ETV Bharat / sukhibhava

ಗಂಭೀರ ಮಾನಸಿಕ ಆರೋಗ್ಯ ಸಮಸ್ಯೆಯಲ್ಲಿ ಎಡಿಎಚ್​ಡಿ ಅಪಾಯದ ಅಂಶಗಳು; ಅಧ್ಯಯನ

ಎಡಿಎಚ್​ಡಿ ಎಂಬುದು ಮಕ್ಕಳಲ್ಲಿ ಮತ್ತು ಹದಿವಯಸ್ಸಿನ ನರಾಭಿವೃದ್ಧಿ ಮಾನಸಿಕ ಪರಿಸ್ಥಿತಿಯಾಗಿದೆ.

ADHD is an independent risk factor for mental health issue

author img

By ETV Bharat Karnataka Team

Published : Dec 30, 2023, 6:46 PM IST

ಲಂಡನ್​: ಮಕ್ಕಳಲ್ಲಿನ ಏಕಾಗ್ರತೆ ಕೊರತೆ/ ಅಧಿಕ ಚಟುವಟಿಕೆ ಅಸ್ವಸ್ಥತೆ (ಎಡಿಎಚ್​ಡಿ) ಗಂಭೀರ ಮಾನಸಿಕ ಆರೋಗ್ಯಕ್ಕೆ ಕಾರಣವಾಗುವ ಏಕೈಕ ಅಪಾಯದ ಅಂಶವಾಗಿದೆ ಎಂದು ಸಂಶೋಧನೆ ತಿಳಿಸಿದೆ.

ಎಡಿಎಚ್​ಡಿ ಎಂಬುದು ಮಕ್ಕಳಲ್ಲಿ ಮತ್ತು ಹದಿವಯಸ್ಸಿನ ನರಾಭಿವೃದ್ಧಿ ಮಾನಸಿಕ ಪರಿಸ್ಥಿತಿಯಾಗಿದೆ. ಮಕ್ಕಳು ಮತ್ತು ಹದಿಹರೆಯದವರಲ್ಲಿ ಜಗತ್ತಿನಾದ್ಯಂತ ಇದರ ಹರಡುವಿಕೆ ಸುಮಾರು ಶೇ 5 ಮತ್ತು ವಯಸ್ಕರಲ್ಲಿ ಶೇ 25ರಷ್ಟಿದೆ.

ಎಡಿಎಚ್​ಡಿಯು ಮನಸ್ಥಿತಿ ಮತ್ತು ಆತಂಕ ಅಸ್ವಸ್ಥತೆಯೊಂದಿಗೆ ಸಂಬಂಧ ಹೊಂದಿದೆ ಎಂದು ಅಧ್ಯಯನದಲ್ಲಿ ಗಮನಿಸಲಾಗಿದೆ. ಆದರೆ, ಇದು ಮಾನಸಿಕ ಅಸ್ವಸ್ಥತೆಯ ಆರೋಗ್ಯದ ಜೊತೆಗೆ ಸಾಂದರ್ಭಿಕ ಸಂಬಂಧ ಹೊಂದಿದೆಯಾ ಎಂಬುದರ ಬಗ್ಗೆ ತಿಳಿದಿಲ್ಲ.

ಬಿಎಂಜೆ ಮೆಂಟಲ್​ ಹೆಲ್ತ್​​ ಜರ್ನಲ್​ನಲ್ಲಿ ಈ ಅಧ್ಯಯನ ಪ್ರಕಟವಾಗಿದ್ದು, ಮುಕ್ತ ಓದಿಗೆ ಲಭ್ಯವಿದೆ. ಇದರಲ್ಲಿ ಎಡಿಎಚ್​ಡಿ ಖಿನ್ನತೆ, ಆಘಾತದ ಬಳಿಕ ಒತ್ತಡ ಅಸ್ವಸ್ಥತೆ ಮತ್ತು ತಿನ್ನುವಿಕೆ ಸಮಸ್ಯೆ ಮತ್ತು ಆತ್ಮಹತ್ಯೆಯಂತಹ ಘಟನೆಗಳೊಂದಿಗೆ ಸಂಬಂಧವನ್ನು ಹೊಂದಿದೆ. ಜರ್ಮನಿಯ ಆಕ್ಸ್​​ಬರ್ಗ್​​ ಯುನಿವರ್ಸಿಟಿಯಲ್ಲಿ ಈ ಸಂಶೋಧನೆಯನ್ನು ಪ್ರಕಟಿಸಲಾಗಿದ್ದು, ಆರೋಗ್ಯ ವೃತ್ತಿಪರರು, ನಂತರ ಈ ಅಸ್ವಸ್ಥತೆಗಳನ್ನು ನಿವಾರಿಸುವ ಪ್ರಯತ್ನದಲ್ಲಿ ಜಾಗರೂಕರಾಗಿರಬೇಕು.

ತಂಡವೂ ಎಡಿಎಚ್​ಡಿ ಮತ್ತು ಏಳು ಅಸ್ವಸ್ಥತೆಗಳಾದ ಮೇಜರ್​ ಕ್ಲಿನಿಕಲ್​ ಡಿಪ್ರೆಷನ್​, ಎರಡು ವ್ಯಕ್ತಿತ್ವದ ಅಸ್ತಸ್ಥತೆ, ಆತಂಕದ ಅಸ್ವಸ್ಥತೆ, ಸ್ಕಿಜೋಫ್ರೊನಿಯ, ಪಿಟಿಎಸ್​ಡಿ, ಅನೊರೆಕ್ಸಿಯ ನೆರವೊಸಾ ಮತ್ತು ಒಂದು ಆತ್ಮಹತ್ಯೆಯ ಪ್ರಯತ್ನಗಳೊಂದಿಗೆ ಸಂಬಂಧವನ್ನು ಸ್ಥಾಪಿಸಿದೆ.

ಎಡಿಎಚ್​ಡಿ ಮತ್ತು ಬೈಪೋಲಾರ್​ ಡಿಸಾರ್ಡರ್​, ಆತಂಕ ಅಥವಾ ಸ್ಕಿಜೋಫ್ರೋನಿಯಾ ನಡುವೆ ಯಾವುದೇ ಸಾಂಧರ್ಭಿಕ ಸಂಬಂಧದ ಪುರಾವೆ ತೊರೆದಿಲ್ಲ ಎಂದು ತಂಡ ಪತ್ತೆ ಮಾಡಿದೆ. ಆದರೆ ಅನೊರೆಕ್ಸಿಯಾ ನೆರ್ವೊಸಾ ನಡುವೆ ಶೇ 28ರಷ್ಟು ಸಾಂದರ್ಭಿಕ ಸಂಬಂಧದೊಂದಿಗಿನ ಅಪಾಯ ಹೊಂದಿದೆ. ಎಡಿಎಚ್​ಡಿ ಸಾಂದರ್ಭಿಕ ಮತ್ತು ಪ್ರಮುಖ ಕ್ಲಿನಿಕಲ್​ ಖಿನ್ನತೆಗೆ ಕಾರಣವಾಗಿದೆ ಎಂಬುದಕ್ಕೆ ಸಾಕ್ಷಿ ಲಭ್ಯವಾಗಿದೆ.

ಖಿನ್ನತೆಯೊಂದಿಗೆ ನೇರವಾದ ಸಾಂದರ್ಭಿಕ ಸಂಬಂಧದ ಜೊತೆಗೆ ಆತ್ಮಹತ್ಯೆ ಪ್ರಯತ್ನ ಮತ್ತು ಪಿಟಿಎಸ್​ಡಿ ಉಗಮಕ್ಕೆ ಕಾರಣವಾಗಿದೆ ಎಂದು ಸಂಶೋಧನೆ ತಿಳಿಸಿದೆ. ಎಡಿಎಚ್​ಡಿ ಜೊತೆಗೆ ಹೆಚ್ಚಿನ ರಕ್ಷಣಾತ್ಮಕ ಚಿಕಿತ್ಸೆಯ ಅಗತ್ಯವನ್ನು ಆರೋಗ್ಯ ವೃತ್ತಿಪರರು ಉತ್ತೇಜಿಸಬೇಕಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಈ ಅಧ್ಯಯನವೂ ಮನೋವೈಜ್ಞಾನಿಕ ಅಸ್ವಸ್ಥತೆಯ ಹೊಸ ದಾರಿಗೆ ಬೆಳಕನ್ನು ನೀಡುತ್ತದೆ. ಎಡಿಎಚ್​ಡಿ ಹೊಂದಿರುವ ರೋಗಿಗಳು ಮಾನಸಿಕ ಅಸ್ವಸ್ಥತೆ ನಿಟ್ಟಿನಲ್ಲಿ ನಿರ್ವಹಣೆ ಮಾಡಬೇಕಿದೆ. ಅಗತ್ಯವಿದ್ದಲ್ಲಿ ಇದರ ತಡೆಗೆ ಕ್ರಮವಹಿಸಬೇಕಿದೆ ಎಂದು ಅಧ್ಯಯನ ತಿಳಿಸಿದೆ. (ಐಎಎನ್​ಎಸ್​)

ಇದನ್ನೂ ಓದಿ: ನಗರದ ಮಕ್ಕಳಲ್ಲಿ ಅಸ್ತಮಾ ಹೆಚ್ಚಿಸುವ ವಾಯು ಮಾಲಿನ್ಯ; ಲ್ಯಾನ್ಸೆಟ್​ ವರದಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.