ಸಮೃದ್ಧ ಫ್ಲವನೊಲ್ಸ್ ಗುಣ ಹೊಂದಿರುವ ಟೀ, ಚಿಯಾ ಸೀಡ್ (ಕಾಮ ಕಸ್ತೂರಿ ಬೀಜ), ಸೇಬು ಮತ್ತು ಡಾರ್ಕ್ ಚಾಕೋಲೆಟ್ ಸೇವನೆಯಿಂದಾಗಿ ವಯೋಸಹಜ ಮರೆವಿನ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಹೊಸ ಅಧ್ಯಯನ ತಿಳಿಸಿದೆ. ಕೊಲಂಬಿಯಾ ಮತ್ತು ಬರ್ಮಿಂಗ್ ಹ್ಯಾಮ್ ಹಾಗೂ ಹಾರ್ವರ್ಡ್ ಮಹಿಳೆಯರ ಆಸ್ಪತ್ರೆ ಅಧ್ಯಯನ ನಡೆಸಿದೆ. 60 ವರ್ಷ ಮೇಲ್ಪಟ್ಟವರಲ್ಲಿ ನೆನಪಿನ ಶಕ್ತಿ ನಷ್ಟ ಸುಧಾರಣೆಯಲ್ಲಿ ಈ ಜೈವಿಕ ಆಹಾರ ಪದ್ಧತಿಗಳು ಸ್ಮರಣೆಯನ್ನು ಪುನರ್‌ಸ್ಥಾಪಿಸಲು ಸಹಾಯ ಮಾಡುತ್ತದೆ ಎಂದು ತೋರಿಸಿದೆ.
ಅಧ್ಯಯನದಲ್ಲಿ ಭಾಗಿಯಾದವರಲ್ಲಿ ಕಡಿಮೆ ಫ್ಲಾವನೊಲ್ ಡಯಟ್ ಅವರ ಅರಿವಿನ ಸುಧಾರಣೆ ಹೆಚ್ಚಿಸಲು ಸಹಾಯಕವಾಗಿದೆ ಎಂದು ತೋರಿಸಿದೆ. ವಯಸ್ಸಾದವರಲ್ಲಿ ಸುಧಾರಿತ ಫ್ಲಾವನಾಲ್-ಭರಿತ ಆಹಾರಗಳು ಅಥವಾ ಪೂರಕಗಳನ್ನು ಬಳಸುವ ಸಾಧ್ಯತೆ ಹೆಚ್ಚಿಸುತ್ತದೆ ಎಂದು ಕೊಲಂಬಿಯಾ ಯೂನಿವರ್ಸಿಟಿ ವಗೆಲೋಸ್ ಕಾಲೇಜ್ ಆಫ್ ಫಿಸಿಶಿಯನ್ಸ್ ಮತ್ತು ಸರ್ಜನ್‌ನ ನ್ಯೂರೋಸೈಕಾಲಜಿಯ ಪ್ರಾಧ್ಯಾಪಕ ಆಡಮ್ ಬ್ರಿಕ್ಮನ್ ತಿಳಿಸಿದ್ದಾರೆ.
ಮಿದುಳಿಗೆ ಬೇಕು ಪೋಷಕಾಂಶ: ಅಭಿವೃದ್ದಿ ಹೊಂದುತ್ತಿರುವ ಮಿದುಳಿಗೆ ಸರಿಯಾದ ಬೆಳವಣಿಗೆಗೆ ಪೋಷಕಾಂಶ ಅಗತ್ಯವಿರುವಂತೆ, ವಯಸ್ಸಾದ ಮೆದುಳಿಗೂ ಅತ್ಯುತ್ತಮ ಪೋಷಕಾಂಶದ ಅಗತ್ಯವಿರುತ್ತದೆ. ಈ ಶತಮಾನದಲ್ಲಿ ನಾವು ದೀರ್ಘಕಾಲ ಜೀವಿಸುತ್ತಿದ್ದು, ವಿಭಿನ್ನ ಪೋಷಕಾಂಶಗಳು ವಯಸ್ಸಾದ ಮೆದುಳಿಗೆ ಅವಶ್ಯಕತೆ ಇದೆ ಎಂದು ಅಧ್ಯಯನ ತಿಳಿಸಿದೆ. ನಮ್ಮ ಅಧ್ಯಯನದ ವನಾಲ್ ಸೇವನೆಯ ಬಯೋಮಾರ್ಕರ್‌ಗಳನ್ನು ಇತರ ಸಂಶೋಧಕರು ಹೆಚ್ಚುವರಿ ಗುರುತಿಸಲು ಟೆಂಪ್ಲೇಟ್ ಆಗಿ ಬಳಸಬಹುದು ಎಂದಿದ್ದಾರೆ ವಿಜ್ಞಾನಿಗಳು.
ಮೂರು ವರ್ಷಗಳ ಕಾಲ ಅಧ್ಯಯನ: ಅಧ್ಯಯನಕ್ಕಾಗಿ 3,500 ಆರೋಗ್ಯಯುತ ವಯಸ್ಕರನ್ನು ಆಯ್ಕೆ ಮಾಡಿ ಅವರಿಗೆ ಪ್ರತಿನಿತ್ಯ ಮೂರು ವರ್ಷಗಳ ಕಾಲ ಫ್ಲಾವನಾಲ್ ಪೂರಕಗಳನ್ನು ನೀಡಲಾಗಿದೆ. ಈ ಪೂರಕಗಳು 80 ಮಿಲಿಗ್ರಾಂ ಎಪಿಕಾಟೆಚಿನ್ ಜೊತೆಗೆ 500 ಮಿಲಿಗ್ರಾಂ ಫ್ಲವನೊಲ್ಸ್ ಹೊಂದಿದೆ. ಇದನ್ನು ಆಹಾರದ ಜೊತೆ ಸೇವನೆ ಮಾಡಲು ತಿಳಿಸಲಾಗಿದೆ.
ಭಾಗವಹಿಸುವವರು ಹಿಪೊಕ್ಯಾಂಪಸ್‌ನಿಂದ ನಿಯಂತ್ರಿಸಲ್ಪಡುವ ಅಲ್ಪಾವಧಿಯ ಸ್ಮರಣೆಯ ಪ್ರಕಾರಗಳನ್ನು ನಿರ್ಣಯಿಸಲು ತಮ್ಮ ಸ್ವಂತ ಮನೆಗಳಲ್ಲಿ ವೆಬ್ ಆಧಾರಿತ ಚಟುವಟಿಕೆಗಳ ಸರಣಿಯನ್ನು ನಡೆಸಿದರು. ಒಂದು, ಎರಡು ಮತ್ತು ಮೂರು ವರ್ಷಗಳ ನಂತರ ಪರೀಕ್ಷೆಗಳನ್ನು ಪುನರಾವರ್ತಿಸಲಾಯಿತು. ಇತರೆ ಮಂದಿಗೆ ಹೋಲಿಕೆ ಮಾಡಿದಾಗ ಸಾಕಷ್ಟು ಫ್ಲವನಾಲ್ಗಳೊಂದಿಗೆ ಆರೋಗ್ಯಕರ ಆಹಾರವನ್ನು ಸೇವಿಸುವವರಿಗೆ, ನೆನಪಿನ ಶಕ್ತಿ ಸ್ವಲ್ಪಮಟ್ಟಿಗೆ ಸುಧಾರಿಸುತ್ತವೆ.
ಫಲಿತಾಂಶ: ಕಳಪೆ ಆಹಾರವನ್ನು ಸೇವಿಸುವ ಮತ್ತು ಕಡಿಮೆ ಮಟ್ಟದ ಫ್ಲಾವನಾಲ್‌ಗಳನ್ನು ಹೊಂದಿರುವ ಭಾಗವಹಿಸುವವರು ಸ್ಮರಣೆ 10.5ರಷ್ಟು ಸುಧಾರಣೆ ಕಂಡಿದೆ. ಬೇಸ್‌ಲೈನ್‌ನಲ್ಲಿ ಅವರ ಮೆಮೊರಿಗೆ ಹೋಲಿಸಿದರೆ ಶೇಕಡಾ 16 ರಷ್ಟು ಹೆಚ್ಚಳವನ್ನು ಕಂಡು ಬಂದಿದೆ. ವಯಸ್ಸಾದಂತೆ ನೆನಪಿನ ಶಕ್ತಿ ಕಳೆದು ಕೊಳ್ಳಲು ಪ್ಲವನೊಲ್ಸ್ಗಳು ಪ್ರಮುಖ ಕಾರಣವಾಗಿದೆ. ಈ ಹಿನ್ನಲೆ ಇದರ ಸೇವನೆಯೂ ನೆನಪಿನ ಶಕ್ತಿ ಅಭಿವೃದ್ದಿ ಪಡಿಸುವಲ್ಲಿ ಸಾಕಷ್ಟು ಪ್ರಯೋಜವನ್ನು ನೀಡುತ್ತದೆ ಎಂದು ಅಧ್ಯಯನ ತಿಳಿಸಿದೆ.
ಇದನ್ನೂ ಓದಿ: ಪೂರಕಗಳಿಂದ ಆರೋಗ್ಯ ಪ್ರಯೋಜನವಿಲ್ಲ, ಹಣ್ಣುಗಳನ್ನು ಸೇವಿಸಿ: ವಿಜ್ಞಾನಿಗಳ ಕರೆ