ETV Bharat / sukhibhava

ಮಕ್ಕಳ ಶಾಲಾ ರಜಾದಿನಗಳು ಸ್ಕ್ರೀನ್​ ಟೈಂನಲ್ಲಿ ಕಳೆದು ಹೋಗದಿರಲಿ

ಶಾಲಾ ರಜಾದಿನಗಳಲ್ಲಿ ಮಕ್ಕಳು ಅನಾರೋಗ್ಯಕರ ನಡುವಳಿಕೆಯನ್ನು ತೋರುತ್ತಾರೆ. ಕಡಿಮೆ ಕ್ರಿಯಾಶೀಲತೆ, ಹೆಚ್ಚು ಕುಳಿತಿರುವುದು, ಹೆಚ್ಚು ಜಂಕ್​ಫುಡ್​ ತಿನ್ನುವುದು ಹೆಚ್ಚು ಸಮಯ ಸ್ಕ್ರೀನ್​ಮುಂದೆ ಕಳೆಯುತ್ತಾರೆ.

Adding good structure to school holidays is great way to keep kids active during break

author img

By

Published : Apr 27, 2023, 11:33 AM IST

ವಾಷಿಂಗ್ಟನ್​: ಪ್ರಾಥಮಿಕ ಶಾಲಾ ಮಕ್ಕಳು ರಜೆ ದಿನಗಳಲ್ಲಿ ಹೆಚ್ಚು ಸ್ಕ್ರೀನ್​ ಟೈಂನಲ್ಲಿ (ಮೊಬೈಲ್​, ಟಿವಿ) ಸಮಯ ಕಳೆಯುವುದರಿಂದ ಅವರು ಹೆಚ್ಚು ಕ್ರಿಯಾಶೀಲವಾಗಿರುವುದಿಲ್ಲ. ಇದರಿಂದ ಅವರು ಶಾಲೆ ಸಮಯಕ್ಕಿಂತ ಕೆಟ್ಟ ಆಹಾರ ಕ್ರಮ ಹೊಂದಿರುತ್ತಾರೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ಕುರಿತು ಪಿಡಿಯಾಟ್ರಿಕ್​ ಒಬೆಸಿಟಿಯಲ್ಲಿ ಜರ್ನಲ್​ನಲ್ಲಿ ಪ್ರಕಟವಾಗಿದೆ. ಈ ಸಂಬಂಧ ಗ್ರೇಡ್​ 4 ಮತ್ತು 5ರ 358 ಪ್ರಾಥಮಿಕ ಶಾಲಾ ಮಕ್ಕಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಈ ವೇಳೇ ಒಂದು ಗಂಟೆಗೂ ಹೆಚ್ಚು ಸಮಯ ಅವರು ಸ್ಕ್ರೀನ್​ ಟೈಮ್​ನಲ್ಲಿ ಕಾಲ ಕಳೆಯುತ್ತಾರೆ ಎಂದಿದ್ದಾರೆ.

ಅನಾರೋಗ್ಯಕರ ಆಹಾರ ಪದ್ಧತಿ: ರಜಾದಿನಗಳಲ್ಲಿ ಮಕ್ಕಳು ಕಡಿಮೆ ಮತ್ತು ಹೆಚ್ಚು ಅನಾರೋಗ್ಯಕರ ಆಹಾರವನ್ನು ಸೇವಿಸುತ್ತಾರೆ. ಇದರಿಂದ ಅವರಲ್ಲಿ ತೂಕ ಹೆಚ್ಚಳ ಮತ್ತು ಕಳಪೆ ಆರೋಗ್ಯಕ್ಕೆ ಕಾರಣವಾಗುತ್ತದೆ. ಮಕ್ಕಳು ರಜೆ ಆರಂಭವಾಗುತ್ತಿದ್ದಂತೆ ತಮ್ಮ ದೈನಂದಿನ ಶಾಲಾ ಚಟವಟಿಕೆಗೆಯಿಂದ ಬ್ರೇಕ್​ ಸಿಗುತ್ತದೆ ಎಂಬ ಉತ್ಸುಕರಾಗಿದ್ದಾರೆ. ಇದರಿಂದ ಪ್ರಯೋಜನವಾದರೂ ಮಕ್ಕಳಿಗೆ ಸ್ವಲ್ಪ ಹಿನ್ನಡೆ ಉಂಟಾಗಲಿದೆ ಎಂದು ಡಾ ವ್ಯಾಟ್ಸನ್​ ತಿಳಿಸಿದ್ದಾರೆ.

ಶಾಲಾ ರಜಾದಿನಗಳಲ್ಲಿ ಮಕ್ಕಳು ಅನಾರೋಗ್ಯಕರ ನಡುವಳಿಕೆಯನ್ನು ತೋರುತ್ತಾರೆ. ಕಡಿಮೆ ಕ್ರಿಯಾಶೀಲತೆ, ಹೆಚ್ಚು ಕುಳಿತಿರುವುದು, ಹೆಚ್ಚು ಜಂಕ್​ಫುಡ್​ ತಿನ್ನುವುದು ಹೆಚ್ಚು ಸಮಯ ಸ್ಕ್ರೀನ್​ಮುಂದೆ ಕಳೆಯುತ್ತಾರೆ. ಶಾಲೆಯಿಂದ ರಜೆ ಪಡೆದಾಗ ಗುಣಮಟ್ಟದ ಸಮಯವನ್ನು ಮೋಜು ಮಸ್ತಿಯಲ್ಲಿ ಕಳೆಯಬೇಕು. ಆದರೆ, ಅವರು, ಹೆಚ್ಚು ಸಕ್ರಿಯವಾಗಿ, ಸಾಕಷ್ಟು ಉತ್ತಮ ವ್ಯಾಯಾಮ ಹೊಂದುವುದು ಅಗತ್ಯವಾಗುತ್ತದೆ.

ಸ್ಕ್ರೀನ್​ ಟೈಂನಲ್ಲಿರಲಿ ಮಿತಿ: ನಾವು ರಜಾ ಸಮಯದಲ್ಲಿ ಮಕ್ಕಳನ್ನು ನಿಯಮಿತ ಕ್ರಿಯಾಶೀಲರಾಗಿ, ಯೋಜಿತ ಊಟ ಮತ್ತು ಸ್ನಾಕ್ಸ್​ ಬ್ರೇಕ್​ಗಳನ್ನು ರೂಢಿಮಾಡುವುದು ಅವಶ್ಯಕವಾಗಿದೆ. ಇದರ ಕೊತೆಗೆ ಮಕ್ಕಳಿಗೆ ಸ್ಕ್ರೀನ್​ ಟೈಂ ಕೂಡ ಮಿತಿ ಹೇರುವುದು ಅವಶ್ಯ. ಇದರಿಂದ ಅವರಿಗೆ ಆರೋಗ್ಯಕರ ನಡುವಳಿಕೆ ಪ್ರಯೋಜನವನ್ನು ಈಗ ಅಥವಾ ಭವಿಷ್ಯದಲ್ಲಿ ನೀಡಬಹುದು.

ಆಸ್ಟ್ರೇಲಿಯದಲ್ಲಿ ನಾಲ್ಕರಲ್ಲಿ ಒಂದು ಮಕ್ಕಳು ಅಂದರೆ ಶೇ 25ರಷ್ಟು ಮಕ್ಕಳು ಸ್ಥೂಲಕಾಯದ ಸಮಸ್ಯೆಗೆ ಒಳಗಾಗಿದ್ದು, ಕಳಪೆ ಆರೋಗ್ಯ ಮತ್ತು ಯೋಗಕ್ಷೇಮ ಹೊಂದಿದ್ದು, ಹಾಗೇ ಶಾಲೆಯಲ್ಲಿ ಕೆಟ್ಟ ಪ್ರದರ್ಶನ ಕಂಡಿದ್ದಾರೆ.

ಯುನಿಸಾನ ಪ್ರೊ ಕಾರೊಲ್​ ಮಹೆರ್​ ಹೇಳುವಂತೆ ಮಕ್ಕಳ ಹೆಚ್ಚು ಕ್ರಿಯಾಶೀಲರಾಗಿಲ್ಲದಕ್ಕೆ ಸ್ಕ್ರೀನ್​ ಟೈಂ ಕಾರಣವಾಗಿದ್ದು, ಇದು ಅಪಾಯವೂ ಆಗಿದೆ. ಅನೇಕ ಪೋಷಕರಿಗೆ ಈ ಸ್ಕ್ರೀನ್​ ಟೈಂ ನಿರ್ವಹಣೆ ಮಾಡುವುದು ದೊಡ್ಡ ಸವಾಲಾಗಿದೆ. ಇದು ಕೇವಲ ರಜಾ ದಿನದಲ್ಲಿ ಮಾತ್ರವಲ್ಲ. ಎಲ್ಲಾ ಸಮಯದಲ್ಲೂ ಆಗಿದೆ ಎಂದು ಪ್ರೊ ಮಹೆರ್​ ತಿಳಿಸಿದ್ದಾರೆ.

ನಿಗದಿತ ಅವಧಿಗೂ ಹೆಚ್ಚಾಗಿ ನಿಷ್ಕ್ರಿಯವಾಗಿರುವುದು, ಯಾರ ಆರೋಗ್ಯಕ್ಕೂ ಒಳಿತಲ್ಲ. ಅದರಲ್ಲೂ ಮಕ್ಕಳ ಆರೋಗ್ಯಕ್ಕಂತೂ ಅಲ್ಲವೇ ಅಲ್ಲ. ಹೀಗಾಗಿ ಒಂದು ಗಂಟೆಗಿಂತ ಹೆಚ್ಚಿನ ಸಮಯ ಸ್ಕ್ರೀನ್​ ಟೈಂ ಕಳೆಯುವುದು ಮಕ್ಕಳಲ್ಲಿ ಸ್ಥೂಲಕಾಯದ ಅಪಾಯ ಹೊಂದಿರುತ್ತದೆ. ಆದ್ದರಿಂದ ಮಕ್ಕಳ ಯೋಗಕ್ಷೇಮಕ್ಕಾಗಿ ಹೆಚ್ಚಿನ ಸಕಾರಾತ್ಮಕ ಬದಲಾವಣೆ ಅವಶ್ಯವಾಗುತ್ತದೆ.

ಇದನ್ನೂ ಓದಿ: ಆಟಿಸಂ ಹೊಂದಿರುವ ಮಕ್ಕಳಲ್ಲಿ ಆಕ್ರಮಣಶೀಲತೆ ಹೆಚ್ಚು: ಅಧ್ಯಯನದಿಂದ ಬಹಿರಂಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.