ನವದೆಹಲಿ: ವೈರ್ಲೆಸ್ ಡಿಜಿಟಲ್ ಬ್ರಿಡ್ಜ್ ಮೂಲಕವಾಗಿ ಮಿದುಳು ಮತ್ತು ಬೆನ್ನುಹುರಿ ನಡುವಿನ ಸಂಪರ್ಕವನ್ನು ಮತ್ತೆ ಸಾಧಿಸಬಹುದು ಎಂದು ನರ ವಿಜ್ಞಾನಿಗಳು ಮತ್ತು ನರಶಸ್ತ್ರಚಿಕಿತ್ಸಾಕಾರರು ತಿಳಿಸಿದ್ದಾರೆ. ಇದರಿಂದ ಪಾರ್ಶ್ವಾವಾಯು ಪೀಡಿತರು ಮತ್ತೆ ನಡೆಯಲು ಸಾಧ್ಯ ಎಂದು ತಿಳಿಸಿದ್ದಾರೆ ಎಂದು ಜರ್ನಲ್ ನೇಚರ್ನಲ್ಲಿ ಪ್ರಕಟಿಸಲಾಗಿದೆ.
ಬ್ರೈನ್-ಕಂಪ್ಯೂಟರ್ ಇಂಟರ್ಫೇಸ್ (ಬಿಸಿಐ) ಬಳಕೆ ಮಾಡಿಕೊಂಡು ಮಿದುಳು ಮತ್ತು ಬೆನ್ನು ಹುರಿ ನಡುವೆ ನಾವು ವೈರ್ಲೆಸ್ ಇಂಟರ್ಫೇಸ್ ಸೃಷ್ಟಿಸಿದ್ದೇವೆ. ಇದು ಆಲೋಚನೆಯನ್ನು ಕ್ರಿಯೆಯಾಗಿ ಪರಿವರ್ತಿಸುತ್ತದೆ ಎಂದು ಅಧ್ಯಯನಕಾರ ಗ್ರಗೊಯಿಯನ್ ಕಾರ್ಟೊಐನ್ ತಿಳಿಸಿದ್ದಾರೆ.
40 ವರ್ಷದ ಗ್ರೆಟ್-ಜನ್ ಸೈಕಲ್ ಅಪಘಾತಕ್ಕೆ ಒಳಗಾಗಿದ್ದು, ಅವರ ಬೆನ್ನುಹುರಿ ಗಾಯಗೊಂಡಿದ್ದು, ಪಾಶ್ವವಾಯುಗೆ ತುತ್ತಾಗಿದ್ದರು. ಅವರ ಡಿಜಿಟಲ್ ಬ್ರಿಡ್ಜ್ ಅನ್ನು ಅಳವಡಿಸುವ ಮೂಲಕ ತಮ್ಮ ಪಾಶ್ವಾವಾಯುಗೆ ತುತ್ತಾಗಿದ್ದ ಕಾಲಿನ ಚಲನೆಯನ್ನು ನೈಸರ್ಗಿಕವಾಗಿ ನಿಯಂತ್ರಣಕ್ಕೆ ತರಲಾಗಿದೆ. ಈ ಮೂಲಕ ಅವರು ಎದ್ದು ನಿಂತು ನಡೆಯಲು, ಮೆಟ್ಟಿಲನ್ನು ಹತ್ತುವ ಸಾಮರ್ಥ್ಯ ಹೆಚ್ಚಿಸಲಾಯಿತು. ಈ ಮೊದಲು ಸ್ನೇಹಿತರ ಸಹಾಯದಿಂದ ಮೆಟ್ಟಿಲು ಏರಿ- ಇಳಿಯುತ್ತಿದ್ದಾಗ ಅನುಭವಿಸಿದ ನೋವಿಗೆ ಹೋಲಿಕೆ ಮಾಡಿದಾಗ, ಈ ಸರಳ ಒತ್ತಡವು ತಮ್ಮ ಜೀವನದಲ್ಲಿ ಹೆಚ್ಚಿನ ಬದಲಾವಣೆ ತಂದಿದೆ ಎಂದು ಅವರು ಹೇಳಿದ್ದಾರೆ.
ಈ ಡಿಜಿಟಲ್ ಬ್ರಿಡ್ಜ್ ಅನ್ನು ಸ್ಥಾಪಿಸಲು, ಎರಡು ರೀತಿಯ ಎಲೆಕ್ಟ್ರಾನಿಕ್ ಅಳವಡಿಕೆ ಸಾಧನ ಅವಶ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ನಾವು WIMAGINE ಸಾಧನವನ್ನು ಮಿದುಳಿನ ಮೇಲ್ಬಾಗದ ಪ್ರದೇಶದಲ್ಲಿ ಅಳವಡಿಸಿದೆವು. ಇದರಿಂದ ಕಾಲಿನ ಚಲನೆಯನ್ನು ನಿಯಂತ್ರಣ ಮಾಡಲು ಸಾಧ್ಯಾವಾಯಿತು ಎಂದು ನರಶಸ್ತ್ರಚಿಕಿತ್ಸಕ ಜೊಸೆಲ್ಯೆನ್ ಬ್ಲೊಚ್ ತಿಳಿಸಿದ್ದಾರೆ.
WIMAGINE ಸಾಧನವನ್ನು ಫ್ರೆಂಚ್ ಅಲ್ಟರ್ನೆಟಿವ್ ಎನರ್ಜಿಸ್ ಮತ್ತು ಅಟೊನೊಮಿ ಎನರ್ಜಿ ಕಮಿಷನ್ (ಸಿಇಎ) ಅಭಿವೃದ್ಧಿ ಪಡಸಿದೆ. ಫ್ರೆಂಚ್ ರಿಪಬ್ಲಿಕ್ ಸರ್ಕಾರದ ಈ ಸಂಘಟನೆಗೆ ಹಣಕಾಸಿನ ಸಹಾಯ ಒದಗಿಸಿದ್ದು, ನಡೆದಾಡುವಾಗ ಮಿದುಳಿನಲ್ಲಿ ಉಂಟಾಗುವ ಎಲೆಕ್ಟ್ರಾನಿಕ್ ಸಿಗ್ನಲ್ಗಳನ್ನು ಡಿಕೋಡ್ ಮಾಡಲು ಅವಕಾಶ ನೀಡಿತು ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಅಡಾಪ್ಟಿವ್ ಕೃತಕ ಬದ್ಧಿಮತ್ತೆ ಮಾದರಿಗಳನ್ನು ಅಳವಡಿಸಿ ಈ ಯಶಸ್ವಿ ಪ್ರಯೋಗ ಮಾಡಲಾಗಿದೆ. ಚಲನೆಗಳ ಉದ್ದೇಶವನ್ನು ಸರಿಯಾದ ಸಮಯದಲ್ಲಿ ಡಿಕೋಡ್ ಮಾಡುವ ಮೂಲಕ ಮಿದುಳಿ ಚಲನವಲನ ಹಾಗೂ ಸಂಜ್ಞೆಗಳನ್ನು ರೆಕಾರ್ಡಿಂಗ್ ಮಾಡಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಬೆನ್ನು ಹುರಿಗೆ ವಿದ್ಯುತ್ ಪ್ರಚೋದನೆಗೆ ಒಳಪಡಿಸಿ ಪರೀಕ್ಷಿಸಲಾಗಿದೆ. ಈ ಮೂಲಕ ಕಾಲಿನ ಸ್ನಾಯುಗಳನ್ನು ಕ್ರಿಯಾ ಶೀಲ ಮಾಡುವ ಮೂಲಕ ಅವರ ನಡೆದಾಡುವ ಸಾಧನೆ ಮಾಡಬಹುದು ಎಂಬುದನ್ನು ಈ ಮೂಲಕ ಕಂಡುಕೊಳ್ಳಲಾಗಿದೆ. ಈ ಡಿಜಿಟಲ್ ಬ್ರಿಡ್ಜ್ಗಳು ವೈರ್ಲೆಸ್ಗಳಾಗಿ ಕಾರ್ಯ ನಿರ್ವಹಿಸುವ ಮೂಲಕ ರೋಗಿಗಳು ಸ್ವತಂತ್ರವಾಗಿ ಚಲನೆ ಮಾಡಲು ಅವಕಾಶ ನೀಡಲಾಗುವುದು.
ಸದ್ಯ ಈ ಹಂತದಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ಈ ಡಿಜಿಟಲ್ ಬ್ರಿಡ್ಜ್ ಅನ್ನು ಬಳಕೆ ಮಾಡಲಾಗಿದೆ. ತೋಳು ಮತ್ತು ಕೈ ಕಾರ್ಯಗಳನ್ನು ಪುನಃಸ್ಥಾಪಿಸಲು ಹೋಲಿಸಬಹುದಾದ ತಂತ್ರವನ್ನು ಬಳಸಬಹುದು. ಪಾರ್ಶ್ವ ವಾಯುವಿನ ಪಾರ್ಶ್ವವಾಯು ಮುಂತಾದ ಇತರ ಕ್ಲಿನಿಕಲ್ ಸೂಚನೆಗಳಿಗೆ ಡಿಜಿಟಲ್ ಸೇತುವೆಯನ್ನು ಅನ್ವಯಿಸಬಹುದು ಎಂದು ಅವರು ಹೇಳಿದರು.
ಇದನ್ನೂ ಓದಿ: ಅಧಿಕ ರಕ್ತದೊತ್ತಡ ವಿರುದ್ಧ ಅಕ್ಯುಪಂಕ್ಚರ್ ಕಾರ್ಯ ನಿರ್ವಹಣೆ ಹೇಗೆ?