ETV Bharat / sukhibhava

ಈ 7 ಜೀವನಶೈಲಿಗಳು ಮಾನಸಿಕ ಖಿನ್ನತೆಯನ್ನು ನಿವಾರಿಸಬಲ್ಲವು..

author img

By

Published : May 14, 2022, 5:33 PM IST

ಜೀವನಶೈಲಿಯಲ್ಲಿ ಉತ್ತಮ ಬದಲಾವಣೆ ಮಾಡಿಕೊಂಡರೆ ಮಾನಸಿಕ ಖಿನ್ನತೆಯಿಂದ ಹೊರ ಬರಬಹುದಾಗಿದೆ. ನೆಮ್ಮದಿಯುತ ಜೀವನ ನಡೆಸಬಹುದಾಗಿದೆ..

how to deal with depression
ಮಾನಸಿಕ ಖಿನ್ನತೆಗೆ ಪರಿಹಾರ

ಆಧುನಿಕತೆ ಬೆಳೆದಂತೆ ಜನರು ತಮ್ಮ ಜೀವನಶೈಲಿಯಲ್ಲಿ ಅನೇಕ ಬದಲಾವಣೆ ಮಾಡಿಕೊಳ್ಳುತ್ತಾ ಮುಂದೆ ಸಾಗುತ್ತಿದ್ದಾರೆ. ಆಧುನಿಕತೆಗೆ ಒಗ್ಗಿಕೊಂಡ ಜನರ ಕೆಲ ಜೀವನಶೈಲಿಯೇ ಅವರ ಮಾನಸಿಕ ಖಿನ್ನತೆಗೆ ಕಾರಣವಾಗಬಹುದು. ಆಸ್ತಿ, ಅಂತಸ್ತು ದುಪ್ಪಟ್ಟಾದರೂ ಮಾನಸಿಕ ಆರೋಗ್ಯದ ಸಮಸ್ಯೆ ಹೆಚ್ಚಬಹುದು. ನಮ್ಮ ಜೀವನಶೈಲಿಯಲ್ಲಿ ಉತ್ತಮ ಬದಲಾವಣೆ ಮಾಡಿಕೊಂಡರೆ ಮಾನಸಿಕ ಖಿನ್ನತೆಯಿಂದ ಹೊರ ಬರಬಹುದಾಗಿದೆ. ನೆಮ್ಮದಿಯುತ ಜೀವನ ನಡೆಸಬಹುದಾಗಿದೆ. ಅದ್ಹೇಗೆ ಅಂತಾ ಇಲ್ಲಿ ಓದಿ ನೋಡಿ.

  • ನಿಮ್ಮ ದಿನಚರಿಯಲ್ಲಿ ಹೊಸದನ್ನು ಪರಿಚಯಿಸಿ : ಪ್ರೇರಣೆಯ ಕೊರತೆ ಮತ್ತು ಆಯಾಸ, ನಿರ್ಲಕ್ಷ್ಯವು ಖಿನ್ನತೆಯ ಕೆಲವು ಆರಂಭಿಕ ಲಕ್ಷಣಗಳಾಗಿವೆ. ಇದು ನಿಮ್ಮ ದಿನಚರಿಯನ್ನು ಮಂದಗತಿಗೆ ತಳ್ಳಬಹುದು. ಹಾಗಾಗಿ, ಹೊಸದನ್ನು ಪ್ರಯತ್ನಿಸುವುದು ಬಹಳ ಮುಖ್ಯವಾಗಿದೆ. ಕಲೆ, ಯೋಗ ಸೇರಿದಂತೆ ನಿಮಗೆ ಆಸಕ್ತಿಯಿರುವ ಹೊಸ ಚಟುವಟಿಕೆಯನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿಕೊಳ್ಳಿ. ಆಗ ಹೊಸ ದಿನ, ಹೊಸತನವನ್ನು ಕಾಣಲಿದ್ದೀರಿ.
  • ಕೃತಜ್ಞತೆಯ ಬರಹ : ನೀವು ಡೈರಿ ಬರೆಯುವ ಅಭ್ಯಾಸದ ಬಗ್ಗೆ ಕೇಳಿರಬಹುದು. ಸಾಮಾನ್ಯವಾಗಿ ನಿಮಗನಿಸಿದ್ದನ್ನು, ನಿಮ್ಮ ದಿನಕ್ಕೆ ಬರಹ ರೂಪ ಕೊಡುವ ಬದಲು ಕೃತಜ್ಞತೆಯ ಬರಹ ಬರೆಯಲು ಪ್ರಯತ್ನಿಸಿ. ಸ್ನೇಹಿತರು, ಕುಟುಂಬಸ್ಥರು ಅಥವಾ ಉದ್ಯೋಗ ಕ್ಷೇತ್ರದಲ್ಲಿ ನಡೆದ ವಿಷಯಗಳನ್ನು, ಕೃತಜ್ಞತಾ ಭಾವ ಮೂಡಿಸಿದ ಸಂಗತಿಗಳನ್ನು ಬರೆಯಿರಿ. ಆಗ ನೀವು ಇನ್ನೊಬ್ಬರಿಗೆ ಕೃತಜ್ಞರಾಗಿರುತ್ತೀರಿ ಮತ್ತು ಇದು ಸಹಾಯ ಮನೋಭಾವ ಬೆಳೆಸಿಕೊಳ್ಳಲು ಸಹಾಯವಾಗುತ್ತದೆ.
  • ಮತ್ತೆ ಬರೆಯಿರಿ : ನಿಮ್ಮ ಜೀವನದಲ್ಲಿ ನೀವು ಅತೃಪ್ತರಾಗಿರುವ ಭಾಗವಿದ್ದರೆ, ಅದನ್ನು ಪುನಃ ಬರೆಯಿರಿ. ನಿರೂಪಣೆಯನ್ನು ಬದಲಾಯಿಸುವುದು, ನಿಮಗೆ ಉತ್ತಮವಾಗಲು ಮತ್ತು ನಿಮ್ಮ ಜೀವನದ ಆ ಭಾಗವನ್ನು ಸಕಾರಾತ್ಮಕ ರೀತಿಯಲ್ಲಿ ಯೋಚಿಸಲು ಸಹಾಯ ಮಾಡುತ್ತದೆ.
  • ನಿದ್ರೆ : ನಿದ್ರೆಯು ಕೇವಲ ದೈಹಿಕ ವಿಶ್ರಾಂತಿಯನ್ನು ತೆಗೆದುಕೊಳ್ಳುವುದಕ್ಕಿಂತಲೂ ಪ್ರಮುಖ ವಿಷಯ. ಇದು ಮನಸ್ಸನ್ನು ಸ್ವಚ್ಛಗೊಳಿಸುವ ರೀತಿ ಕಾರ್ಯನಿರ್ವಹಿಸುತ್ತದೆ. ಆರೋಗ್ಯದ ಪ್ರತಿಯೊಂದು ಅಂಶಕ್ಕೆ ವಿಶೇಷವಾಗಿ ಮಾನಸಿಕ ಆರೋಗ್ಯಕ್ಕೆ ನಿರ್ಣಾಯಕವಾಗಿದೆ. 7-9 ಗಂಟೆಗಳ ನಿದ್ರೆಯನ್ನು ಸೂಕ್ತವೆಂದು ಪರಿಗಣಿಸಲಾಗುತ್ತದೆ.
  • ಆರೋಗ್ಯಕರ ಆಹಾರ ಸೇವಿಸಿ : ಉತ್ತಮ ಆರೋಗ್ಯಕ್ಕಾಗಿ ಆರೋಗ್ಯಕರ ಮತ್ತು ಸಮತೋಲಿತ ಆಹಾರವನ್ನು ಯಾವಾಗಲೂ ಶಿಫಾರಸು ಮಾಡಲಾಗುತ್ತದೆ. ಬಿ 12 ಮತ್ತು ಒಮೆಗಾ 3 ಕೊಬ್ಬಿನಾಮ್ಲಗಳು ಮನಸ್ಥಿತಿಗೆ ಕಾರಣವಾದ ಮೆದುಳಿನ ಭಾಗಗಳಲ್ಲಿ ಉರಿಯೂತವನ್ನು ಹೆಚ್ಚಿಸುತ್ತದೆ. ಇದು ನಿಮ್ಮನ್ನು ಕೆರಳಿಸಬಹುದು ಮತ್ತು ಖಿನ್ನತೆಗೆ ಒಳಗಾಗಬಹುದು. ಹಾಗಾಗಿ, ಉತ್ತಮ ಆಹಾರ ನಿಮ್ಮ ಆಯ್ಕೆಯಾಗಿರಲಿ.
  • ವ್ಯಾಯಾಮ : ವ್ಯಾಯಾಮವು ಆತಂಕ, ಖಿನ್ನತೆ ಮತ್ತು ನಕಾರಾತ್ಮಕ ಮನಸ್ಥಿತಿಯನ್ನು ಕಡಿಮೆ ಮಾಡುವ ಮೂಲಕ ಮತ್ತು ಸ್ವಾಭಿಮಾನ, ಅರಿವಿನ ಕಾರ್ಯವನ್ನು ಸುಧಾರಿಸುವ ಮೂಲಕ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ. ಹೀಗಾಗಿ, ನಿಮ್ಮ ದೈನಂದಿನ ದಿನಚರಿಯಲ್ಲಿ 45-60 ನಿಮಿಷಗಳ ಕಾಲ ವ್ಯಾಯಾಮ ಮಾಡುವುದನ್ನು ಶಿಫಾರಸು ಮಾಡಲಾಗುತ್ತದೆ. ಉತ್ತಮ ಮಾನಸಿಕ ಆರೋಗ್ಯಕ್ಕಾಗಿ ಮಾತ್ರವಲ್ಲದೇ ದೈಹಿಕ ಆರೋಗ್ಯ ವೃದ್ಧಿಗೂ ಇದು ಸಹಕಾರಿ.
  • ನಿಲ್ಲಬೇಡಿ, ಮುಂದಿನ ಒಂದು ಹೆಜ್ಜೆ ಸಹ ಪ್ರಗತಿಯಾಗಿದೆ : ಕೆಲ ವಿಷಯಗಳು ಪೂರ್ಣಗೊಳ್ಳಲು ಅಥವಾ ಈಡೇರಲು ಸಮಯ ತೆಗೆದುಕೊಳ್ಳುತ್ತದೆ. ತ್ವರಿತ ಫಲಿತಾಂಶಕ್ಕಾಗಿ ವಿಷಯಗಳಿಗೆ ಒತ್ತಡ ಹೇರುವುದು ಸರಿಯಲ್ಲ. ಹಾಗಂತಾ, ನೀವು ಹಿಂದೆ ಸರಿಯಬೇಡಿ. ನಿಮ್ಮ ಪ್ರಯಾಣದ ಪ್ರತಿ ಹೆಜ್ಜೆಯೂ ಲೆಕ್ಕಕ್ಕೆ ಬರುತ್ತದೆ. ಸಕಾರಾತ್ಮಕ ಮನೋಭಾವದೊಂದಿಗೆ ಮುನ್ನಡೆಯಿರಿ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.