ವಯಸ್ಸಾದಂತೆ ಸೌಂದರ್ಯ ಮಾಸುವುದು ಸಹಜ. ವಯಸ್ಸಿನೊಂದಿಗೆ ಮುಖದಲ್ಲಿ ಸಾಕಷ್ಟು ಬದಲಾವಣೆಗಳು ಕಾಣುತ್ತವೆ. ವಿಶೇಷವಾಗಿ ಕಪ್ಪು ವರ್ತುಲ, ಕಲೆ, ನೆರಿಗೆ ಸುಕ್ಕುಗಳು. ಅದರಲ್ಲೂ ಕಣ್ಣಿನ ಸುತ್ತ ಏಳುವ ಈ ಕಪ್ಪು ವರ್ತುಲಗಳು ಅನೇಕರ ಮುಖದ ಅಂದವನ್ನು ಹಾಳು ಮಾಡುತ್ತದೆ. ಕಪ್ಪು ವರ್ತುಲಗಳ ನಿವಾರಣೆಗೆ ಅನೇಕ ತ್ವಚೆ ಮತ್ತು ಆರೋಗ್ಯ ಕಾಳಜಿವಹಿಸುವುದು ಸಹಜ. ಈ ಕಪ್ಪು ವರ್ತುಲ ನಿವಾರಣೆಗೆ ಸಲಹೆಗಳು ಪೀಳಿಗೆಯಿಂದ ಪೀಳಿಗೆಗೆ ದಾಟಿ ಬಂದಿರುವುದು ಸುಳ್ಳಲ್ಲ. ಸಣ್ಣ ಮೇಕಪ್ ದಿನಚರಿಯನ್ನು ಇದಕ್ಕೆಂದೇ ರೂಪಿಸಿಕೊಳ್ಳಬೇಕಾಗುತ್ತದೆ.
ಕಪ್ಪು ವರ್ತುಲ ವಯಸ್ಸಿನ ಜೊತೆಗೆ ಇತರೆ ಸಮಸ್ಯೆಗಳಿಂದಲೂ ಅವಧಿಗೆ ಮುನ್ನವೇ ಮುಖದಲ್ಲಿ ಕಾಣಿಸಿಕೊಳ್ಳುತ್ತದೆ. ಸುಡುವ ಸೂರ್ಯು ಜೊತೆಗೆ ಮಾಲಿನ್ಯವೂ ಇದಕ್ಕೆ ಕೊಡುಗೆ ನೀಡುತ್ತದೆ ಎಂದರೆ ತಪ್ಪಲ್ಲ. ಮುಖ ಮೇಲೆ ಏಳುವ ಕಪ್ಪು ಕಪ್ಪು ಕಲೆಗಳಿಂದ ಕಿರಿಕಿರಿ ಕೂಡ ಆಗುತ್ತದೆ. ಇಂತಹ ಕಪ್ಪು ಕಪ್ಪು ಚುಕ್ಕೆಗಳ ನಿವಾರಣೆಗೆ ಮೇಕಪ್ ವೇಳೆ ಫೌಂಡೇಷನ್ ಬಳಕೆ ಮಾಡಬಹುದು. ಇದರಿಂದ ಈ ಕಲೆಗಳು ಕಾಣದಂತೆ ಮುಚ್ಚಬಹುದು.
ಇನ್ನು ಮೇಕಪ್ ಮಾಡುವಾಗ ಮುಖದ ಸುತ್ತ ಐಸ್ ಕ್ಯೂಬ್ ಸಹಾಯದಿಂದ ಚೆನ್ನಾಗಿ ಮಸಾಜ್ ಮಾಡಿ. ಇದರಿಂದ ಮುಖದ ಮೃದುತ್ವತೆ ಹೆಚ್ಚುತ್ತದೆ. ಚರ್ಮದ ಕಲೆಗಳು ಮುಖದಲ್ಲಿ ಹೆಚ್ಚಾಗಿ ಕಾಣದಂತೆ ಆಗುತ್ತದೆ. ಇದಕ್ಕಿಂತ ಹೆಚ್ಚಾಗಿ, ಕಪ್ಪು ವರ್ತುಲ, ಗೆರೆಗಳು ಕಣ್ಮರೆಯಾಗಿ ಮುಖ ತಾಜಾತನದಿಂದ ಕೂಡಿರುವಂತೆ ಕಾಣುತ್ತದೆ. ಹಾಗೆ ಮೇಕಪ್ಗೆ ಮುಖ ಹೊಂದಿಕೊಳ್ಳುವಂತೆ ಆಗುತ್ತದೆ.
ಇನ್ನು ಗಾಢವಾದ ಕಪ್ಪು ವರ್ತುಲಗಳು ಕಣ್ಣಿನ ಅಂದ ಹಾಳು ಮಾಡುತ್ತಿದ್ದೆ, ಮಲಗುವ ಮುನ್ನ ಪ್ರತಿನಿತ್ಯ ತಪ್ಪದೇ ಕಣ್ಣಿನ ಕ್ರೀಮ್ ಹಚ್ಚಿ ಮಲಗುವುದನ್ನು ಮರೆಯಬೇಡಿದೆ.
ಇನ್ನು ಹಲವು ಮಂದಿ ತಮ್ಮ ತೋಳು ಮತ್ತು ಕಂಕುಳಲ್ಲಿ ಸ್ಟ್ರೆಚ್ ಮಾರ್ಕ್ಸ್ ಅನ್ನು ಹೊಂದಿರುತ್ತಾರೆ. ಕೈಯಲ್ಲಿನ ಕೊಬ್ಬ ಕರಗಿದ ಬಳಿಕವೂ ಇದರ ಕಲೆಗಳು ಹಾಗೇ ಉಳಿದಿರುತ್ತದೆ. ಇದರ ನಿವಾರಣೆ ಪ್ರತಿನಿತ್ಯ ಮಾಶ್ಚರೈಸರ್ ಅನ್ನು ಕಡಿಮೆ ಪ್ರಮಾಣದಲ್ಲಿ ಹಚ್ಚಿ. ಹೊರಗೆ ಹೋಗುವಾಗ ಮಾಶ್ಚರೈಸರ್ ಅನ್ನು ಹಚ್ಚಿ ಅದಕ್ಕೆ ದ್ರವ ರೀತಿಯ ಫೌಂಡೇನಷನ್ ಹಚ್ಚಿ ಬಳಿಕ ಕಾನ್ಸಿಲರ್ ಹಾಕಿ ಚೆನ್ನಾಗಿ ಬ್ಲೆಡ್ ಮಾಡುವುದರಿಂದ ಅದು ಅಸಹ್ಯವಾಗಿ ಕಾಣುವುದನ್ನು ತಪ್ಪಿಸಬಹುದಾಗಿದೆ.
ಪ್ರತಿದಿನ ಬೆಳಗ್ಗೆ ಸುಂದರವಾಗಿ ಕಾಣಲು ಹಿಂದಿನ ದಿನ ರಾತ್ರಿ ಮಲಗುವ ಮುನ್ನ ಮುಖದ ಬಗ್ಗೆ ಕಾಳಜಿ ವಹಿಸಿ, ಕೆಲವು ರಾತ್ರಿ ತ್ವಚೆ ಆರೈಕೆ ಕ್ರಮವನ್ನು ಮಾಡಿರಿ. ಇದಕ್ಕಿಂತ ಮುಖ್ಯವಾಗಿ ರಾತ್ರಿ ಮೇಕಪ್ ತೆಗೆಯದೇ ಮಲಗಬೇಡಿ. ತ್ವಚೆಯ ಅಂದ ಕಾಪಾಡಲು ದಿನದ ಕೆಲವು ನಿಮಿಷಗಳನ್ನು ಮೀಸಲಿಡಿ, ನಿಮ್ಮ ತ್ವಚೆ ಬಗ್ಗೆ ಆರೈಕೆ ತೋರಿ, ಪ್ರೀತಿಸಿ.
ಇದಕ್ಕಿಂತ ಮುಖ್ಯವಾಗಿ ಉತ್ತಮ ನಿದ್ದೆಯನ್ನು ಮರೆಯಬಾರದು. ತ್ವಚೆಯ ಕಪ್ಪು ವರ್ತಲ, ಕಪ್ಪು ಚುಕ್ಕೆಗೆ ಪ್ರಮುಖ ಕಾರಣದಲ್ಲಿ ನಿದ್ದೆ ಅಭಾವವೂ ಇದೆ. ಈ ಹಿನ್ನೆಲೆ ರಾತ್ರಿ ತಡವಾಗಿ ಮಲಗುವ, ಕಡಿಮೆ ನಿದ್ದೆಯನ್ನು ಮಾಡುವ ಅಭ್ಯಾಸ ಮಾಡಬೇಡಿ.
ಇದನ್ನೂ ಓದಿ: World Chocolate Day: ರುಚಿ ಜೊತೆ ಮನತಣಿಸುವ ಚಾಕಲೇಟ್ ಹುಟ್ಟು ಹೇಗಾಯ್ತು ಗೊತ್ತೇ?