ETV Bharat / sukhibhava

ದೆಹಲಿ ಎನ್​ಸಿಆರ್​ನಲ್ಲಿ ಕಳಪೆ ವಾಯು ಗುಣಮಟ್ಟದಿಂದ ಶ್ವಾಸಕೋಶದ ಸಮಸ್ಯೆ ಶೇ 50ರಷ್ಟು ಉಲ್ಬಣ

author img

By ETV Bharat Karnataka Team

Published : Oct 27, 2023, 2:33 PM IST

ದೆಹಲಿ ಎನ್​ಸಿಆರ್​ನಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಮಟ್ಟದಿಂದಾಗಿ ಸಿಒಪಿಡಿ ಮತ್ತು ಎದೆ ಸಮಸ್ಯೆ ಹೊಂದಿರುವ ರೋಗಿಗಳಲ್ಲಿ ಸಮಸ್ಯೆಯನ್ನು ಏರಿಕೆ ಮಾಡುವಂತೆ ಮಾಡಿದೆ.

50percent increase in lung problem due to poor air quality in Delhi NCR

ನವದೆಹಲಿ: ರಾಷ್ಟ್ರ ರಾಜಧಾನಿಯ ಸುತ್ತಮುತ್ತ ಕುಸಿಯುತ್ತಿರುವ ವಾಯು ಗುಣಮಟ್ಟದಿಂದಾಗಿ ಆಸ್ತಮಾ, ಸಿಒಪಿಡಿ ಮತ್ತು ಇತರ ಎದೆ ಸಮಸ್ಯೆಗಳು ಶೇ 50ರಷ್ಟು ಹೆಚ್ಚಾಗಬಹುದು ಎಂದು ವೈದ್ಯರು ತಿಳಿಸಿದ್ದಾರೆ. ದೆಹಲಿಯಲ್ಲಿ ಒಟ್ಟಾರೆ ವಾಯು ಗುಣಮಟ್ಟ ಗುರುವಾರ ಕೂಡ ಕಳಪೆ ವರ್ಗದಲ್ಲಿ ಮುಂದುವರೆದಿದ್ದು, ವಾಯು ಗುಣಮಟ್ಟ ಸೂಚ್ಯಾಂಕ 256 ಇದೆ ಎಂದು ಸಾಫರ್​-ಇಂಡಿಯಾ ವರದಿ ಮಾಡಿದೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ದೈನಂದಿನ ಬುಲೆಟಿನ್​ನಲ್ಲಿ, ರಾಷ್ಟ್ರ ರಾಜಧಾನಿ ಎಕ್ಯೂಐ 243 ಇದೆ. ನೆರೆಯ ನೋಯ್ಡಾ ಮತ್ತು ಗಾಜಿಯಾಬಾದ್​ನಲ್ಲಿ ಕೂಡ ವಾಯು ಗುಣಮಟ್ಟ ಕಳಪೆ ವರ್ಗದಲ್ಲಿ ಕಂಡು ಬಂದಿದ್ದು, ಇಲ್ಲಿ ಎಕ್ಯೂಐ 203 ಆಗಿದೆ. ಗುರುಗ್ರಾಮ್​ ಸುಧಾರಿತ ವಾಯುಗುಣಮಟ್ಟ ಇದ್ದು ಇಲ್ಲಿ ಎಕ್ಯೂಐ 190 ಇದೆ.

ದೆಹಲಿ - ಎನ್​ಸಿಆರ್​ನಲ್ಲಿ ಹೆಚ್ಚುತ್ತಿರುವ ಮಾಲಿನ್ಯ ಮಟ್ಟದಿಂದಾಗಿ ಸಿಒಪಿಡಿ ಮತ್ತು ಎದೆ ಸಮಸ್ಯೆ ಹೊಂದಿರುವ ರೋಗಿಗಳಲ್ಲಿ ಸಮಸ್ಯೆ ಗಮನಾರ್ಹವಾಗಿ ಏರಿಕೆ ಕಂಡಿದೆ. ಇದರ ಪರಿಣಾಮ ಒಪಿಡಿಗಳಿಗೆ ಬರುತ್ತಿದ್ದ 7-8 ರೋಗಿಗಳ ಸಂಖ್ಯೆ ಇದೀಗ 30 ರಿಂದ 35 ರೋಗಿಗಳು ಬರುತ್ತಿದ್ದು, ರೋಗಿಗಳ ಸಂಖ್ಯೆಯಲ್ಲೊ ಶೇ 50ರಷ್ಟು ಹೆಚ್ಚಾಗಿದೆ ಎಂದು ಗುರುಗ್ರಾಮದ ಬಿರ್ಲಾ ಆಸ್ಪತ್ರೆಯ ವೈದ್ಯ ಡಾ ಕುಲ್ದೀಪ್​ ಕುಮಾರ್​ ಗ್ರೋವರ್​ ತಿಳಿಸಿದ್ದಾರೆ.

ಇತ್ತೀಚಿನ ದಿನದಲ್ಲಿ ನಾವು ಪರೀಕ್ಷಿಸುತ್ತಿರುವ ರೋಗಿಗಳು ಹೆಚ್ಚಾಗಿ ಕೆಮ್ಮು, ಶೀತ, ಗಂಟಲು ಕೆರೆತ, ಗಂಟಲು ಸಮಸ್ಯೆ, ಕಣ್ಣಿನಲ್ಲಿ ನೀರು ಸಮಸ್ಯೆ, ಎದೆ ನೋವು, ಉಸಿರಾಟ ಸಮಸ್ಯೆಗಳು ಹೆಚ್ಚಾಗಿದೆ ಎಂದಿದ್ದಾರೆ. ಪ್ರತಿ ವರ್ಷ ದೆಹಲಿ ವಾಯು ಗುಣಮಟ್ಟದ ಸಮಸ್ಯೆಗೆ ಒಳಗಾಗುತ್ತಿದ್ದು, ಇದಕ್ಕೆ ಹರಿಯಾಣ ಮತ್ತು ಪಂಜಾಬ್​ನಲ್ಲಿ ಕೃಷಿ ತ್ಯಾಜ್ಯ ಸುಡುವಿಕೆ ಕಾರಣವಾಗಿದೆ. ದೆಹಲಿಯಲ್ಲಿ ತಾಪಮಾನ ಹೆಚ್ಚುತ್ತಿದ್ದು, ಗಾಳಿಯ ವೇಗ ಕಡಿಮೆಯಾಗುತ್ತಿದೆ. ಇದರಿಂದ ಮಾಲಿನ್ಯ ಹೆಚ್ಚಿದೆ ಎಂದು ದೆಹಲಿ ಪರಿಸರ ಸಚಿವ ಗೋಪಾಲ್​ ರಾಯ್​ ತಿಳಿಸಿದ್ದಾರೆ.

ಈಗಾಗಲೇ ಶ್ವಾಸಕೋಶ ಸಮಸ್ಯೆ ಹೊಂದಿರುವ ರೋಗಿಗಳು ಇದೀಗ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಮತ್ತೊ ಹೊಸದಾಗಿ ಅನೇಕ ಮಂದಿ ಉಸಿರಾಟದ ಸಮಸ್ಯೆಗೆ ಒಳಗಾಗುತ್ತಿರುವುದು ಕಾಣಬಹುದಾಗಿದೆ ಎಂದು ವೈದ್ಯರು ತಿಳಿಸಿದರು.

ಮಾಲಿನ್ಯ ಹಿನ್ನೆಲೆ ಧೂಮಪಾನವನ್ನು ತ್ಯಜಿಸಿ ಮತ್ತು ಧೂಮಪಾನದಿಂದ ದೂರವಿರಿ, ಸಾಧ್ಯವಾದಷ್ಟು ಧೂಳು ಮತ್ತು ಮಾಲಿನ್ಯವನ್ನು ಆದಷ್ಟು ತಪ್ಪಿಸಿ ಎಂದು ಆರೋಗ್ಯ ತಜ್ಞರು ಸಲಹೆ ನೀಡಿದ್ದಾರೆ. ಅವರು 60 ವರ್ಷಕ್ಕಿಂತ ಮೇಲ್ಪಟ್ಟ ಅಥವಾ 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಜ್ವರ ಮತ್ತು ನ್ಯುಮೋನಿಯಾ ಲಸಿಕೆಗಳನ್ನು ತೆಗೆದುಕೊಳ್ಳುವಂತೆ ಶಿಫಾರಸು ಮಾಡಿದ್ದಾರೆ. (ಐಎಎನ್​ಎಸ್​)

ಇದನ್ನೂ ಓದಿ: ದೆಹಲಿ ಮಾಲಿನ್ಯದ ಮೂಲ ಪತ್ತೆಗೆ ಮುಂದಾದ ಐಐಟಿ ದೆಹಲಿ: ಪಂಜಾಬ್​ ವಿಶ್ವವಿದ್ಯಾಲಯ ಮತ್ತು ಪಿಜಿಐಯಿಂದಲೂ ಸಂಶೋಧನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.