ನವದೆಹಲಿ: ಅಪರೂಪದ ನ್ಯುಮೋನಿಯಾ ವಿರುದ್ಧ ಹೋರಾಡುತ್ತಿದ್ದ ಪುಟ್ಟ ಬಾಲಕನನ್ನು ಪುಣೆ ವೈದ್ಯರು ಬದುಕಿಸಿರುವ ಘಟನೆ ನಡೆದಿದೆ. 150 ದಿನಗಳ ಕಾಲ ವೆಂಟಿಲೇಟರ್ನಲ್ಲಿದ್ದ ಪುಟ್ಟ ಪೋರ ಸೋಂಕಿನ ವಿರುದ್ಧ ಹೋರಾಡಿ ಜಯಿಸಿದ್ದಾನೆ.
ಎರಡೂವರೆ ವರ್ಷದ ಬಾಲಕ ಬಿಲೆಟ್ರಲ್ (ದ್ವಿಪಕ್ಷೀಯ) ನ್ಯುಮೋನಿಯಾದಿಂದ ಬಳಲುತ್ತಿದ್ದ. ಶ್ವಾಸಕೋಶದಲ್ಲಿ ಗಂಭೀರವಾದ ಸೋಂಕು ಉಂಟು ಮಾಡುವ ಜೊತೆಗೆ ಇದು ಊರಿಯೂತ ಮತ್ತು ಗಾಯವನ್ನು ಉಂಟು ಮಾಡುತ್ತದೆ. ಈ ಸೋಂಕಿನ ಹಿನ್ನೆಲೆ ಬಾಲಕನಲ್ಲಿ ಜ್ವರ, ನೆಗಡಿ, ಕೆಮ್ಮು ಮತ್ತು ಉಸಿರಾಟದ ಸಮಸ್ಯೆ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಬರೋಬ್ಬರಿ 150 ದಿನ ಅಂದರೆ ನಾಲ್ಜು ತಿಂಗಳಿಗೂ ಹೆಚ್ಚು ಕಾಲ ಈತನನ್ನು ವೆಂಟಿಲೇಟರ್ ಚಿಕಿತ್ಸೆಗೆ ಒಳಪಡಿಸಲಾಗಿದೆ.
ಸ್ಟ್ರೆಪ್ಟೋಕೊಕಸ್ ನ್ಯುಮೋನಿಯಾ ಬ್ಯಾಕ್ಟೀರಿಯಾದಿಂದ ಈತ ಶ್ವಾಸಕೋಶ ಶೇ 80ರಷ್ಟು ಸೋಂಕಿಗೆ ತುತ್ತಾಗಿದ್ದು, ಎಕ್ಸ್ರೇ ಅಲ್ಲಿ ಕಂಡು ಬಂದಿದೆ. ಶ್ವಾಸಕೋಶದ ಅಂಗಾಂಶದ ಒಳಗೆ ಮತ್ತ ಹೊರಗೆ ರೂಪುಗೊಂಡ ಗಾಳಿಯ ಪಾಕೆಟ್ ಅನ್ನು ಬರಿದಾಗಿಸಲು ಕ್ಯಾತಿಟರ್ಗಳನ್ನು ಸೇರಿಸಲಾಗಿದೆ. ಜೊತೆಗೆ ಈ ಶ್ವಾಸಕೋಶದ ಸುಧಾರಣೆ ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದೆ.
ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪುಣೆಯ ಸೂರ್ಯ ಮದರ್ ಮತ್ತು ಚೈಲ್ಡ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ವೈದ್ಯರು ಮೂರು ತಿಂಗಳ ಕಾಲ ಬಾಲಕನನ್ನು ಮೆಕಾನಿಕಲ್ ವೆಂಟಿಲೇಟರ್ಗೆ ಒಳಪಡಿಸಿದ್ದಾರೆ. ಯಾವುದೇ ನ್ಯುಮೋನಿಯಾ ಪ್ರಕರಣಗಳು ಕೆಟ್ಟದಾಗಿರುತ್ತದೆ. ಅದರಲ್ಲೂ ಈ ಬಾಲಕನ ಪ್ರಕರಣದಲ್ಲಿ ದೀರ್ಘಕಾಲದ ವೆಂಟಿಲೇಷನ್ಗೆ ಒಳಪಡಿಸುವ ಮೂಲಕ ಹೆಚ್ಚಿನ ಸವಾಲುಗಳು ಕೂಡ ಇದ್ದವು ಎಂದು ಬಾಲಕನ ಸ್ಥಿತಿ ಕುರಿತು ವಿವರಿಸಿದ್ದಾರೆ ವೈದ್ಯರಾದ ಅಮಿತ ಕೌಲ್ ತಿಳಿಸಿದ್ದಾರೆ.
ಈ ಅಪಾಯವನ್ನು ಅರಿತ ತಂಡ, ಬಾಲಕನ ಆರೋಗ್ಯ ಸುಧಾರಣೆಗೆ ಸಮಯಕ್ಕೆ ಸರಿಯಾಗಿ ಕಾಳಜಿವಹಿಸಿದರು. ಟ್ರಯ್ಕಿಸ್ಟಮಿ ಸೇರಿದಂತೆ ಅನೇಕ ಪ್ರಕ್ರಿಯೆ ಬಳಿಕ ಪ್ರಕ್ರಿಯೆ ನಡೆಸಲಾಯಿತು. ಈ ಟ್ರಯ್ಕಿಸ್ಟಮಿ ಮೂಲಕ ಶ್ವಾಸನಾಳ ತೆರೆಯುವಿಕೆ ಮತ್ತು ಎದೆ ಟ್ಯೂಬ್ ಪದೆ ಪದೇ ಪರಿಶೀಲನೆ ನಡೆಸಲಾಯಿತು. ಇದೀಗ ಅಂತಿಮವಾಗಿ ಬಾಲಕ ಚೇತರಿಕೆ ಕಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾನೆ ಎಂದು ಮಾಹಿತಿ ನೀಡಿದರು.
ಡಿಸ್ಚಾರ್ಜ್ ಆದ ಬಳಿಕವೂ ಆತನಿಗೆ ಆಮ್ಲಜನಕ ಬೆಂಬಲ ಬೇಕಿದ್ದು, ಪೋಷಕರಿಗೆ ಟ್ರಯ್ಕಿಸ್ಟಮಿ ಕಾಳಜಿವಹಿಸುವ ಕುರಿತು ತಿಳಿಸಿಕೊಡಲಾಯಿತು. ನಿಯಮಿತ ಫಾಲೋ ಅಪ್ ಬಳಿಕ ಹೆಚ್ಚುವರಿ ಎರಡು ತಿಂಗಳ ಬಳಿಕ ಟ್ರಯ್ಕಿಸ್ಟಮಿಯನ್ನು ತೆಗೆಯಲಾಗಿದೆ. ಇದೀಗ ಬಾಲಕ ಆರೋಗ್ಯಯುತವಾಗಿ ಯಾವುದೇ ಸಹಾಯವಿಲ್ಲದೇ, ಸ್ವತಃ ಉಸಿರಾಟ ನಡೆಸಬಹುದು,
ಲಸಿಕೆ ಅಗತ್ಯ: ಶ್ವಾಸಕೋಶದ ಸೋಂಕಿಗನ ತಡೆಯುವಲ್ಲಿ ಲಸಿಕೆ ಅತ್ಯಗತ್ಯ,. ಅದರಲ್ಲೂ ಮಕ್ಕಳಿಗೆ ಐದು ವರ್ಷಕ್ಕೆ ಮುನ್ನ ನ್ಯೂಮೋನಿಯಾದ ಲಸಿಕೆ ನೀಡುವುದು ಅವಶ್ಯವಾಗಿದೆ. ಪ್ರಸ್ತುತ ಈ ಸೋಂಕಿನ ವಿರುದ್ಧ ಹೋರಾಡಲು ಪಿಸಿವಿ13 ಮತ್ತು ಪಿಪಿಎಸ್ವಿ23 ಎಂಬ ಎರಡು ಲಸಿಕೆಗಳನ್ನು ನೀಡಲಾಗುತ್ತಿದೆ.
ಏನಿದು ನ್ಯೂಮೋನಿಯಾ: ಉಸಿರಾಟದ ಸಮಸ್ಯೆ ಉಂಟು ಮಾಡುವ ನ್ಯುಮೀನಿಯಾ ಕಾಯಿಲೆ ಸ್ವಾಸಕೋಶದ ಸೋಂಕಿನ ವಿಧವಾಗಿದೆ. ಈ ಸೋಂಕಿಗೆ ತುತ್ತಾದಾಗ ಶ್ವಾಸಕೋಶದಲ್ಲಿರುವ ಗಾಳಿ ಚೀಲಗಳಲ್ಲಿ ದ್ರವ, ಕೀವುಗಳು ಉಂಟಾಗುತ್ತದೆ. ಬ್ಯಾಕ್ಟೀರಿಯಾ ಅಥವಾ ವೈರಾಣುಗಳಿಂದ ಈ ಸೋಂಕು ಉಂಟಾಗುತ್ತದೆ.
ಇದನ್ನೂ ಓದಿ: ಬೇಸಿಗೆಯ ಡಯಟ್ನಲ್ಲಿ ಈ ಆಹಾರ ಸೇವಿಸಿ ತಂಪಾಗಿರಿ