ETV Bharat / sukhibhava

National Bone And Joint Day 2023: ಮಹಿಳೆಯರನ್ನು ಹೆಚ್ಚಾಗಿ ಕಾಡುವ ಮೂಳೆ ಸಮಸ್ಯೆ ಬಗ್ಗೆ ಮೂಡಿಸಬೇಕಿದೆ ಅರಿವು - ಸ್ನಾಯುಗಳ ನಿರ್ವಹಣೆ

ಪ್ರತಿಯೊಬ್ಬರು ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ. ಅದರಲ್ಲೂ ವಿಶೇಷವಾಗಿ 30 ವರ್ಷ ದಾಟಿದ ಬಳಿಕ ಮಹಿಳೆಯರಲ್ಲಿ ಈ ಮೂಳೆಯ ಸಾಂದ್ರತೆ ಹೆಚ್ಚು ಇಳಿಕೆಯಾಗುತ್ತದೆ.

Awareness should be given about Bone problem which mostly bothers women

author img

By

Published : Aug 3, 2023, 9:44 PM IST

ಹೈದರಾಬಾದ್​: ಮಾನವನ ದೇಹ ಮೂಳೆ, ಮಾಂಸದ ಹೊದಿಕೆಯಾಗಿದ್ದು, ಈ ಮೂಳೆಗಳು ದೇಹದ ಅಂಗಾಂಗಗಳ ರಕ್ಷಣೆ, ಸ್ನಾಯುಗಳ ನಿರ್ವಹಣೆ, ಕ್ಯಾಲ್ಸಿಯಂ ಹೆಚ್ಚಿಸುವುದು ಸೇರಿದಂತೆ ಹಲವು ಕಾರ್ಯಾಚರಣೆಗಳನ್ನು ನಡೆಸುತ್ತವೆ. ಬಲವಾದ ಮೂಳೆಗಳ ಅಭಿವೃದ್ಧಿ ಮತ್ತು ನಿರ್ವಹಣೆಯು ಆರೋಗ್ಯದ ವಿಚಾರದಲ್ಲಿ ಅತ್ಯವಶ್ಯಕವಾಗಿದೆ. ಇದೇ ಕಾರಣಕ್ಕೆ ಜನರಿಗೆ ದೇಹದಲ್ಲಿ ಮೂಳೆ ಮತ್ತು ಕೀಲುಗಳ ಸಮಸ್ಯೆ ಕುರಿತು ಅರಿವು ಮೂಡಿಸಿ, ಅದರ ಪ್ರಾಮುಖ್ಯತೆಯನ್ನು ಸಾರಲು ಭಾರತ ಸರ್ಕಾರ ಪ್ರತಿ ವರ್ಷ ಆಗಸ್ಟ್​ 4ರಂದು ರಾಷ್ಟ್ರೀಯ ಮೂಳೆ ಮತ್ತು ಕೀಲು ದಿನವಾಗಿ ಆಚರಿಸಲಾಗುವುದು

ಪ್ರತಿಯೊಬ್ಬರು ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳುವುದು ಅತ್ಯವಶ್ಯಕವಾಗಿದೆ. ಅದರಲ್ಲೂ ವಿಶೇಷವಾಗಿ 30 ವರ್ಷ ದಾಟಿದ ಬಳಿಕ ಮಹಿಳೆಯರಲ್ಲಿ ಈ ಮೂಳೆಯ ಸಾಂದ್ರತೆ ಹೆಚ್ಚು ಇಳಿಕೆಯಾಗುತ್ತದೆ. ಈ ಹಿನ್ನಲೆ ಇದಕ್ಕೆ ಒತ್ತು ನೀಡಬೇಕಿದೆ. ದುರದೃಷ್ಟವಶಾತ್​, ಪುರುಷರಿಗೆ ಹೋಲಿಕೆ ಮಾಡಿದರೆ ಮಹಿಳೆಯರ ಮೂಳೆಗಳು ಅವರ ವಯಸ್ಸಿಗೆ ಅನುಗುಣವಾಗಿರುವುದಕ್ಕಿಂತ ಹೆಚ್ಚಿನ ತೂಕವನ್ನು ನಿರ್ವಹಣೆ ಮಾಡುತ್ತದೆ. ಭಾರತದಲ್ಲಿ ಶೇ 46 ಮಿಲಿಯನ್​ ಮಂದಿ ಅಸ್ಟಿಯೊಪೊರಾಸಿಸಿಸ್​ (ಅಸ್ಥಿರಂಧ್ರತೆ)ಯಿಂದ ಬಳಲುತ್ತಿದ್ದಾರೆ. ಇದು ಅವರ ಮೂಳೆಯನ್ನು ಮತ್ತಷ್ಟು ದುರ್ಬಲ ಮಾಡುತ್ತದೆ. 50 ವರ್ಷದ ಬಳಿಕ ಎರಡರಲ್ಲಿ ಒಬ್ಬ ಮಹಿಳೆ ಈ ಸಮಸ್ಯೆಯಿಂದ ಬಳಲುತ್ತಿರುವುದು ಕಾಣಬಹುದಾಗಿದೆ.

ಮಹಿಳೆಯರಲ್ಲಿ ಈ ಅಸ್ಟಿಯೊಪೊರಾಸಿಸ್​ ಮತ್ತ ಅಸ್ಟಿಯೊಪೆನಿಯಾ ಹೆಚ್ಚಿನ ಅಪಾಯ ಹೊಂದಿದೆ, ಕಾರಣ ಮಹಿಳೆಯರ ಮೂಳೆ ಪುರುಷರ ಮೂಳೆಗಿಂತ ಕಡಿಮೆ ಸಾಂದ್ರೆತ ಮತ್ತು ದಪ್ಪ ಇರುವುದಿಲ್ಲ. ಮಹಿಳೆಯರಲ್ಲಿ ಮೆನೊಪಸ್​ ಅವಧಿ ಬಳಿಕ ಈ ಅಸ್ಟಿಯೊಪೊರಾಸಿಸ್​ ಸಾಮಾನ್ಯವಾಗಿ ಕಾಣಬಹುದು. ಈ ವೇಳೆ ಅವರಲ್ಲಿ ಮೂಳೆಗೆ ಬೆಂಬಲ ನೀಡುವ ಹಾರ್ಮೋನ್​ ಮಟ್ಟ ಕಡಿಮೆಯಾಗುತ್ತದೆ. ಸಾಮಾನ್ಯವಾಗಿ ಇದನ್ನು ನಿಶಬ್ಧ ರೋಗ ಎನ್ನಲಾಗುವುದು. ಅಸ್ಟಿಯೊಪೊರಾಸಿಸ್​​ ಇದರ ಲಕ್ಷಣವನ್ನು ಹೆಚ್ಚಾಗಿ ತೋರಿಸುವುದಿಲ್ಲ. ಇದನ್ನು ಆರಂಭಿಕ ಹಂತದಲ್ಲಿ ಪತ್ತೆ ಮಾಡುವುದು ಕಷ್ಟ. ಆದರೆ, ಈ ಲಕ್ಷಣಗಳು ಅವುಗಳ ಸೂಚನೆಯಾಗಿದ್ದು, ಇವುಗಳನ್ನು ನಿರ್ಲಕ್ಷ್ಯ ಮಾಡಬಾರದಾಗಿದೆ.

ಆಗ್ಗಾಗ್ಗೆ ಮೂಳೆ ಮುರಿತ: ಅನೇಕ ಪ್ರಕರಣದಲ್ಲಿ ಮೂಳೆ ಮುರಿತ ಮತ್ತು ಬಿರುಕು ಕಾಣಿಸುತ್ತದೆ. ಅಸ್ಟಿಯೊಪೊರಾಸಿಸ್​ನ ಆರಂಭಿಕ ಹಂತ ಇದಾಗಿದ್ದು, ಈ ಜನರಲ್ಲಿ ಕಡಿಮೆ ಮೂಳೆ ಸಾಂದ್ರತೆ ಕಂಡು ಬರುತ್ತದೆ.

ಬೆನ್ನು ನೋವು: ಪದೆ ಪದೇ ಬೆನ್ನು ನೋವಿ ಕಾಣಿಸಿಕೊಳ್ಳುವುದು ಕೂಡ ಈ ಸಮಸ್ಯೆ ಆರಂಭಿಕ ಲಕ್ಷಣವಾಗಿದೆ. ಬೆನ್ನು ಹುರಿ ದುರ್ಬಲವಾಗಿ ಸಾಮಾನ್ಯ ಒತ್ತಡ ನಿರ್ವಹಣೆ ಮಾಡಲು ಸಾಧ್ಯವಾಗುವುದಿಲ್ಲ. ಇದು ಮಹಿಳೆಯರಲ್ಲಿ ವಿಶೇಷವಾಗಿ 30 ವರ್ಷದವರಲ್ಲಿ ಕಾಣುತ್ತದೆ. ಈ ವಯಸ್ಸು ಆರಂಭವಾಗುತ್ತಿದ್ದಂತೆ ಮೂಳೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಭಂಗಿ ಬದಲಾವಣೆ: ದುರ್ಬಲ ಮೂಳೆಗಳಿಂದ ಮಹಿಳೆಯ ಭಂಗಿಗಳು ಬದಲಾಗುತ್ತದೆ. ಬೆನ್ನು ಹುರು ದುರ್ಬಲತೆ ಮತ್ತು ಅದರ ಹಾನಿಯಾದಾ ಅದರ ಫಲಿತಾಂಶವಾಗಿ ಭಂಗಿ ಬದಲಾಗುತ್ತದೆ. ಹಲ್ಲು ನಷ್ಟ ಅಥವಾ ಒಸಡಿನ ರಕ್ತ ಸ್ರಾವ: ಕಡಿಮೆ ಮೂಳೆ ಸಾಂದ್ರತೆಯೂ ಹಲ್ಲಿನ ನಷ್ಟಕ್ಕೆ ಅಥವಾ ಒಸಡಿನಲ್ಲಿ ರಕ್ತಸ್ರಾವ ಉಂಟಾಗಲು ಪ್ರಮುಖ ಕಾರಣವಾಗಿದೆ. ಇದು ಕ್ಯಾಲ್ಸಿಯಂ ಕೊರತೆಯಿಂದ ಆಗುತ್ತದೆ. ಇದು ಪರೋಕ್ಷವಾಗಿ ಒಸಡಿನ ಮೂಳೆಯನ್ನು ದುರ್ಬಲ ಮಾಡುತ್ತದೆ.

ಆದಾಗ್ಯೂ, ಮಹಿಳೆಯರಲ್ಲಿ ಕಡಿಮೆ ಮೂಳೆ ಸಾಂದ್ರತೆ ಉಂಟಾಗಲು ನಿರ್ದಿಷ್ಟ ಕಾರಣ ಇಲ್ಲ. ಇದರಲ್ಲಿ ಜೀವನಶೈಲಿ ಪ್ರಮುಖವಾಗಿದೆ. ಅಂತಹ ಕೆಲವು ಕಾರಣಗಳು ಇಲ್ಲಿವೆ.

  • ದೀರ್ಘ ಕೆಲಸದ ಗಂಟೆಗಳು, ಅವಶ್ಯಕತೆಗೆ ಬೇಕಾದ ದೈಹಿಕ ಚಟುವಟಿಕೆ ನಡೆಸದೇ ಇರುವುದು. ಮೂಳೆಯ ಬಿಗಿತನದಿಂದ ಕಾಲಿನಲ್ಲಿ ನೋವು, ಹಿಡಿದ ಅನುಭವ ಆಗುತ್ತದೆ
  • ಸ್ಥೂಲಕಾಯ ಕೂಡ ದುರ್ಬಲ ಮೂಳೆಗಳಿಗೆ ಪ್ರಮುಖ ಕಾರಣವಾಗುತ್ತದೆ. ಅಧಿಕ ತೂಕವೂ ಮೂಳೆ ಮತ್ತು ಕೀಲಿನ ಮೇಲೆ ಹೆಚ್ಚಿನ ಒತ್ತಡ ಹಾಕುತ್ತದೆ
  • ನಿರಂತರ ಧೂಮಪಾನ ಕೂಡ ಮೂಳೆಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಧೂಮಪಾನವೂ ದೇಹದಲ್ಲಿ ಮುಕ್ತ ರಾಡಿಕಲ್ಸ್​ ಅನ್ನು ಉಂಟು ಮಾಡುತ್ತದೆ. ಇದು ಮೂಳೆಗೆ ಮಾತ್ರವಲ್ಲ ಇದು ಶ್ವಾಸಕೋಶ ಇತರೆ ಪ್ರಮುಖ ಅಂಗಾಂಗಗಳ ಮೇಲೆ ಪರಿಣಾಮ ಬೀರುತ್ತದೆ.
  • ಮದ್ಯಪಾನ ಸೇವನೆ ಕೂಡ ಮೂಳೆಗಳಿಗೆ ಅಗತ್ಯವಾಗುವ ಹಾರ್ಮೋನ್​ ಅನ್ನು ಕಡಿಮೆ ಮಾಡುತ್ತದೆ
  • ಅಧಿಕ ಉಪ್ಪು ಸೇವನೆ ಕೂಡ ಮೂಳೆಗಳಿಗೆ ಅಪಾಯಕಾರಿ. ಕಾರಣ ಇದು ಮೂತ್ರದಲ್ಲಿ ಕ್ಯಾಲ್ಸಿಯಂ ಪ್ರಮಾಣವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: Heart Transplant Day: ಯುವ ಜನತೆಯಲ್ಲಿ ಕಾಡುತ್ತಿರುವ ಹೃದಯ ಸಮಸ್ಯೆ; ಹೃದಯ ಕಸಿ ಚಿಕಿತ್ಸೆ ಬಗ್ಗೆ ಮೂಡಿಸಬೇಕಿದೆ ಜಾಗೃತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.