ಹೆಚ್ಚು ರೂಪಾಂತರಗೊಳ್ಳುತ್ತಿರುವ ಓಮ್ರಿಕಾನ್ನ ಹೊಸ BA.2.86 ತಳಿಯು ಜಾಗತಿಕವಾಗಿ ವೇಗವಾಗಿ ಹರಡುತ್ತಿದ್ದು, ಪ್ರಕರಣಗಳ ಸಂಖ್ಯೆ 25ಕ್ಕೆ ಏರಿದೆ. ಆದಾಗ್ಯೂ ಇದರಿಂದ ಹೆಚ್ಚು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದು ತಜ್ಞರು ತಿಳಿಸಿದ್ದಾರೆ.
ಮೂರು ಪ್ರಕರಣಗಳ ವರದಿ ಬಳಿಕ ವಿಶ್ವ ಆರೋಗ್ಯ ಸಂಸ್ಥೆ, ಈ ತಳಿಯನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಘೋಷಿಸಿದೆ. ಅಷ್ಟೇ ಅಲ್ಲದೇ ಈ ತಳಿಯ ರೂಪಾಂತರವನ್ನು ತೀರಾ ಗಮನವಿಟ್ಟು ಪರಿಶೀಲನೆ ನಡೆಸುತ್ತಿದ್ದು, ಇದರ ಹರಡುವಿಕೆ ಮತ್ತು ತೀವ್ರತೆಯನ್ನು ಅರ್ಥ ಮಾಡಿಕೊಳ್ಳಲಾಗುತ್ತಿದೆ ಎಂದಿದೆ.
BA.2.86 ತಳಿಯು ಓಮ್ರಿಕಾನ್ BA.2. ತಳಿಯ ರೂಪವಾಗಿದ್ದು, ಮೊದಲ ಬಾರಿಗೆ ಜುಲೈ 24ರಂದು ಡೆನ್ಮಾರ್ಕ್ನಲ್ಲಿ ಪತ್ತೆಯಾಗಿತ್ತು. ಅಮೆರಿಕ, ಬ್ರಿಟನ್, ಇಸ್ರೇಲ್, ಡೆನ್ಮಾರ್ಕ್, ಸೌತ್ ಆಫ್ರಿಕಾ, ಪೋರ್ಚುಗಲ್, ಥಾಯ್ಲೆಂಡ್ ಮತ್ತು ಸ್ವಿಜರ್ಲೆಂಡ್, ಸ್ವೀಡನ್, ಕೆನಾಡ ಮತ್ತು ಸ್ಕಾಟ್ಲ್ಯಾಂಡ್ನ ಜನರು ಇದರ ಸೋಂಕಿಗೆ ಒಳಗಾಗಿದ್ದಾರೆ.
ಇದು XBB.1.5. ಗೆ ಹೋಲಿಕೆ ಮಾಡಿದರೆ ಸೋಂಕಿನ ನಿರ್ಣಾಯಕ ಭಾಗದ 35 ರೂಪಾಂತರವನ್ನು ಸಾಗಿಸುತ್ತದೆ. ಈ ರೂಪಾಂತರವೂ ಮೂಲ ಓಮ್ರಿಕಾನ್ ರೂಪಾಂತರದ ಸಾಮ್ಯತೆ ಹೊಂದಿದ್ದು, ಇದು ಹೆಚ್ಚಿನ ಸೋಂಕಿನ ಹೆಚ್ಚಳಕ್ಕೆ ಕಾರಣವಾಗಿತ್ತು. ಆದರೆ, BA.2.86 ಅಷ್ಟು ಗಂಭೀರವಾಗಿಲ್ಲ. ಓಮ್ರಿಕಾನ್ ಇತರೆ ಉಪತಳಿಗಳಂತೆ ಇದೆ. ಇದಕ್ಕೆ ಹೆಚ್ಚಿನ ಚಿಕಿತ್ಸೆ ಅವಶ್ಯತೆ ಬೇಡ, ಆ್ಯಂಟಿಬಯೋಟಿಕ್, ವಿಟಮಿನ್ಸ್ ಮತ್ತು ಪೂರಕಗಳು ಈ ಸೋಂಕಿಗೆ ಅವಶ್ಯಕವಾಗಿಲ್ಲ. ಅನೇಕ ಮಂದಿ ಈ ಸೋಂಕಿಗೆ ಒಳಗಾದರೂ, ತಮ್ಮ ಪಾಡಿಗೆ ತಾವೇ ಗುಣಮುಖರಾಗುತ್ತಾರೆ ಎಂದು ದೆಹಲಿ ಮೂಲದ ಹೃದ್ರೋಗ ತಜ್ಞ ಡಾ ದೀಪಕ್ ನಟರಾಜನ್ ಮೈಕ್ರೋಬ್ಲಾಗಿಂಗ್ ತಾಣ ಎಕ್ಸ್ನಲ್ಲಿ ತಿಳಿಸಿದ್ದಾರೆ.
BA.2.86 ಅನೇಕ ಬದಲಾವಣೆಗಳು ದೇಹದ ಪ್ರಬಲವಾದ ಸೋಂಕು ತಡೆಗಟ್ಟುವಿಕೆ ಅಥವಾ ತಟಸ್ಥಗೊಳಿಸುವ ಪ್ರತಿಕಾಯಗಳಿಂದ ಗುರಿಯಾಗುವ ಸ್ಪೈಕ್ ಪ್ರೋಟಿನ್ ಪ್ರದೇಶಗಳಲ್ಲಿದೆ. ಈ ಕಾರಣದಿಂದ ಈ ತಳಿಗಳಿಂದ ಪಾರಾಗುವ ಉತ್ತಮ ಆಯ್ಕೆ ಇದೆ. ಈ ಹಿಂದಿನ ಸೋಂಕು ಮತ್ತು ಲಸಿಕೆ ಬೂಸ್ಟರ್ಗಳಿಂದ ತಟಸ್ಥಗಳೊಳಿಸುವ ಪ್ರತಿಕಾಯಗಳು ಉತ್ತೇಜಿತಗೊಂಡಿದೆ ಎಂದು ನೇಚರ್ ವರದಿ ತಿಳಿಸಿದೆ.
ಹೊಸ ತಳಿಯ ಹೆಚ್ಚಳವೂ ಎಚ್ಚರಿಕೆಯ ಕರೆಗಂಟೆಯಲ್ಲ ಎಂದು ಬ್ರಿಗ್ಟೊನ್ ಯುನಿವರ್ಸಿಟಿಯ ವೈರಾಲಾಜಿಸ್ಟ್ ಡಾ ಸರಗ್ ಪಿಟ್ ತಿಳಿಸಿದ್ದಾರೆ. ಕೆಲವು ವೈರಸ್ಗಳು ಸಾಕಷ್ಟು ಬದಲಾಗುತ್ತದೆ. ಅವುಗಳಲ್ಲಿ ಕೆಲ ಬದಲಾವಣೆಗಳು ವೈರಸ್ಗೆ ಉತ್ತಮವಲ್ಲ. ಆದರೆ, ಅನೇಕವು ತಟಸ್ಥವಾಗಿದೆ. ಇತರರಿಗಿಂತ ಅದು ಸ್ವಲ್ಪ ಭಿನ್ನವೂ ಆಗಿದೆ ಎಂದು ಬಿಬಿಸಿ ರೇಡಿಯೋಗೆ ಪಿಟ್ ಮಾತನಾಡಿರುವುದನ್ನು ಉಲ್ಲೇಖಿಸಲಾಗಿದೆ.
ಕೋವಿಡ್ನ ಇತರೆ ರೂಪಾಂತರದಂತೆ ಇದು ಕೂಡ ಅಪಾಯಕಾರಿ ಎಂದು ನಾನು ನಿರೀಕ್ಷಿಸುವುದಿಲ್ಲ. ಇದು ಸ್ವಲ್ಪ ಅಸಹ್ಯ ಎಂದು ನೆನಪಿಡಬೇಕಿದೆ ಎಂದಿದ್ದಾರೆ. ಕಳೆದ ಎರಡ್ಮೂರು ವರ್ಷದಲ್ಲಿ ನಾವು ನೋಡಿದ ರೂಪಾಂತರಗಳು ವಿಭಿನ್ನವಾಗಿದೆ ಎಂದು ಭಾವಿಸುವುದಿಲ್ಲ. ಇದು ಕೆಲ ವ್ಯಕ್ತಿಗಳಲ್ಲಿ ಕೋವಿಡ್ ಅನ್ನು ವಿಭಿನ್ನವಾಗಿಸಬಹುದು. ಆದರೆ, ಇದರ ಲಕ್ಷಣಗಳು ನಮಗೆ ತಿಳಿದಿರುವಂತೆ ಹೊಸತಲ್ಲ ಎಂದಿದ್ದಾರೆ.
ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿನ ಮಾನಸಿಕ ಆರೋಗ್ಯದ ಚರ್ಚೆಗಳು ಉದ್ಯೋಗದ ಮೇಲೆ ಪರಿಣಾಮ ಬೀರಲಿದೆ: ಅಧ್ಯಯನ