಸಾಲ್​ ಮಾದರಿ (ಮೂಗಿನ ದ್ರವ ಪರೀಕ್ಷೆ) ಮತ್ತು ಓರೊಫಾರ್ಂಜಿಯಲ್​ ಮಾದರಿಗಳನ್ನು 3 ಬಾರಿ ತೆಗೆದುಕೊಳ್ಳಲಾಗಿದೆ. ಈ ಅವಧಿಯಲ್ಲಿ ಬಾಯಿ ಮತ್ತು ಗುದನಾಳ ಮಾದರಿಗಳನ್ನು 15 ಬಾರಿ ಪರೀಕ್ಷಿಸಲಾಗಿದೆ. ಬೆಕ್ಕುಗಳ ನಡುವೆ ನೇರ ಮತ್ತು ಪರೋಕ್ಷ ಸಂಪರ್ಕದ ಮೂಲಕ ಸಾರ್ಸ್​ ಕೋವ್​ ಪ್ರಸರಣವನ್ನು ಮೌಲ್ಯಮಾಪನ ಮಾಡಲಾಯಿತು.

ಬೆಕ್ಕುಗಳು ಸಾರ್ಸ್​ ಕೊವ್ 2 ಸೋಂಕಿಗೆ ಒಳಗಾಗುತ್ತವೆ. ಅವು ಇತರೆ ಬೆಕ್ಕುಗಳಿಗೆ ಸೋಂಕು ಹರಡುತ್ತವೆ. ಈ ಮೂಲಕ ಪರಿಸರಕ್ಕೂ ತಗುಲುತ್ತದೆ ಎಂದು ಎಂದು ಜರ್ನಲ್​ ಆಫ್​​​ ಅಮೆರಿಕನ್​ ಸೊಸೈಟಿ ಫಾರ್​ ಮೈಕ್ರೊಬಯಾಲಾಜಿಯಲ್ಲಿ ಪ್ರಕಟಿಸಿದೆ. ವಾತಾವರಣವೂ ಸಾಂಕ್ರಾಮಿಕವಾಗಬಹುದು. ಆದರೆ, ಸಾಂಕ್ರಾಮಿಕವೂ ವೇಗವಾಗಿ ಹೋಗುತ್ತದೆ ಎಂದಿದ್ದಾರೆ.

ಬೆಕ್ಕುಗಳು ಸಾರ್ಸ್​ ಕೋವ್ ಸೋಂಕು ಪ್ರಸರಣವನ್ನು ಸಮರ್ಥವಾಗಿ ಪ್ರಸರಣ ಮಾಡುತ್ತದೆ ಎಂದು ವಾನ್​ ಡೆರ್​ ಪೊಯೆಲ್​ ತಿಳಿಸಿದ್ದಾರೆ. ಬೆಕ್ಕಿನ ಸೋಂಕುಗಳು ಸಾರ್ಸ್​​ ಕೋವ್​ ಮೂಲಕ ಕಲುಷಿತ ವಾತಾವರಣಕ್ಕೆ ಹರಡುತ್ತದೆ. ಇದರ ಪ್ರಯೋಗಾಲಯಕ್ಕೆ ಮನೆಯಲ್ಲಿನ ಬೆಕ್ಕುಗಳನ್ನು ಸಾರ್ಸ್​ ಕೋವ್​ ಸೋಂಕಿಗೆ ಒಳಪಡಿಸಿ, ಅದು ಕುಟುಂಬದಲ್ಲಿ ಹೇಗೆ ಪ್ರಸರ ಮಾಡುತ್ತದೆ ಎಂಬುದನ್ನು ನೋಡಬಹುದು

2022 ರ ಜೂನ್​ನಲ್ಲಿ ಥಾಯ್ಲೆಂಡ್‌ನ ಪ್ರಿನ್ಸ್​ ಆಫ್​​​ ಸೊನಗ್ಕಲ ವಿಶ್ವವಿದ್ಯಾಲಯ ಸಂಶೋಧಕರು, ಮೊದಲ ಬಾರಿಗೆ ಬೆಕ್ಕುಗಳಿಂದ ಮಾನವರಿಗೆ ವೈರಸ್​ ಪ್ರಸರಣ ಬಗ್ಗೆ ತಿಳಿಸಿದರು. ಕೋವಿಡ್​ ಸೋಂಕಿತ ಬೆಕ್ಕು ಸೀನುವುದರಿಂದ 32 ವರ್ಷದ ಆರೋಗ್ಯಯುತ ಮಹಿಳೆ ಆಗಸ್ಟ್​ 2021ರಲ್ಲಿ ಸೋಂಕಿಗೆ ತುತ್ತಾಗಿದ್ದರು. ವಂಶವಾಹಿ ಅಧ್ಯಯನ ಕೂಡ ಸಾರ್ಸ್​ ಕೋವ್​ ವೈರಸ್​ ಅನ್ನು ಬೆಕ್ಕು ತನ್ನ ಮಾಲೀಕರಿಗೆ ಪ್ರಸರಣ ಮಾಡುತ್ತದೆ ಎಂಬ ಹೇಳಿಕೆಯನ್ನು ಬೆಂಬಲಿಸುತ್ತದೆ. ಈ ಸಂಬಂಧ ಎಮರ್ಜಿಂಗ್​ ಇನ್​ಫೆಕ್ಷನ್​ ಡಿಸೀಸ್​ ಜರ್ನಲ್​ನಲ್ಲಿ ಕೂಡ ಪತ್ರಿಕೆ ಪ್ರಕಟವಾಗಿದೆ.

ಮನೆಯಲ್ಲಿ ಸಾಕಿದ ಬೆಕ್ಕಿಗಳು ಕೋವಿಡ್​ ಸೋಂಕಿಗೆ ಒಳಗಾಗಿರುವುದನ್ನು ಬ್ರಿಟನ್​ ವಿಜ್ಞಾನಿಗಳು ಮೊದಲ ಬಾರಿಗೆ 2021ರಲ್ಲಿ ವರದಿ ಮಾಡಿದ್ದಾರೆ. ಬೆಕ್ಕು ಮತ್ತು ನಾಯಿಗಳಲ್ಲಿ ಸಾರ್ಸ್​ ಕೋವ್​ ಅಲ್ಫಾ ವೆರಿಯಂಟ್​ ಪತ್ತೆಯಾಗಿದೆ. ಎರಡು ಬೆಕ್ಕುಗಳು ಮತ್ತು ಒಂದು ನಾಯಿಗಳನ್ನು ಪಿಸಿಆರ್​ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಸಕಾರಾತ್ಮಕವಾಗಿದೆ ಎಂದು ವೆಟರ್ನರಿ ರೆಕಾರ್ಡ್​ ಜರ್ನಲ್​ನಲ್ಲಿ ತಿಳಿಸಲಾಗಿದೆ. ಆದರೆ ಎರಡು ಬೆಕ್ಕುಗಳು ಮತ್ತು ಒಂದು ನಾಯಿ ಹೃದಯ ಕಾಯಿಲೆಯ ಚಿಹ್ನೆಗಳನ್ನು ಅಭಿವೃದ್ಧಿಪಡಿಸಿದ ಎರಡರಿಂದ ಆರು ವಾರಗಳ ನಂತರ ಈ ಪ್ರತಿಕಾಯಗಳು ಪತ್ತೆಯಾಗಿದೆ.

ಇದನ್ನೂ ಓದಿ: ನಿಮಗೆ ಈ ಲಕ್ಷಣವಿದ್ರೆ ದೀರ್ಘಾವಧಿ ಕೋವಿಡ್​ ಇದೆ: ಅಧ್ಯಯನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.