ETV Bharat / sukhibhava

ಭಾರತದಲ್ಲಿ 5.8 ಮಿಲಿಯನ್​ ಮಂದಿಯಲ್ಲಿದೆ ಅಲ್ಝೈಮರ್​ ಸಮಸ್ಯೆ - ದೈನಂದಿನ ಚಟುವಟಿಕೆ ನಿರ್ವಹಣೆಯೇ

ನೆನಪಿನ ಶಕ್ತಿ ನಷ್ಟ, ತಾರ್ಕಿಕ ಚಿಂತನೆ ಕಳೆದುಕೊಳ್ಳುವುದು ಕಡೆಗೆ ದೈನಂದಿನ ಚಟುವಟಿಕೆ ನಿರ್ವಹಣೆಯೇ ಸವಾಲಾಗುತ್ತದೆ ಈ ರೋಗಿಗಳಲ್ಲಿ.

Alzheimers problem is present in 5.8 million people in India

author img

By ETV Bharat Karnataka Team

Published : Sep 22, 2023, 3:56 PM IST

ಬೆಂಗಳೂರು: ಭಾರತದಲ್ಲಿ ಸರಿಸುಮಾರು 5.3ರಿಂದ 8.2 ಮಿಲಿಯನ್​ ಸಂಖ್ಯೆಯ ಜನರು ಅಲ್ಝೈಮರ್​ ಸಮಸ್ಯೆಯಿಂದ ಬಳಲುತ್ತಿರುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ತಿಳಿಸಿದ್ದಾರೆ.

ವಿಶ್ವ ಅಲ್ಝೈಮರ್ ದಿನದ ಹಿನ್ನಲೆ ಈ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು. ಇದೊಂದು ದೀರ್ಘ ಸಮಸ್ಯೆಯಾಗಿದ್ದು, ಮಿದುಳು ಕಾರ್ಯಚಟುವಟಿಕೆ ಮತ್ತು ಸ್ಮರಣೆ ಕೋಶಗಳು ನಿಧಾನವಾಗಿ ಚಿಂತಿಸುವ ಮತ್ತು ಕಾರ್ಯ ನಿರ್ವಹಿಸುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಮಿದುಳಿನ ಕೋಶಗಳು ತಮ್ಮಷ್ಟಕ್ಕೆ ತಾವೇ ಕುಗ್ಗಿ ಸಾವನ್ನಪ್ಪುತ್ತದೆ.

ದೈನಂದಿನ ಬದುಕೆ ಕಷ್ಟ: ವೈಜಾಕ್​ನ ಕಿಮ್ಸ್​ ಐಕಾನ್​ ನರರೋಗ ತಜ್ಞ ಸಿಎಚ್​ ವಿಜಯ್​ ತಿಳಿಸುವಂತೆ, ಅಲ್ಝೈಮರ್​ ಸಮಸ್ಯೆ ಸಾಮಾನ್ಯವಾಗಿ 60ರ ಮಧ್ಯೆದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸಮಯದಲ್ಲಿ ಮಿದುಳು ಹೆಚ್ಚು ಹಾನಿಗೆ ಒಳಗಾಗುತ್ತದೆ. ಫಲಿತಾಂಶವಾಗಿ ನೆನಪಿನ ಶಕ್ತಿ ಕಳೆದುಕೊಳ್ಳುವುದು, ಸ್ವತಂತ್ರವಾಗಿ ಕಾರ್ಯ ನಿರ್ವಹಣೆ, ನಿರ್ಧಾರ ತೆಗೆದುಕೊಳ್ಳಲು ಆಗದೇ ಇರುವ ಪರಿಸ್ಥಿತಿ ಎದುರಾಗುತ್ತದೆ. ಡೆಮನ್ಶಿಯಾ ಮತ್ತು ಅಲ್ಝೈಮರ್​ ರೋಗಿಗಳು ನೋವನ್ನು ಅನುಭವಿಸುತ್ತಾರೆ. ಆದರೆ, ಸರಿಯಾದ ಕಾಳಜಿಯ ಮೂಲಕ ಈ ನೋವನ್ನು ನಿರ್ವಹಣೆ ಮಾಡಬಹುದು ಎನ್ನುತ್ತಾರೆ.

ಆಲ್ಝೈಮರ್​ ರೋಗ ಪತ್ತೆಯಾದ ಮೇಲೆ ರೋಗಿಗಳ ಜೀವಿತಾವಧಿ 8-10 ವರ್ಷ, ಈ ಸಮಸ್ಯೆ 80, 90ರ ವಯಸ್ಸಿನಲ್ಲಿ ಪತ್ತೆಯಾದರೆ, ಅವರ ಜೀವಿತಾವಧಿ ಮತ್ತಷ್ಟು ಕಡಿಮೆ ಇರಲಿದೆ. ಅಲ್ಝೈಮರ್​ನ ಸಾಮಾನ್ಯ ಕಾರಣ ಡೆಮನ್ಶಿಯಾ ಆಗಿದೆ.

ಭಾರತದಲ್ಲಿ ಸುಮಾರು 5.3 ರಿಂದ 8.2 ಮಿಲಿಯನ್​ ಮಂದಿಯಲ್ಲಿ ಅಲ್ಝೈಮರ್​ ಇರುವ ಸಾಧ್ಯತೆ ಇದೆ. ಕಾರಣ ಇದಕ್ಕೆ ಕರ್ಕ್ಯುಮಿನ್ ಎಂಬ ಬಲದಾದ ಉರಿಯುತದ ಗುಣಹೊಂದಿರುವ ಆ್ಯಂಟಿ ಆಕ್ಸಿಡೆಂಟ್​ ಇದರ ವಿರುದ್ಧ ಹೋರಾಡಲು ಬಳಕೆ ಮಾಡಲಾಗಿದೆ. ಭಾರತೀಯರಲ್ಲಿ ಈ ಅಲ್ಝೈಮರ್​ ಸಮಸ್ಯೆ 2005ರಿಂದ ಹೆಚ್ಚಾಗಿದ್ದು, ಇದರ ಹೆಚ್ಚಳಕ್ಕೆ ಪ್ರಮುಖ ಕಾರಣ ಡೆಮನ್ಶಿಯಾವಾಗಿದೆ.

ತಪ್ಪು ಕಲ್ಪನೆಗಳಿವು: ಎಸ್​ಎಲ್​ಜಿ ಆಸ್ಪತ್ರೆಯ ನರ ವೈದ್ಯರಾದ ಪಿ ಶ್ರವಂತಿ ಮಾತನಾಡಿ, ಅಲ್ಝೈಮರ್​ ಸುತ್ತ ಕೆಲವು ತಪ್ಪು ಕಲ್ಪನೆಗಳಿವೆ ಎಂದಿದ್ದಾರೆ. ಇದು ಕೇವಲ ವಯಸ್ಸಾದವರಲ್ಲಿ ಬರುವ ಸಮಸ್ಯೆ ಎನ್ನುವ ಕಲ್ಪನೆ ಇದೆ. ಆದರೆ ದೀರ್ಘ ಸಮಸ್ಯೆಯಾಗಿದ್ದು, ಇದು ಚಿಂತನೆ ಕಡಿಮೆಯಾಗುವ ಮತ್ತು ಸಣ್ಣ ಕಾರ್ಯವನ್ನು ನಡೆಸಲು ಕಷ್ಟವಾಗುವ ಪರಿಸ್ಥಿತಿ ಇದಾಗಿದೆ. ಶೇ 5ರಷ್ಟು ಮಂದಿ ತಮ್ಮ 30, 40, 50 ವಯೋಮಾನದಲ್ಲಿ ಈ ಸಮಸ್ಯೆಯ ಆರಂಭಿಕ ಲಕ್ಷಣಕ್ಕೆ ಒಳಗಾಗುತ್ತಾರೆ. ಇದರ ಮತ್ತೊಂದು ತಪ್ಪು ಕಲ್ಪನೆ ಎಂದರೆ ಇದು ವಯಸ್ಸಿನೊಂದಿಗೆ ಸಂಬಂದಿಸಿದ ಸಮಸ್ಯೆಯಲ್ಲ. ಅಲ್ಝೈಮರ್​​ ಪರಿಹಾರಕ್ಕೆ ಶಾಶ್ವತ ಚಿಕಿತ್ಸೆ ಇಲ್ಲ. ಇದರ ಲಕ್ಷಣವನ್ನು ನಿಧಾನಗೊಳಿಸಬಹುದು. ಚಿಕಿತ್ಸೆಗಳು ಚಿಂತಿಸಲು, ಮಾತನಾಡಲು ಮತ್ತು ಕೆಲವು ನಡುವಳಿಕೆ ಸಮಸ್ಯೆಗೆ ಸಹಾಯ ಮಾಡಬಹುದು.

ಪತ್ತೆಗೆ ಇಲ್ಲ ಸೂಕ್ತ ಚಿಕಿತ್ಸೆ: ಅಮೋರ್​ ಆಸ್ಪತ್ರೆಯ ನರ ತಜ್ಞ ಶುಭಾಂಗ್ನಿ ಠಾಕೂರ್​ ಮಾತನಾಡಿ, ಅಲ್ಝೈಮರ್​ ಪತ್ತೆ ನಿರ್ಣಯಯಿಸುವ ನಿರ್ದಿಷ್ಟ ರಕ್ತ ಪರೀಕ್ಷೆ ಭಾರತದಲ್ಲಿ ಲಭ್ಯವಿಲ್ಲ. ಪಿಇಟಿ ಸ್ಕಾನ್​, ಸಿಟಿ ಅಥವಾ ಎಂಆರ್​ಐ ಮೂಲಕ ಕ್ಲಿನಿಕಲ್​ ವಿಶ್ಲೇಷಣೆ ನಡೆಸಿ ಅಲ್ಝೈಮರ್​ ಮೌಲ್ಯಮಾಪನ ನಡೆಸಲಾಗುವುದು. ಇದು ಖಿನ್ನತೆ ಅಥವಾ ಇತರೆ ಸಮಸ್ಯೆಗಳ ಲಕ್ಷಣಗಳಾ ಎಂಬ ಬಗ್ಗೆ ಕೂಡ ಪರಿಶೀಲನೆ ನಡೆಸಲಾಗುವುದು.

ಅಲ್ಝೈಮರ್​ ಸಮಸ್ಯೆಗೆ ಪ್ರಮುಖ ಕಾರಣ, ಮಿದುಳಿನ ಕೋಶದದ ಸುತ್ತ ಅಸಬ್ಬಂದ ಪ್ರೋಟಿನ್​ ಬೆಳವಣಿಗೆ. ಅಮ್ಲೋಯ್ಡ್​​ ರೀತಿಯ ಪ್ರೋಟಿನ್​ ಮಿದುಳಿನ ಕೋಶದಲ್ಲಿ ಸಂಗ್ರಹವಾಗುವುದು ಇದು ಕೋಶಗಳ ಮೇಲೆ ಪರಿಣಾಮ ಬೀರುತ್ತದೆ. ಇಂತಹ ರೋಗಿಗಳಿಗೆ ಅವಶ್ಯ ಸಹಾಯ, ನಿಯಮಿತ ವಿರಾಮ, ಆರೋಗ್ಯಕರ ಆಹಾರ ಆಯ್ಕೆ , ಆರೈಕೆದಾರರ ಕಾಳಜಿ ಅಗತ್ಯವಾಗಿದೆ ಎನ್ನುತ್ತಾರೆ ಸೆಂಚುರಿ ಆಸ್ಪತ್ರೆಯ ಇಂಟರ್ನಲ್​ ಮೆಡಿಸಿನ್​ ವೈದ್ಯೆ ಶ್ರದ್ಧಾ ಸಂಗಾನಿ. (ಐಎಎಎನ್​ಎಸ್​)

ಇದನ್ನೂ ಓದಿ: ಅಲ್ಝೈಮರ್​ ಎಂದರೇನು? ಇದು ಮದ್ದಿಲ್ಲದ ರೋಗ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.