ETV Bharat / sukhibhava

ಅನಾರೋಗ್ಯಕರ ಆಹಾರದ ಜಾಹೀರಾತು ನಿಷೇಧಿಸಿ; ತಜ್ಞರ ಕರೆ - ಸಂಸ್ಕೃರಿಸಿದ ಆಹಾರಗಳಿಂದ ಭಾರತದಲ್ಲಿ ಹೃದಯ ಸಮಸ್ಯೆ

ಅಲ್ಟ್ರಾ ಸಂಸ್ಕರಿತ ಆಹಾರಗಳನ್ನು ಪ್ರದರ್ಶಿಸುವ ಜಾಹೀರಾತುಗಳನ್ನು ನಿಷೇಧಿಸಬೇಕು. ಇದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

ban advertising of unhealthy food;  experts

author img

By

Published : Apr 25, 2023, 3:35 PM IST

ನವದೆಹಲಿ: ಅನಾರೋಗ್ಯಕರ ಆಹಾರ ಉತ್ಪನ್ನದ ಜಾಹೀರಾತುಗಳನ್ನು ನಿಷೇಧಿಸಬೇಕು. ಈ ಸಂಸ್ಕೃರಿಸಿದ ಆಹಾರಗಳಿಂದ ಭಾರತದಲ್ಲಿ ಹೃದಯ ಸಮಸ್ಯೆ, ಸ್ಟ್ರೋಕ್​, ಕ್ಯಾನ್ಸರ್​, ಮಧುಮೇಹ, ದೀರ್ಘ ಶಾಸ್ತ್ರಕೋಶದಂತಹ ಸಾಂಕ್ರಾಮಿಕವಲ್ಲದ ರೋಗ (ಎನ್​ಸಿಡಿ) ಕಾರಣವಾಗುತ್ತಿದೆ ಎಂದು ತಜ್ಞರು ವಾದ ಮಂಡಿಸಿದ್ದಾರೆ.

ಈ ಕುರಿತು ಸುದ್ದಿ ಸಂಸ್ಥೆಗೆ ಮಾತನಾಡಿರುವ ಹಿರಿಯ ಮಕ್ಕಳ ತಜ್ಞ ಡಾ ಅರುಣ್​ ಗುಪ್ತಾ, ಕಳೆದ ಐದು ವರ್ಷಗಳಲ್ಲಿ ಈ ಸಂಸ್ಕರಿಸಿದ ಆಹಾರ ಉತ್ಪನ್ನಗಳ ಸೇವನೆ ಹೆಚ್ಚಾಗಿದೆ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ. ಆಹಾರ ಅಥವಾ ಪಾನೀಯಗಳು ಮಧುಮೇಹ, ಹೃದಯನಾಳ ಸಮಸ್ಯೆ, ಕ್ಯಾನ್ಸರ್​​, ಖಿನ್ನತೆ, ಕಿಡ್ನಿ ಸಮಸ್ಯೆ ಮುಂತಾದವುಗಳಿಗೆ ಕಾರಣವಾಗುತ್ತಿದೆ ಎಂದಿದ್ದಾರೆ.

ಈ ಎನ್​ಸಿಡಿಯಿಂದಾಗಿ ಶೇ 60ರಷ್ಟು ಸಾವು ಸಂಭವಿಸುತ್ತಿದ್ದು, ಕಳೆದ 20 ವರ್ಷಗಳಿಗಿಂತ ಇದರ ಸಂಖ್ಯೆ ಹೆಚ್ಚಾಗಿದೆ. ಭಾರತದಲ್ಲಿಯೂ ಕಳೆದ ಐದು ವರ್ಷದಲ್ಲಿ ಸ್ಥೂಲಕಾಯದ ದರ ಪುರುಷರು ಮತ್ತು ಮಹಿಳೆಯರಲ್ಲಿ ಹೆಚ್ಚಾಗಿದೆ. ಈ ಹಿನ್ನಲೆ ಇಂತಹ ಅನಾರೋಗ್ಯಕರ ಆಹಾರಗಳ ಜಾಹೀರಾತನ್ನು ನಿಲ್ಲಿಸಬೇಕು. ಕೇವಲ ಮಾರುಕಟ್ಟೆಯಲ್ಲಿ ಆರೋಗ್ಯಯುತ ಆಹಾರಕ್ಕೆ ಅನುಮತಿ ನೀಡಬೇಕು ಹೊರತು ಅನಾರೋಗ್ಯಕರ ಆಹಾರಕ್ಕೆ ಅಲ್ಲ ಎಂದು ಡಾ ಗುಪ್ತಾ ಎಂದು ತಿಳಿಸಿದ್ದಾರೆ.

ಅಲ್ಟ್ರಾ ಸಂಸ್ಕರಿತ ಆಹಾರ ಹಾನಿಕಾರಕ: ಅಲ್ಟ್ರಾ ಸಂಸ್ಕರಿತ ಆಹಾರಗಳು ಮತ್ತು ಪಾನೀಯಗಳು ಕೈಗಾರಿಕಾವಾಗಿ ತಯಾರಿಸಲ್ಪಟ್ಟವುಗಳಾಗಿವೆ. ಇವುಗಳಲ್ಲಿ ರುಚಿ ಮತ್ತು ಎಮ್ಯೂಲ್ಸಿಫೈರ್ಸ್​​ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ಇದು ಸೂಕ್ಷ್ಮಾಣು ಜೀವಿಗಳ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮ ಆಹಾರ ಪ್ಯಾಕೆಟ್​ನಲ್ಲಿ ಐದಕ್ಕಿಂತ ಹೆಚ್ಚು ಪದಾರ್ಥಗಳಿದ್ದಾಗ ಅದು ಅಲ್ಟ್ರಾ ಪ್ರೊಸೆಸ್ಡ್​ ಆಹಾರವಾಗಿರುತ್ತದೆ. ಇದನ್ನು ಲೇಬಲ್​ನಲ್ಲಿ ಯಾವಾಗಲೂ ಓದಬೇಕು ಎಂದಿದ್ದಾರೆ.

ಕೈಗೋರಿಕೋದ್ಯಮದ ಮಾದರಿಗಳು, ಆಹಾರದ ಮ್ಯಾಟ್ರಿಕ್ಸ್​ ಅನ್ನು ನಾಶ ಮಾಡಿ ಅದಕ್ಕೆ ರಾಸಾಯನಿಕ ಸೇರಿಸಿದೆ. ಇದು ದೇಹದಲ್ಲಿ ಊರಿಯುತ ಕ್ಕೆ ಕಾರಣವಾಗುತ್ತದೆ. ಇದೇ ಕೂಡ ಅನೇಕ ಕಾಯಿಲೆಗಳ ಹಿಂದಿರುವ ಕಾರಣ ಎಂದಿದ್ದಾರೆ. ಈ ಆಹಾರದಲ್ಲಿ ಹೆಚ್ಚು ಸಕ್ಕರೆ, ಉಪ್ಪು ಮತ್ತು ಸುವಾಸನೆ ಇದ್ದು, ರುಚಿ ಹೆಚ್ಚಿದ್ದು, ಜನರು ತಿನ್ನುವುದನ್ನು ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಹೆಚ್ಚಿನ ತಿನ್ನುವಿಕೆ ಆಗುತ್ತದೆ. ಪರಿಣಾಮ ಸ್ಥೂಲಕಾಯಕ್ಕೆ ಕಾರಣವಾಗುತ್ತದೆ. ಇದರಿಂದ ಮಧುಮೇಹ ಸೇರಿದಂತೆ ಎನ್​ಸಿಡಿ ಕಾರಣವಾಗುತ್ತದೆ.

ಇತ್ತೀಚಿಗೆ, ಫುಡ್​ ಇನ್​​ಫ್ಲುಯೆಂಜರ್​​ ಬೊರ್ನವಿಟಾದಲ್ಲಿ ಆ್ಯಡೆಡ್​ ಸಕ್ಕರೆ ಮತ್ತು ಬಣ್ಣ ಇದ್ದು, ಇದು ಅನಾರೋಗ್ಯಕ್ಕೆ ಕಾರಣವಾಗುತ್ತದೆ ಎಂದು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿದ್ದರು. ಇದು ವೈರಲ್​ ಆಗುತ್ತಿದ್ದಂತೆ ಅತ ಕ್ಯಾಡಬರಿಯಿಂದ ಬೆದರಿಕೆಯನ್ನು ಪಡೆದರು ಎಂದು ಕೂಡ ಗುಪ್ತಾ ಉಲ್ಲೇಖಿಸಿದರು. ಜನರು ಉತ್ತಮ ಆಹಾರ ಪದ್ದತಿ ರೂಢಿಸಿಕೊಳ್ಳಬೇಕು ಎಂದರೆ, ಅದರಲ್ಲಿ ಉತ್ತಮ ಮಟ್ಟದ ತರಕಾರಿ, ಮಾಂಸಾಹಾರ, ಹಣ್ಣು ಇದ್ದರೆ ಸಾಕು. ಇದಕ್ಕೆ ಹೆಚ್ಚುವರಿಯಾಗಿ ಪೋಷಕಾಂಶದ ಪಾನೀಯ ಸೇವನೆ ಬೇಡ

ಯಾವ ರೀತಿ ಪ್ರಯೋಜನ: ಜನರಲ್ಲಿ ಬೊರ್ನವಿಟಾ/ ಕೊಪ್ಲೆನ್​ನಂತಹ ಪೌಡರ್​ಗಳನ್ನು ಕುಡಿಯುವ ಕ್ರೇಸ್​ ಇದೆ. ಈ ಅನಾರೋಗ್ಯಕರ ಉತ್ಪನ್ನಗಳನ್ನು ಆರೋಗ್ಯಕರ ಎಂಬ ರೀತಿ ಇವುಗಳನ್ನು ಮಾರುಕಟ್ಟೆಯಲ್ಲಿ ಬಿಂಬಿಸಲಾಗಿದೆ. ಅನೇಕರು ತಮ್ಮ ಉತ್ಪನ್ನಗಳನ್ನು ಸೇವಿಸಿದರೆ ಉದ್ದ ಮತ್ತು ಶಕ್ತಿಯುತವಾಗಬಹುದು ಎನ್ನುತ್ತಾರೆ ಆದರೆ, ಹೇಗೆ? ಎಂದು ಪ್ರಶ್ನಿಸಿದ್ದಾರೆ

ಆ್ಯಡೆಡ್​ ಸಕ್ಕರೆ ರಾಸಾಯನಿಕ ಬರೆಸಿದರೆ ಆರೋಗ್ಯಕರ ಹಾಲು ಅನಾರೋಗ್ಯಕರ ಆಗಬಹುದು. ಈ ಆಹಾರಗಳನ್ನು ಮಿತವಾಗಿ ಸೇವನೆ ಮಾಡುವಂತೆ ಕೂಡ ಸಲಹೆ ನೀಡುವುದಿಲ್ಲ. ಕೈಗಾರಿಕೋದ್ಯಮದ ಸಂಸ್ಕರಿತ ಆಹಾರ ಅಥವಾ ಪಾನೀಯಗಳು ಗಂಭೀರ ಆರೋಗ್ಯ ಪರಿಣಾಮವನ್ನು ಹೊಂದಿರುತ್ತವೆ.

20ವರ್ಷದ ಹಿಂದೆ ಇದರ ಹಾನಿಕಾರಕ ಪರಿಣಾಮದ ಬಗ್ಗೆ ಗೊತ್ತಿರಲಿಲ್ಲ. ಆದರೆ, ಇದೀಗ ನಮಗೆ ತಿಳಿದಿದೆ. ಹೀಗಾಗಿ, ಜಾಹೀರಾತಿನಲ್ಲಿ ತೋರಿಸುವ ಆಹಾರ ನಮಗೆ ಹಾನಿಕಾರ ಅವುಗಳನ್ನು ಸೇವಿಸದಿರುವುದು ಉತ್ತಮ. ಇಂತಹ ಜಾಹೀರಾತು ಮಕ್ಕಳನ್ನು ಪ್ರೇರೇಪಿಸುತ್ತದೆ. ಮಕ್ಕಳನ್ನು ಇಂತಹ ಜಾಹೀರಾತಿನಿಂದ ದೂರವಿಡಬೇಕು. ಅದು ಸಾಧ್ಯವಾಗಿಲ್ಲ ಎಂದರೆ, ಅವುಗಳು ಅನಾರೋಗ್ಯಕರ ಎಂದು ತಿಳಿಸಿ ಹೇಳಬೇಕು. ಪೋಷಕರು ಕೂಡ ಈ ಜಾಹೀರಾತಿನ ಮೋಡಿಗೆ ಒಳಗಾಗಬಾರದು ಎಂದು ಕಿವಿಮಾತು ಹೇಳಿದ್ದಾರೆ.

ಇದನ್ನೂ ಓದಿ: ಅಡುಗೆ ಮಾಡುವಾಗ ಉಂಟಾಗುವ ಮಾಲಿನ್ಯದಿಂದ ಹೆಚ್ಚಿನ ಅಪಾಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.