ETV Bharat / sukhibhava

ವೈದ್ಯರ ಬಳಿ ಹೋಗುವ ಮುನ್ನ ಈ ವಿಷಯಗಳನ್ನು ಮರೆಯದಿರಿ - ಆರೋಗ್ಯ ಮಾಹಿತಿ

ಆರೋಗ್ಯ ಸಮಸ್ಯೆಗಳ ವಿಚಾರವು ತುಂಬಾ ಕಾಳಜಿ ಅಂಶವಾಗಿದೆ. ಈ ಸಂಬಂಧ ವೈದ್ಯರ ಬಳಿ ಸಂಪೂರ್ಣ ಮಾಹಿತಿ ನೀಡಿದಾಗ ಮಾತ್ರ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲಿದೆ.

before-going-to-doctor-need-to-know-all-these-things

author img

By ETV Bharat Karnataka Team

Published : Jan 9, 2024, 12:36 PM IST

ಹೈದರಾಬಾದ್​: ವ್ಯಕ್ತಿಯ ಆರೋಗ್ಯ ಮಾಹಿತಿಗಳ ಕುರಿತು ಇತರೆ ದೇಶಗಳು ಕೇಂದ್ರಿಕೃತ ದಾಖಲೆಗಳನ್ನು ಹೊಂದಿರುವಂತೆ ಭಾರತ ಹೊಂದಿಲ್ಲ. ಇಲ್ಲಿ ಆರೋಗ್ಯ ವಿಮೆ ವೈಯಕ್ತಿಕವಾಗಿದ್ದು, ಸಾರ್ವತ್ರಿಕವಾಗಿಲ್ಲ. ಕೆಲವು ದೊಡ್ಡ ದೊಡ್ಡ ಆಸ್ಪತ್ರೆಗಳು ರೋಗಿಗಳ ಕುರಿತು ಒಂದು ಮಟ್ಟದಲ್ಲಿ ಮಾಹಿತಿ ದಾಖಲಿಸುತ್ತವೆಯೇ ಹೊರತು, ಸಣ್ಣ ಕ್ಲಿನಿಕ್​ಗಳು ಈ ಅಭ್ಯಾಸವನ್ನು ರೂಢಿಸಿಕೊಂಡಿಲ್ಲ. ಈ ಹಿನ್ನೆಲೆ ವೈದ್ಯರ ಭೇಟಿಗೆ ಹೋಗುವ ಮೊದಲು ಕೆಲವು ಮುನ್ನೆಚ್ಚರಿಕೆ ಪಾಲಿಸುವುದು ಒಳಿತು. ಇದು ಇಂದು ನಮ್ಮ ದೇಶದಲ್ಲಿ ಅಗತ್ಯವಾಗಿದೆ.

ಆಲೋಪತಿ, ಸಿದ್ಧ, ಸಹಜ, ಆಯುರ್ವೇದ ಹಲವು ವಿಧದ ಚಿಕಿತ್ಸೆಗಳು ನಮ್ಮ ದೇಶದಲ್ಲಿ ಲಭ್ಯವಿದೆ. ಅನೇಕ ಮಂದಿ ವೈದ್ಯರ ಬಳಿಗೆ ಹೋದಾಗ ಇದುವರೆಗೂ ತಾವು ಅನುಸರಿಸುತ್ತಿದ್ದ ಚಿಕಿತ್ಸೆಗಳ ಬಗ್ಗೆ ತಿಳಿಸಲು ನಿರ್ಲಕ್ಷ್ಯವನ್ನು ಹೊಂದುತ್ತಾರೆ. ಅಷ್ಟೇ ಅಲ್ಲದೇ ಪವಾಡಗಳು ನಡೆಯುತ್ತವೆ ಎಂದಾಕ್ಷಣ ತಕ್ಷಣ ಆ ಚಿಕಿತ್ಸೆಗಳ ಮೊರೆ ಹೋಗುತ್ತೇವೆ. ವಾಟ್ಸಪ್​ನಂತಹ ಸಾಮಾಜಿಕ ಮಾಧ್ಯಮಗಳಲ್ಲಿನ ಮಾಹಿತಿಗಳನ್ನು ಅನುಸರಿಸುತ್ತೇವೆ. ಸತ್ಯಾಂಶಗಳನ್ನು ತಿಳಿಯದೇ ಅದರತ್ತ ಓಡುವ ಗುಂಪೇ ಇದೆ. ಅನೇಕ ಜನರು ತಮ್ಮ ಪರಿಸ್ಥಿತಿ ಹದಗೆಟ್ಟಾಗ, ಯಾವುದೇ ಫಲಿತಾಂಶ ಸಿಗದೇ ಇದ್ದಾಗ ಮತ್ತೆ ಆಸ್ಪತ್ರೆಗಳಿಗೆ ತಿರುಗುತ್ತಾರೆ. ಅಲ್ಲಿಯವರೆಗೆ ತೆಗೆದುಕೊಂಡ ಎಲ್ಲಾ ಚಿಕಿತ್ಸೆಗಳನ್ನು ಬಿಟ್ಟು ಹೊಸ ಚಿಕಿತ್ಸೆಗೆ ಹೋದ ಕುರಿತು ವೈದ್ಯರಿಗೆ ಅನೇಕ ಬಾರಿ ಮಾಹಿತಿಯನ್ನೇ ನೀಡುವುದೇ ಇಲ್ಲ.

ಆದರೆ, ಈ ರೀತಿ ಮಾಡುವುದು ತಪ್ಪು. ಈ ಹಿಂದಿನ ವೈದ್ಯಕೀಯ ಮಾಹಿತಿಗಳ ಸಂಗ್ರಹದೊಂದಿಗೆ ವೈದ್ಯರ ಬಳಿ ಹೋಗಬೇಕು. ಎಷ್ಟೇ ಗೊತ್ತಿರುವ ವೈದ್ಯರಾದರೂ ಅವರು ಎಲ್ಲವನ್ನು ನೆನಪಿನಲ್ಲಿಡಲು ಸಾಧ್ಯವಿಲ್ಲ. ದೀರ್ಘಕಾಲದ ಬಳಿಕ ವೈದ್ಯರ ಭೇಟಿಗೆ ಮುಂದಾಗುತ್ತಿದ್ದರೆ, ಈ ಹಿಂದೆ ನಡೆದ ಸರ್ಜರಿ, ಪರೀಕ್ಷೆ, ತೆಗೆದುಕೊಳ್ಳುತ್ತಿರುವ ಔಷಧ, ಅಲರ್ಜಿಗಳ ಕುರಿತ ಮಾಹಿತಿಯನ್ನು ಹೊತ್ತು ಸಾಗಬೇಕು. ಇವು ಯಾವಾಗ ಬೇಕಾಗುತ್ತದೆ ಎಂಬುದು ನಿಮಗೆ ತಿಳಿದಿರುವುದಿಲ್ಲ. ಹಿಂದಿನ ಅನಾರೋಗ್ಯಗಳು ಪ್ರಸ್ತುತ ಅನಾರೋಗ್ಯದೊಂದಿಗೆ ಸಂಬಂಧವನ್ನು ಹೊಂದಿರಬೇಕು. ಈ ಮಾಹಿತಿಗಳನ್ನು ನೋಡಿದಾಗ ತಕ್ಷಣ ಚಿಕಿತ್ಸೆಯ ಕುರಿತು ನಿರ್ಧಾರಿಸಲು ಸುಲಭವಾಗುತ್ತದೆ. ಅನಗತ್ಯ ಪರೀಕ್ಷೆಯನ್ನು ತಪ್ಪಿಸಬಹುದು.

ಲಸಿಕೆ ಮಾಹಿತಿ: ಲಸಿಕೆಯನ್ನು ಕೇವಲ ಮಕ್ಕಳಿಗೆ ಅಲ್ಲ, ದೊಡ್ಡವರು ಪಡೆಯಬಹುದು. ಸರಿಯಾದ ಸಮಯದಲ್ಲಿ ಲಸಿಕೆಗಳನ್ನು ಪಡೆಯುವುದರಿಂದ 30 ಬಗೆಯ ದಿಢೀರ್​ ಮತ್ತು ದೀರ್ಘಾವಧಿ ರೋಗವನ್ನು ತಡೆಯಬಹುದು. ಲಸಿಕೆಗಳ ಮಾಹಿತಿ ಗೊತ್ತಿದ್ದರೆ, ತಕ್ಷಣಕ್ಕೆ ವೈದ್ಯರು ಇದು ಜ್ವರವಾ ಅಥವಾ ಸೋಂಕಾ ಎಂಬುದನ್ನು ಪತ್ತೆ ಮಾಡಬಹುದು. ಇದು ಮಕ್ಕಳಿಗೆ ಮತ್ತಷ್ಟು ಪ್ರಯೋಜನಕಾರಿಯಾಗಿದೆ.

ವೈದ್ಯರ ಸಮಯವನ್ನು ಪಡೆದು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪಿ. ಇದಕ್ಕಾಗಿ ಮೊದಲೇ ಸಿದ್ಧವಾಗಿರಬೇಕು. ವೈದ್ಯರ ಬಳಿ ಕಾಯುತ್ತಿರುವರು ರೋಗಿಗಳು ಎಂಬುದನ್ನು ಮರೆಯಬಾರದು. ಇದನ್ನು ಬಿಟ್ಟು ನಮ್ಮನ್ನು ಮೊದಲು ಪರೀಕ್ಷಿಸಿ ಅನ್ನೋದು ತಪ್ಪಾಗುತ್ತೆ.

ಅಗತ್ಯ ದಾಖಲೆಯೊಂದಿಗೆ ಸಿದ್ಧರಾಗಿರಿ: ವೈದ್ಯರು ಕೇಳುವ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಮತ್ತು ಸರಿಯಾಗಿ ಉತ್ತರಿಸಿ. ಉದಾಹರಣೆಗೆ ಮೂತ್ರನಾಳದ ಸೋಂಕಿನ ಚಿಕಿತ್ಸೆಗೆ ಹೋದಾಗ ವೈದ್ಯರು ಲೈಂಗಿಕ ಸಂಬಂಧದ ಬಗ್ಗೆ ಕೇಳಬಹುದು. ಈ ಬಗ್ಗೆ ಪ್ರಾಮಾಣಿಕವಾಗಿ ಯಾವುದನ್ನು ಮುಚ್ಚಿಡದೇ ತಿಳಿಸಬೇಕು. ಇದರಿಂದ ಚಿಕಿತ್ಸೆಯ ಅಪಾಯ ಎದುರಾಗುವುದಿಲ್ಲ.

ದೈಹಿಕ ಪರೀಕ್ಷೆಗಳು: ಅನೇಕ ಸಂದರ್ಭದಲ್ಲಿ ಪಡೆಯುವ ಎಕ್ಸ್​ರೇಗಳಿಂದ ಎಲ್ಲಾ ಮಾಹಿತಿಗಳು ವೈದ್ಯರಿಗೆ ತಿಳಿಯಲು ಸಾಧ್ಯವಾಗುವುದಿಲ್ಲ. ಕೆಲವು ಬಾರಿ ವೈದ್ಯರು ಸ್ಪರ್ಶಿಸಿ ಚಿಕಿತ್ಸೆ ನೀಡಬೇಕು. ಇದನ್ನು ನಿರಾಕರಿಸಿದರೆ, ರೋಗ ಪತ್ತೆ ಕಷ್ಟವಾಗಬಹುದು. ಜೊತೆಗೆ ವೈದ್ಯರ ಬಳಿ ಹೋದಾಗ ಸರಿಯಾದ ಬಟ್ಟೆ ಧರಿಸುವುದು ಅಗತ್ಯ. ಉದಾಹರಣೆಗೆ ಕಾಲು ನೋವಿನ ಸಮಸ್ಯೆಗೆ ವೈದ್ಯರ ಬಳಿ ಹೋಗಿ ಬಿಗಿ ಪ್ಯಾಂಟ್​ ಧರಿಸಿದರೆ, ಅದನ್ನು ತೆಗೆಯುವುದು ಕಷ್ಟವಾಗಬಹುದು. ರಕ್ತ ಪರೀಕ್ಷೆಗಳು, ಎಕ್ಸರೇಗಳು ಮತ್ತು ಸ್ಕ್ಯಾನ್‌ಗಳು ರೋಗವನ್ನು ಪತ್ತೆಹಚ್ಚಲು ಸಹಾಯ ಮಾಡುತ್ತವೆಯಾದರೂ, ಅವು ದೈಹಿಕ ಪರೀಕ್ಷೆಗೆ ಪರ್ಯಾಯವಾಗಿರುವುದಿಲ್ಲ.

ವೈದ್ಯರು ಸೂಚಿಸಿದ ಔಷಧಿ ಪಾಲಿಸಿ: ವೈದ್ಯರು ಶಿಫಾರಸು ಮಾಡಿದ ಔಷಧಿಗಳ ಡೋಸೇಜ್​ ಸಂಪೂರ್ಣವಾಗಿ ತೆಗೆದುಕೊಳ್ಳಬೇಕು. ಒಂದು ಡೋಸ್​ ಔಷಧ ತೆಗೆದುಕೊಂಡಾಕ್ಷಣ ರೋಗ ಗುಣಮುಖವಾಗುತ್ತದೆ ಎಂದು ಅಂದಾಜಿಸುವುದು ಬೇಡ. ಇದರಿಂದ ಅದು ಮರುಕಳಿಸಬಹುದು. ವೈದ್ಯರು ಸೂಚಿಸಿದ ಅವಧಿಯವರೆಗೆ ಚಿಕಿತ್ಸೆ ಪಡೆಯಬಹುದು. ಅದರಲ್ಲೂ ಆ್ಯಂಟಿಬಯೋಟಿಕ್​ ಔಷಧದಲ್ಲಿ ಇದು ಕಡ್ಡಾಯವಾಗುತ್ತದೆ. ಇಲ್ಲದೆ ಹೋದರೇ ಬ್ಯಾಕ್ಟೀರಿಯಾಗಳು ಔಷಧಿಗಳಿಗೆ ನಿರೋಧಕವಾಗಬಹುದು ಮತ್ತು ಹಠಮಾರಿಯಾಗಬಹುದು. ಮತ್ತೊಮ್ಮೆ ಈ ಔಷಧಗಳನ್ನು ಶಿಫಾರಸು ಮಾಡಿದಾಗ ಅದು ಸರಿಯಾಗಿ ಕೆಲಸ ಮಾಡದೇ ಇರಬಹುದು.

ದೀರ್ಘಾವಧಿ ರೋಗ ಗುಣಮುಖವಾಗದು: ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಥೈರಾಯ್ಡ್​​ ಕೊರತೆಯಂತಹ ಸಮಸ್ಯೆಗಳನ್ನು ಶಮನ ಮಾಡಲಾಗುವುದು. ಇವುಗಳನ್ನು ನಿಯಂತ್ರಿಸಬಹುದು ಅಷ್ಟೇ. ಔಷಧ ಮತ್ತು ಡಯಟ್​ ಅನ್ನು ಮುಂದುವರೆಸಬಹುದು. ಇದನ್ನು ಅನುಸರಿಸುವಾಗ ಮತ್ತೊಬ್ಬ ವೈದ್ಯರ ಬಳಿ ಹೋಗುವುದು, ರಕ್ತ ಪರೀಕ್ಷೆ ಮಾಡಿದಾಗ ಫಲಿತಾಂಶವೂ ಸಾಮಾನ್ಯವಾಗಬಹುದು. ಇದು ರೋಗವನ್ನು ಉಪಶಮನ ಮಾಡದು. ಮಾತ್ರೆಗಳಿಂದ ಮಾತ್ರವೇ ಈ ರೋಗವನ್ನು ನಿಯಂತ್ರಿಸಬಹುದು. ಔಷಧಗಳನ್ನು ತೆಗೆದುಕೊಳ್ಳುವುದು ನಿಲ್ಲಿಸಿದಾಗ ಇದು ಮತ್ತಷ್ಟು ಕೆಟ್ಟದಾಗಬಹುದು. ಮತ್ತೊಬ್ಬ ವೈದ್ಯರ ಬಳಿ ಹೊಸ ಪರೀಕ್ಷೆಗೆ ಹೋದಾಗ, ಔಷಧಗಳ ಸಂಪೂರ್ಣ ಮಾಹಿತಿಯನ್ನು ನೀಡಬೇಕು. ಇಲ್ಲದೇ ಹೋದಲ್ಲಿ ವೈದ್ಯರು ಎಲ್ಲವೂ ಸರಿ ಇದೆ ಎಂದು ಭಾವಿಸುತ್ತಾರೆ. ಯಾವುದೇ ಔಷಧ ಶಿಫಾರಸು ಮಾಡದೇ ಪರಿಸ್ಥಿತಿ ಹದಗೆಡಬಹುದು.

ಇದೆಲ್ಲಕ್ಕಿಂತ ಮುಖ್ಯವಾಗಿ ಪ್ರಚಾರಗಳು ವಿಶೇಷವಾಗಿ ವಾಟ್ಸಪ್​ನಂತಹ ಸಾಮಾಜಿಕ ಜಾಲತಾಣದ ಮಾಹಿತಿಗಳನ್ನು ನಂಬಬಾರದು. ಆರೋಗ್ಯ ವಿಚಾರದಲ್ಲಿ ಅನೇಕ ಸುಳ್ಳುಗಳನ್ನು ಇವು ಹೊಂದಿರುತ್ತವೆ. ಗೂಗಲ್​ ವೈದ್ಯರು ಕೂಡ ನೈಜವೈದ್ಯರಂತೆ ಅಲ್ಲ ಎಂಬುದನ್ನು ಮರೆಯಬಾರದು.

ಇದನ್ನೂ ಓದಿ: 35 ತಳಿಯ ಬ್ಯಾಕ್ಟೀರಿಯಾ ಪತ್ತೆ; ಇವುಗಳಿಂದ ಮಾನವರಿಗೂ ತಗುಲಬಹುದು ಸೋಂಕು: ವಿಜ್ಞಾನಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.