ETV Bharat / sukhibhava

ಸ್ತನ ಕ್ಯಾನ್ಸರ್​ ಅಪಾಯ ಪತ್ತೆಗೆ ಆಳವಾದ ಕಲಿಕೆ ಮಾದರಿ ಅಧ್ಯಯನ - ತರಬೇತಿ ಡೇಟಾದಿಂದ ವೈಶಿಷ್ಟ್ಯವನ್ನು ಹೊರತೆಗೆಯುವ

ಸ್ತನ ಸಾಂದ್ರತೆ ಅಂದಾಜಿಗೆ ಆಳವಾದ ಕಲಿಕೆ ಅಭಿವೃದ್ಧಿ ಮಾಡುವ ಮೂಲಕ ಸ್ತನ ಕ್ಯಾನ್ಸರ್​ ಅಪಾಯ ಪತ್ತೆಗೆ ಸಹಾಯಕವಾಗಲಿದೆ ಎಂದು ಹೊಸ ಸಂಶೋಧನೆ ತಿಳಿಸಿದೆ.

A deep learning model study for breast cancer risk detection

author img

By

Published : Apr 8, 2023, 5:27 PM IST

ನವದೆಹಲಿ: ಸ್ತನದ ಸಾಂದ್ರತೆ ಅರಿಯುವ ಮೂಲಕ ಸ್ತನ ಕ್ಯಾನ್ಸರ್​ ಪತ್ತೆ ಮಾಡಲು ಸಂಶೋಧಕರು ಆಳವಾದ ಕಲಿಕೆಯ ಮಾದರಿಯನ್ನು ಅಭಿವೃದ್ಧಿಪಡಿಸಿದ್ದಾರೆ. ಬ್ರಿಟನ್​ನ ಮ್ಯಾಂಚೆಸ್ಟರ್​ ಯುನಿವರ್ಸಿಟಿಯಲ್ಲಿ ಈ ಸಂಶೋಧನೆ ಮಾಡಲಾಗಿದೆ. ಆಳವಾದ ಕಲಿಕೆ-ಆಧಾರಿತ ವಿಧಾನದ ಮೂಲಕ ತರಬೇತಿ ಡೇಟಾದಿಂದ ವೈಶಿಷ್ಟ್ಯವನ್ನು ಹೊರತೆಗೆಯುವ ಮೂಲಕ ಸ್ತನದ ಸಾಂದ್ರತೆ ಅಂದಾಜು ಮಾಡಲಾಗಿದೆ.

ಸ್ತನದ ಸಾಂದ್ರತೆಯನ್ನು ಫೈಬ್ರೊ ಗ್ಲಾನ್​ಡುಲರ್​ ಟಿಶ್ಯೂ ಭಾಗ ಎಂದು ಅರ್ಥೈಸಲಾಗಿದ್ದು, ಇದನ್ನು ಸ್ತನದ ಕ್ಯಾನ್ಸರ್​ ಅಭಿವೃದ್ಧಿಯ ಅಪಾಯದ ಕುರಿತು ಅಧ್ಯಯನಕ್ಕೆ ಬಳಕೆ ಮಾಡಲಾಗುವುದು. ಈ ಅಧ್ಯಯನ ಸಂಬಂಧ ಮೆಡಿಕಲ್​ ಇಮೆಂಜಿಗ್​ ಜರ್ನಲ್​ನಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ ಸಂಶೋಧಕರು ಎರಡು ಸ್ವತಂತ್ರ ಆಳವಾದ ಕಲಿಕೆಯ ಮಾದರಿಯನ್ನು ಬಳಕೆ ಮಾಡಿದ್ದಾರೆ. ಮಿಲಿಯನ್​ಗಟ್ಟಲೆ ಇಮೇಜ್​ಗಳನ್ನು ಇಮೇಜ್​ನೆಟ್​ ಆರಂಭಿಕ ತರಬೇತಿ ಮತ್ತು ಮೆಡಿಕಲ್​ ಹೊರತಾದ ಇಮೇಜ್​ಗಳ ದತ್ತಾಂಶಗಳನ್ನು ಬಳಕೆ ಮಾಡಲಾಗಿದೆ. ಟ್ರಾನ್ಸ್​ಫರ್​ ಲರ್ನಿಂಗ್​ ಮೂಲಕ ಈ ಮೆಡಿಕಲ್​ ಇಮೇಜ್​ಗಳನ್ನು ತರಬೇತಿ ನೀಡಲಾಗಿದೆ.

ಸೀಮಿತ ಡೇಟಾಸೆಟ್‌ಗಳ ಕಾರಣದಿಂದಾಗಿ ತಳಮಟ್ಟದಿಂದ ಆಳವಾದ ಕಲಿಕೆಯ ಮಾದರಿಗಳನ್ನು ತರಬೇತಿ ಮಾಡುವುದು ಮತ್ತು ನಿರ್ಮಿಸುವುದು ಸವಾಲಾಗಿದೆ ಎಂದು ಅವರು ತಿಳಿಸಿದ್ದಾರೆ. ರೆಡಿಯಾಲಾಜಿಸ್ಟ್​​, ನುರಿತ ಪ್ರಾಕ್ಟಿಷನರ್​ ರೆಡಿಯೋಗ್ರಾಫರ್ಸ್​ ಮತ್ತು ಸ್ತನ ಫಿಸಿಜಿಯನ್ನ ಈ ಸಾಂದ್ರತೆ ಮೌಲ್ಯ ಮತ್ತು ವಿಶುಯಲ್​ ಅನಾಲಾಗ್​ ಸ್ಕೇಲ್​ ಮೂಲಕ ಅಧ್ಯಯನ ನಡೆಸಿದ್ದಾರೆ. ಇದಕ್ಕಾಗಿ 39,357 ಮಹಿಳೆಯರನ್ನು ಬಳಸಿಕೊಳ್ಳಲಾಗಿದೆ.

ಈ ದತ್ತಾಂಶವನ್ನು ಬಳಸಿಕೊಂಡು ಮ್ಯಮೊಗ್ರಾಮ್​​ ಇಮೇಜ್​ ಇನ್​ಪುಟ್​ ಆಧಾರದ ಮೇಲೆ ಸಾಂದ್ರತೆಯ ಸ್ಕೂರ್​ ಅನ್ನು ಅಂದಾಜು ಪಡಿಸುವ ವಿಧಾನವನ್ನು ಅಭಿವೃದ್ಧಿಪಡಿಸಿದರು. ತರಬೇತಿ ಪ್ರಕ್ರಿಯೆಯನ್ನು ಕಂಪ್ಯೂಟೇಸನಲ್​ನಲ್ಲಿ ಕಡಿಮೆ ತೀವ್ರಗೊಳಿಸಲು ಚಿತ್ರಗಳನ್ನು ಪೂರ್ವ ಸಂಸ್ಕರಣೆ ಮಾಡಲಾಗಿದೆ. ಆಳವಾದ ಕಲಿಕೆ ಮಾದರಿಗಳೊಂದಿಗೆ ಸಂಸ್ಕರಿಸಿದ ಚಿತ್ರಗಳಿಂದ ವೈಶಿಷ್ಟ್ಯಗಳನ್ನು ಹೊರತೆಗೆಯಲಾಗುವುದು. ಸಾಂದ್ರತೆಯ ಸ್ಕೋರ್‌ಗಳ ಸೆಟ್‌ಗೆ ವೈಶಿಷ್ಟ್ಯಗಳನ್ನು ಮ್ಯಾಪಿಂಗ್ ಮಾಡುವುದು ಅಂತಿಮ ಫಲಿತಾಂಶವನ್ನು ತಯಾರಿಸಲು ಸಮಗ್ರ ವಿಧಾನವನ್ನು ಬಳಸಿಕೊಂಡು ಸ್ಕೋರ್‌ಗಳನ್ನು ಸಂಯೋಜಿಸುವುದು. ಸಾಂದ್ರತೆಯ ಅಂದಾಜು ಮಾಡಲಾಗುವುದು.

ಕ್ಯಾನ್ಸರ್​ ಅಪಾಯದ ಜೊತೆಗಿನ ಸ್ತನ ಸಾಂದ್ರತೆಗೆ ಅಂದಾಜು ಮಾಡಲು ಹೆಚ್ಚಿನ ನಿಖರ ಮಾಹಿತಿಯನ್ನು ತಂಡ ಅಬಿವೃದ್ಧಿ ಮಾಡಿದೆ. ಇದೇ ವೇಳೆ ಸಮಯ ಮತ್ತು ನೆನಪನ್ನು ಬಳಕೆ ಮಾಡಲಾಗಿದೆ. ಮಾದರಿಯ ಕಾರ್ಯಕ್ಷಮತೆಯು ಅನಿಶ್ಚಿತತೆಯ ಮಿತಿಯೊಳಗೆ ಮಾನವ ತಜ್ಞರ ಕಾರ್ಯಕ್ಷಮತೆಗೆ ಹೋಲಿಸಬಹುದು ಎಂದು ಪ್ರಮುಖ ಅಧ್ಯಯನಕಾರ ಸುಸನ್​ ಎಂ ಅಸ್ಟಲೆ ತಿಳಿಸಿದ್ದಾರೆ. ಇದಕ್ಕಿಂತ ಹೆಚ್ಚಾಗಿ, ಇದನ್ನು ಹೆಚ್ಚು ವೇಗವಾಗಿ ಮತ್ತು ಸಣ್ಣ ಡೇಟಾಸೆಟ್‌ಗಳು ಅಥವಾ ದೊಡ್ಡ ಡೇಟಾಸೆಟ್‌ನ ಉಪವಿಭಾಗಗಳಲ್ಲಿ ತರಬೇತಿ ನೀಡಬಹುದು ಎಂದು ಕೂಡ ತಿಳಿಸಿದ್ದಾರೆ.

ಸಂಶೋಧಕರು, ಸ್ತನ ಕ್ಯಾನ್ಸರ್​ ಅಪಾಯ ಅಂದಾಜಿಗೆ ಒಂದು ಮಿತಿಯನ್ನು ನಿಗದಿಸುತ್ತಿಲ್ಲ ಎಂದು ತಿಳಿಸಿದ್ದು, ಸ್ತನ ಡಿಶ್ಯೂ ಸಾಂದ್ರತೆ ಅಂದಾಜುಗಳ ಆಧಾರದ ಮೇಲೆ ಇತರ ವೈದ್ಯಕೀಯ ಚಿತ್ರಣ ಮಾದರಿಗಳನ್ನು ತರಬೇತಿ ಮಾಡಲು ಸಹ ಸಂಶೋಧಕರು ಗಮನಿಸಿದ್ದಾರೆ. ಸ್ತನ ಕ್ಯಾನ್ಸರ್ ವಿಶ್ವದಾದ್ಯಂತ ಮಹಿಳೆಯರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಕ್ಯಾನ್ಸರ್ ಆಗಿದೆ. ಈ ಅಳತೆಯನ್ನು ಅಂದಾಜು ಮಾಡಲು ವಿವಿಧ ವಿಧಾನಗಳು ಲಭ್ಯವಿದ್ದರೂ, ವಿಶುವಲ್​ ಅನಲಾಗ್ ಮಾಪಕಗಳ ಆಧಾರದ ಮೇಲೆ ರೆಡಿಯೋಲಾಜಿಸ್ಟ್​​ ನಡೆಸುವ ಮೌಲ್ಯಮಾಪನಗಳು ಇತರ ಯಾವುದೇ ವಿಧಾನಗಳಿಗಿಂತ ಹೆಚ್ಚು ನಿಖರವಾಗಿದೆ ಎಂದು ಅಧ್ಯಯನಗಳು ತೋರಿಸಿವೆ.

ಇದನ್ನೂ ಓದಿ: ತೂಕ ನಿರ್ವಹಣೆಗೆ ಸಿಹಿ ತ್ಯಜಿಸಬೇಡಿ; ಪರ್ಯಾಯ ಬಳಕೆ ಮಾಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.