ETV Bharat / sukhibhava

ಫ್ಲೂ ಲಸಿಕೆ ಕೋವಿಡ್ ವಿರುದ್ಧ ಹೋರಾಡಬಲ್ಲದೇ?: ಇಲ್ಲಿದೆ ಸಂಪೂರ್ಣ ಮಾಹಿತಿ - Who requires The Flu Vaccine

ಜ್ವರ ಮತ್ತು ಕೊರೊನಾ ನಡುವಿನ ವ್ಯತ್ಯಾಸ ಹಾಗೂ ಫ್ಲೂ ಲಸಿಕೆ ಕೋವಿಡ್-19 ವಿರುದ್ಧ ಗುರಾಣಿಯಾಗಿ ಕಾರ್ಯನಿರ್ವಹಿಸುತ್ತದೆಯೇ? ಎಂಬ ಬಗ್ಗೆ ಇಂದೋರ್‌ನ ಆಪಲ್ ಆಸ್ಪತ್ರೆಯ ವೈದ್ಯ ಡಾ. ಸಂಜಯ್ ಕೆ.ಜೈನ್ ಮಾಹಿತಿ ನೀಡಿದ್ದಾರೆ.

ಫ್ಲೂ ಲಸಿಕೆ ಕೋವಿಡ್-19 ವಿರುದ್ಧ ಹೋರಾಡಬಲ್ಲದೇ?
author img

By

Published : Dec 15, 2020, 4:59 PM IST

ಕೊರೊನಾ ವೈರಸ್ ಭೀತಿಯ ಮಧ್ಯೆ, ಈ ವರ್ಷ ಫ್ಲೂ ಶಾಟ್‌ನಲ್ಲಿ ಏರಿಕೆ ಕಂಡುಬಂದಿದೆ ಎಂದು ಕೆಲವು ಮಾಧ್ಯಮ ವರದಿಗಳು ತೋರಿಸಿವೆ. ಫ್ಲೂ ಲಸಿಕೆ ಕೋವಿಡ್-19 ವಿರುದ್ಧ ಗುರಾಣಿಯಾಗಿ ಕಾರ್ಯನಿರ್ವಹಿಸುತ್ತದೆ ಎಂಬ ತಪ್ಪು ಅಭಿಪ್ರಾಯದಲ್ಲಿ ಜನರು ಇರುವುದರಿಂದ ಮಾರುಕಟ್ಟೆಯಲ್ಲಿ ಫ್ಲೂ ಲಸಿಕೆಗೆ ಬೇಡಿಕೆ ಇದೆ. ಆದರೆ ಜನರು ಅರ್ಥಮಾಡಿಕೊಳ್ಳಬೇಕಾದ ಅಂಶವೆಂದರೆ ಜ್ವರ ಮತ್ತು ಕೊರೊನಾ ಎರಡು ವಿಭಿನ್ನ ವೈರಸ್‌ಗಳಿಂದ ಉಂಟಾಗುತ್ತದೆ. ಆದ್ದರಿಂದ, ಅವುಗಳ ಲಸಿಕೆಗಳು ಪರಸ್ಪರ ಸಂಪೂರ್ಣವಾಗಿ ಭಿನ್ನವಾಗಿವೆ. ಈ ಬಗ್ಗೆ ಇನ್ನಷ್ಟು ಇಂದೋರ್‌ನ ಆಪಲ್ ಆಸ್ಪತ್ರೆಯವೈದ್ಯ ಡಾ. ಸಂಜಯ್ ಕೆ.ಜೈನ್ ಮಾಹಿತಿ ನೀಡಿದ್ದಾರೆ.

ಜ್ವರ ಮತ್ತು ಕೊರೊನಾ ನಡುವಿನ ವ್ಯತ್ಯಾಸ: ಕೊರೊನಾ ಸೋಂಕು SARS-CoV-2 ವೈರಸ್‌ನಿಂದ ಉಂಟಾಗುತ್ತದೆ. ಆದರೆ ಇನ್​ಫ್ಲುಯೆಂಜಾ ಎ ಮತ್ತು ಬಿ ವೈರಸ್‌ನಿಂದಾಗಿ ಜ್ವರ ಹರಡುತ್ತದೆ.

ಫ್ಲೂ ಲಸಿಕೆ ಕೋವಿಡ್-19 ವಿರುದ್ಧ ಹೋರಾಡಬಲ್ಲದೇ?
ಫ್ಲೂ ಲಸಿಕೆ ಕೋವಿಡ್ ವಿರುದ್ಧ ಹೋರಾಡಬಲ್ಲದೇ?

ಕೋವಿಡ್-19 ಪ್ರಾಥಮಿಕವಾಗಿ ಉಸಿರಾಟದ ಕಾಯಿಲೆಯಾಗಿದ್ದು, ಅಲ್ಲಿ ವೈರಸ್ ಶ್ವಾಸಕೋಶದ ಮೇಲೆ ದಾಳಿ ಮಾಡುತ್ತದೆ. ಆದರೆ ಜ್ವರದಲ್ಲಿ, ವೈರಸ್ ಹೆಚ್ಚಾಗಿ ಮೂಗು ಮತ್ತು ಗಂಟಲಿಗೆ ಸೀಮಿತವಾಗಿರುತ್ತದೆ. ಕೊರೊನಾ ವೈರಸ್ 14-21 ದಿನಗಳವರೆಗೆ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ಆದರೆ ಫ್ಲೂ ವೈರಸ್ ಸುಮಾರು 7 ದಿನಗಳವರೆಗೆ ಉಳಿಯುತ್ತದೆ. ಕೊರೊನಾ ಸಾಮಾನ್ಯ ಜ್ವರಕ್ಕಿಂತ ಹೆಚ್ಚು ತೀವ್ರ ಮತ್ತು ಮಾರಕವಾಗಿದೆ.

ಓದಿ: ಐಐಟಿ-ಎಂನ 79 ಮಂದಿಗೆ ಕೊರೊನಾ: ಆರೋಗ್ಯ ಇಲಾಖೆ ಮಾಹಿತಿ

ಫ್ಲೂ ಲಸಿಕೆ ಕೊರೊನಾ ನಿವಾರಣೆ ಮಾಡುತ್ತದೆಯೇ?: ಇಲ್ಲ. ಫ್ಲೂ ಲಸಿಕೆ ಕೊರೊನಾ ವೈರಸ್ ವಿರುದ್ಧ ಗುರಾಣಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಡಾ. ಸಂಜಯ್ ವಿವರಿಸಿದಂತೆ, ಪ್ರತಿ ವೈರಸ್ ತನ್ನದೇ ಆದ ವಿಭಿನ್ನ ರಚನೆಯನ್ನು ಹೊಂದಿದೆ ಮತ್ತು ನಿರ್ದಿಷ್ಟ ವೈರಸ್‌ಗೆ ಲಸಿಕೆ ತಯಾರಿಸಿದಾಗ, ಅದು ವ್ಯಕ್ತಿಯನ್ನು ಆ ವೈರಸ್‌ನಿಂದ ಮಾತ್ರ ತಡೆಯುತ್ತದೆ. ಉದಾಹರಣೆಗೆ ಜ್ವರ ಅಥವಾ ಹಂದಿ ಜ್ವರಕ್ಕೆ ಲಭ್ಯವಿರುವ ವ್ಯಾಕ್ಸಿನೇಷನ್ ವ್ಯಕ್ತಿಯು ಆ ನಿರ್ದಿಷ್ಟ ವೈರಸ್‌ನಿಂದ ಮಾತ್ರ ಸೋಂಕಿಗೆ ಒಳಗಾಗುವುದನ್ನು ತಡೆಯುತ್ತದೆ ಮತ್ತು ಬೇರೆ ಯಾವುದೇ ವೈರಸ್‌ಗೆ ಪರಿಣಾಮಕಾರಿಯಾಗುವುದಿಲ್ಲ.

ಲಸಿಕೆ ಎಂದರೇನು?: ಲಸಿಕೆ ತಯಾರಿಸುವ ಪ್ರಕ್ರಿಯೆಯು ಪ್ರತಿ ವೈರಸ್‌ಗೆ ಹೆಚ್ಚು ಕಡಿಮೆ ಹೋಲುತ್ತದೆ. ಲಸಿಕೆಗಳಲ್ಲಿ ರೋಗವನ್ನು ಉಂಟುಮಾಡುವ ಅದೇ ರೋಗಾಣುಗಳಿವೆ ಎಂದು ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳು (ಸಿಡಿಸಿ) ವಿವರಿಸುತ್ತದೆ. ಉದಾಹರಣೆಗೆ, ದಡಾರ ಲಸಿಕೆ ದಡಾರ ವೈರಸ್ ಅನ್ನು ಹೊಂದಿರುತ್ತದೆ ಮತ್ತು ಹಿಬ್ ಲಸಿಕೆ ಹಿಬ್ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ. ಕೆಲವು ಲಸಿಕೆಗಳು ರೋಗದ ರೋಗಾಣುಗಳ ಒಂದು ಭಾಗವನ್ನು ಮಾತ್ರ ಹೊಂದಿರುತ್ತವೆ.

ಓದಿ: ಒಂದು ಮಿಲಿಯನ್ ಟೆಲಿ-ಸಮಾಲೋಚನೆ ದಾಖಲಿಸಿದ ‘ಇ-ಸಂಜೀವನಿ ಟೆಲಿಮೆಡಿಸಿನ್’ ಸೇವೆ

ಇದಲ್ಲದೆ, ನಮ್ಮ ದೇಹದಲ್ಲಿ ಲಸಿಕೆಗಳನ್ನು ಸಬ್ಕ್ಯುಟೇನಿಯಲ್ ಆಗಿ ಚುಚ್ಚಲಾಗುತ್ತದೆ ಎಂದು ತಜ್ಞರು ವಿವರಿಸುತ್ತಾರೆ. ಅಂದರೆ ಚರ್ಮದ ಅಡಿಯಲ್ಲಿ ಚುಚ್ಚುಮದ್ದು ನೀಡಲಾಗುತ್ತದೆ. ಚುಚ್ಚುಮದ್ದಿನ ನಂತರ, ಲಸಿಕೆಗಳು ನಮ್ಮ ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತವೆ ಮತ್ತು ವೈರಸ್ ಉಂಟುಮಾಡುವ ರೋಗದ ವಿರುದ್ಧ ಹೋರಾಡಲು ಪ್ರತಿಕಾಯಗಳನ್ನು ಉತ್ಪತ್ತಿ ಮಾಡುತ್ತವೆ. ಪ್ರತಿಕಾಯ ಉತ್ಪಾದನೆಯು 2-4 ವಾರಗಳನ್ನು ತೆಗೆದುಕೊಳ್ಳುತ್ತದೆ. ಅದರ ನಂತರ ನೀವು ನಿರ್ದಿಷ್ಟ ರೋಗದ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಪಡೆಯುತ್ತೀರಿ. ಕೆಲವು ಲಸಿಕೆಗಳಲ್ಲಿ, ರೋಗನಿರೋಧಕ ಶಕ್ತಿ ಒಂದು ಅಥವಾ ಎರಡು ವರ್ಷಗಳವರೆಗೆ ಇರುತ್ತದೆ. ಉದಾಹರಣೆಗೆ, ಹಂದಿ ಜ್ವರ ಲಸಿಕೆಯ ಪ್ರತಿರಕ್ಷೆಯು ಒಂದು ವರ್ಷದವರೆಗೆ ಇರುತ್ತದೆ. ಆದರೆ ಇದುವರೆಗೂ ಕೊರೊನಾ ಲಸಿಕೆಯ ಬಗ್ಗೆ ಅಂತಹ ಯಾವುದೇ ವಿವರಗಳು ತಿಳಿದಿಲ್ಲ.

ಲಸಿಕೆಗಳನ್ನು ಹೆಚ್ಚಾಗಿ ಲೈವ್ ಅಟೆನ್ಯುವೇಟೆಡ್ ಲಸಿಕೆಗಳನ್ನು ಬಳಸಿ ತಯಾರಿಸಲಾಗುತ್ತದೆ. ಅಂದರೆ ದುರ್ಬಲಗೊಂಡ ರೋಗಾಣುಗಳನ್ನು ಬಳಸಿ ತಯಾರಿಸಲಾಗುತ್ತದೆ. ಚುಚ್ಚುಮದ್ದನ್ನು ನೀಡಿದಾಗ ಕೆಲವೊಮ್ಮೆ ಕಡಿಮೆ ತೀವ್ರತೆಯ ಜ್ವರ ಕಾರಣಿಸಿಕೊಳ್ಳಬಹುದು. ಇದಕ್ಕೆ ಸರಳ ಪ್ಯಾರೆಸಿಟಮಾಲ್​ನಿಂದ ಚಿಕಿತ್ಸೆ ನೀಡಬಹುದು. ಅತ್ಯಂತ ಅಪರೂಪದ ಸಂದರ್ಭಗಳಲ್ಲಿ, ಲಸಿಕೆಗೂ ವ್ಯತಿರಿಕ್ತ ಪ್ರತಿಕ್ರಿಯೆಗಳು ಉಂಟಾಗಬಹುದು. ಆದರೆ ಅಂತಹ ಪ್ರಕರಣಗಳ ಶೇಕಡಾವಾರು ಪ್ರಮಾಣವು ಬಹಳ ಕಡಿಮೆ. ವ್ಯಕ್ತಿಯ ದೇಹವು ಈಗಾಗಲೇ ಇಮ್ಯುನೊಕೊಪ್ರೊಮೈಸ್ ಆಗಿದ್ದರೆ, ಒಬ್ಬ ವ್ಯಕ್ತಿಯು ಮೆನಿಂಜೈಟಿಸ್, ನರರೋಗ ಅಥವಾ ಮಯೋಪತಿ ಮುಂತಾದ ನರವೈಜ್ಞಾನಿಕ ಸಮಸ್ಯೆಯನ್ನು ಹೊಂದಿರಬಹುದು ಆದರೆ ಇದು ಲಸಿಕೆಯ ಅಪರೂಪದ ತೊಡಕು.

ಓದಿ: ಕೊರೊನಾ ನಾಗಾಲೋಟ ; ವಿಶ್ವದಾದ್ಯಂತ 7 ಕೋಟಿಗೂ ಅಧಿಕ ಮಂದಿಗೆ ವಕ್ಕರಿಸಿದೆ ವೈರಸ್​!!

ಫ್ಲೂ ಲಸಿಕೆ ಯಾರಿಗೆ ಬೇಕು?: ಡಾ.ಸಂಜಯ್ ಪ್ರಕಾರ, ಜನರು ಜ್ವರಕ್ಕೆ ಲಸಿಕೆ ಹಾಕುವ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಎಲ್ಲರಿಗೂ ಅಲ್ಲದಿದ್ದರೂ ಸಹ, ಹೆಚ್ಚಿನ ಅಪಾಯದಲ್ಲಿರುವ ಜನರಿಗೆ ಫ್ಲೂ ವೈರಸ್ ವಿರುದ್ಧ ಲಸಿಕೆ ಹಾಕುವಂತೆ ನಾನು ಸಂಪೂರ್ಣವಾಗಿ ಸಲಹೆ ನೀಡುತ್ತೇನೆ. ವಯಸ್ಸಾದ ಜನರು, ಮಧುಮೇಹ, ಹೃದ್ರೋಗ, ಬೈ-ಪಾಸ್ ಶಸ್ತ್ರಚಿಕಿತ್ಸೆಗೆ ಒಳಗಾದ ಜನರು, ಮೊಣಕಾಲು ಕಸಿ ರೋಗಿಗಳು, ಡಯಾಲಿಸಿಸ್ ರೋಗಿಗಳು, ಕೀಮೋಥೆರಪಿಗೆ ಒಳಗಾಗುವ ಕ್ಯಾನ್ಸರ್ ರೋಗಿಗಳು, ಹಾಸಿಗೆ ಹಿಡಿದ ರೋಗಿಗಳು ಮುಂತಾದ ಕೆಲವು ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳು ನ್ಯುಮೋನಿಯಾ ಬರುವ ಅಪಾಯವನ್ನು ಹೊಂದಿರುತ್ತಾರೆ. ಆದ್ದರಿಂದ, ಫ್ಲೂ ವ್ಯಾಕ್ಸಿನೇಷನ್ ಅವರಿಗೆ ಹೆಚ್ಚು ಸಹಕಾರಿಯಾಗಿರುತ್ತದೆ. ಇದಲ್ಲದೆ, ಮಕ್ಕಳಿಂದ ಹಿಡಿದು ವಯಸ್ಕರವರೆಗೆ, ಫ್ಲೂ ಲಸಿಕೆಯನ್ನು ಎಲ್ಲರಿಗೂ ಶಿಫಾರಸು ಮಾಡಲಾಗಿದೆ.

ಲಸಿಕೆಗಳು ನಿರ್ದಿಷ್ಟ ವೈರಸ್‌ಗೆ ಮಾತ್ರ ಕಾರ್ಯನಿರ್ವಹಿಸುತ್ತವೆ. ಲಸಿಕೆ ಅಭಿವೃದ್ಧಿ ಸಾಮಾನ್ಯವಾಗಿ 3-5 ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಡಾ. ಸಂಜಯ್ ತಿಳಿಸುತ್ತಾರೆ. ಆದರೆ ಈಗ ಆಧುನಿಕ ತಂತ್ರಜ್ಞಾನ ಮತ್ತು ವೈದ್ಯಕೀಯ ಪ್ರಗತಿಯ ಸಹಾಯದಿಂದ, ಕೋವಿಡ್-19 ವೈರಸ್‌ಗೆ ಲಸಿಕೆಗಳನ್ನು ಬಹಳ ಕಡಿಮೆ ಅವಧಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.