ETV Bharat / sukhibhava

ಅಧಿಕ ರಕ್ತದೊತ್ತಡ ನಿವಾರಿಸಲು ಯೋಗ ಸಹಕಾರಿ

author img

By

Published : May 18, 2021, 8:59 PM IST

ಯೋಗವು ಅನೇಕ ರೋಗಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಆಧುನಿಕ ಜಗತ್ತಿನಲ್ಲಿ, ಜನರು ಎಂದಿಗಿಂತಲೂ ಹೆಚ್ಚು ಒತ್ತಡಕ್ಕೊಳಗಾಗಿದ್ದಾರೆ. ಹೀಗಾಗಿ ಅಧಿಕ ರಕ್ತದೊತ್ತಡದ ಸಾಧ್ಯತೆಗಳು ಹೆಚ್ಚಿವೆ. ಈ ಹಿನ್ನೆಲೆ, ಅದನ್ನು ಎದುರಿಸಲು ಯೋಗ ನಿಮಗೆ ಸಹಾಯ ಮಾಡುತ್ತದೆ. ಅಧಿಕ ರಕ್ತದೊತ್ತಡ ಇರುವ ಜನರಿಗೆ ಸಹಾಯಕವೆಂದು ಪರಿಗಣಿಸಲಾದ 5 ಯೋಗ ಭಂಗಿಗಳು ಇಲ್ಲಿವೆ.

yoga
yoga

ರಕ್ತದೊತ್ತಡ ತುಂಬಾ ಹೆಚ್ಚಾದಾಗ, ಈ ಸ್ಥಿತಿಯನ್ನು ಅಧಿಕ ರಕ್ತದೊತ್ತಡ ಎಂದು ಕರೆಯಲಾಗುತ್ತದೆ. ಇದು ಪ್ರಮುಖವಾಗಿ ವಯಸ್ಸಾದವರಿಗೆ ಕಾಡುವ ಆರೋಗ್ಯ ಸಮಸ್ಯೆಯಾಗಿದೆ. ಆದರೆ, ಇತ್ತೀಚಿನ ಕೆಲವು ಅಧ್ಯಯನಗಳ ಪ್ರಕಾರ, ಒತ್ತಡದ ವಾತಾವರಣದಲ್ಲಿ ವಾಸಿಸುವ ಅನೇಕ ಯುವಕರು ಸಹ ಅಧಿಕ ರಕ್ತದೊತ್ತಡಕ್ಕೆ ಬಲಿಯಾಗುತ್ತಾರೆ. ಕೆಲವು ಔಷಧಗಳು, ಆರೋಗ್ಯಕರ ಆಹಾರ ಪದ್ಧತಿ ಮತ್ತು ಜೀವನಶೈಲಿಯ ಅಭ್ಯಾಸಗಳೊಂದಿಗೆ ಅದನ್ನು ಕಂಟ್ರೋಲ್​ ಮಾಡಬಹುದು. ಆದರೆ, ಅದನ್ನು ಹೊರತುಪಡಿಸಿ, ಈ ಪರಿಸ್ಥಿತಿಯನ್ನು ಎದುರಿಸಲು ಯೋಗ ಕೂಡ ಬಹಳ ಸಹಾಯಕವಾಗಿದೆ ಎಂದು ಪರಿಗಣಿಸಲಾಗಿದೆ. ಏಕೆಂದರೆ ಇದು ದೇಹ ಮತ್ತು ಮನಸ್ಸನ್ನು ನಿರಾಳಗೊಳಿಸಿ, ಒತ್ತಡವನ್ನು ನಿವಾರಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದ್ದರಿಂದ, ಇಂದು, ಈಟಿವಿ ಭಾರತ್ ಸುಖೀಭವ ಅಧಿಕ ರಕ್ತದೊತ್ತಡ ಹೊಂದಿರುವ ವ್ಯಕ್ತಿಯು ಅಭ್ಯಾಸ ಮಾಡಬಹುದಾದ ಕೆಲವು ಯೋಗ ಭಂಗಿಗಳನ್ನು (ಆಸನಗಳು) ನಿಮ್ಮೊಂದಿಗೆ ಹಂಚಿಕೊಳ್ಳಲಿದೆ.

ಶಿಶು ಆಸನ( ಚೈಲ್ಡ್​ ಪೋಸ್​):

  • ನೆಲದ ಮೇಲೆ ನಿಮ್ಮ ಮೊಣಕಾಲುಗಳ ಮೇಲೆ ಕುಳಿತು ವಿಶ್ರಾಂತಿ ಪಡೆಯಿರಿ.
  • ನಿಮ್ಮ ಕಾಲ್ಬೆರಳುಗಳನ್ನು ಮಡಚಿ ಮತ್ತು ಮೊಣಕಾಲುಗಳನ್ನು ಅಗಲವಾಗಿ ಇರಿಸಿ.
  • ಈಗ ನಿಧಾನವಾಗಿ ಮುಂದಕ್ಕೆ ಬಾಗಿ ನಿಮ್ಮ ಹಣೆಯನ್ನು ನೆಲಕ್ಕೆ ತಾಗಿಸಿ. ನಿಮಗೆ ಹಾಗೆ ಮಾಡಲು ಕಷ್ಟವಾದರೆ, ನಿಮ್ಮ ಎರಡೂ ಮುಷ್ಟಿಗಳನ್ನು ಜೋಡಿಸಿ ಅವುಗಳನ್ನು ನಿಮ್ಮ ಹಣೆಯ ಕೆಳಗೆ ಇಡಬಹುದು.
  • ಅಂಗೈಗಳನ್ನು ಚಾಪೆಯ ಮೇಲೆ ಇಡುತ್ತಾ ನೀವು ನಿಮ್ಮ ತೋಳುಗಳನ್ನು ಮುಂದೆ ಚಾಚಬಹುದು ಅಥವಾ ತೊಡೆಯ ಪಕ್ಕದಲ್ಲಿ ನಿಮ್ಮ ಅಂಗೈಗಳನ್ನು ಇಡಬಹುದು.
  • ಪಶ್ಚಿಮೋತ್ತಾಸನ:
  • ಅಂಗಾತ ಮಲಗಿ.
  • ಆ ಬಳಿಕ ತಲೆ ಮತ್ತು ಎದೆಯನ್ನು ಮೇಲಕ್ಕೆತ್ತಿ ನೇರವಾಗಿ ಕುಳಿತುಕೊಳ್ಳಿ.
  • ಉಸಿರು ಹೊರ ಬಿಟ್ಟು ತಲೆ ಮತ್ತು ಎದೆಯನ್ನು ಮುಂದಕ್ಕೆ ಬಾಗಿಸಿ ಚಿತ್ರದಲ್ಲಿ ಕಾಣಿಸಿದಂತೆ ಎರಡು ಕೈ ತೋರುಬೆರಳುಗಳಿಂದ ಕಾಲಿನ ಹೆಬ್ಬೆರಳನ್ನು ಹಿಡಿಯಿರಿ
  • ಹಣೆಯನ್ನು ಮೊಣಕಾಲುಗಳಿಗೆ ತಾಗಿಸಿ
  • ಮೊಣಕಾಲು ಬಾಗಿಸಿದಂತೆ ಇರಬೇಕು.
  • ನಂತರ ತಲೆಯನ್ನು ಮೇಲಕ್ಕೆತ್ತಿ ಉಸಿರನ್ನು ಎಳೆದುಕೊಳ್ಳಿ.
  • 20 - 60 ಸೆಕೆಂಡ್​ವರೆಗೆ ಈ ಆಸನದ ನಿಲುವು ಮುಂದುವರಿಸಬಹುದು.

ಚಿಟ್ಟೆ ಭಂಗಿ:

  • ನಿಮ್ಮ ಕಾಲುಗಳನ್ನು ನೇರವಾಗಿ ಮುಂದೆ ಚಾಚಿ ಮತ್ತು ನಿಮ್ಮ ಬೆನ್ನುಮೂಳೆಯನ್ನು ನೆಟ್ಟಗೆ ಮಾಡಿ ಕುಳಿತುಕೊಳ್ಳಿ.
  • ನಿಮ್ಮ ಮೊಣಕಾಲುಗಳನ್ನು ಬಗ್ಗಿಸಿ ಮತ್ತು ನಿಮ್ಮ ಪಾದಗಳನ್ನು ನಿಮ್ಮ ಸೊಂಟದ ಹತ್ತಿರ ತನ್ನಿ. ನಿಮ್ಮ ಮೊಣಕಾಲುಗಳನ್ನು ನಿಮ್ಮ ಎರಡೂ ಬದಿಗಳಿಗೆ ಹರಡಿ ಮತ್ತು ನಿಮ್ಮ ಪಾದಗಳನ್ನು ನಿಮ್ಮ ಕೈಗಳಿಂದ ಹಿಡಿದುಕೊಳ್ಳಿ.
  • ಈಗ ಉಸಿರಾಡಿ ಮತ್ತು ನೀವು ಉಸಿರಾಡುವಾಗ ನಿಮ್ಮ ಮೊಣಕಾಲುಗಳನ್ನು ಮೇಲಕ್ಕೆ ಮತ್ತು ಕೆಳಕ್ಕೆ ಸರಿಸಿ. ಇದನ್ನು 15 - 20 ಬಾರಿ ಪುನರಾವರ್ತಿಸಿ, ನಂತರ ನಿಮ್ಮ ಕಾಲುಗಳನ್ನು ಮುಂದೆ ನೇರಗೊಳಿಸಿ ಮತ್ತು ವಿಶ್ರಾಂತಿ ಪಡೆಯಿರಿ.

ಇವುಗಳಲ್ಲದೇ ಸೇತು ಬಂಧ ಆಸನ ಮತ್ತು ಭುಜಂಗಾಸನ ಸಹ ಹೆಚ್ಚು ಸಹಕಾರಿಯಾಗಿವೆ. ಈ ಎಲ್ಲ ಭಂಗಿಗಳು ನಿಮ್ಮ ದೇಹವನ್ನು ವಿಶ್ರಾಂತಿಯಾಗಿಡಲು ಮತ್ತು ಒತ್ತಡ ರಹಿತವಾಗಿಸಲು ಸಹಾಯ ಮಾಡುತ್ತದೆ. ಯೋಗವು ಒತ್ತಡವನ್ನು ಕಡಿಮೆ ಮಾಡುವುದು ಮಾತ್ರವಲ್ಲದೇ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ದೇಹದ ತೂಕ ಹೆಚ್ಚಿರುವವರಲ್ಲಿ ಹೆಚ್ಚಾಗಿ ರಕ್ತದೊತ್ತಡ ಕಂಡು ಬರುತ್ತದೆ. ಆದ್ದರಿಂದ, ಯೋಗದ ನಿಯಮಿತ ಅಭ್ಯಾಸವು ನಿಮ್ಮ ದೇಹದ ತೂಕವನ್ನು ನಿರ್ವಹಿಸಲು ಸಹ ಸಹಾಯ ಮಾಡುತ್ತದೆ. ಈ ಆಸನಗಳ ಜೊತೆಗೆ ಇತರ ಕೆಲವು ಆಸನಗಳ ನಂತರ, ನೀವು ಧ್ಯಾನ ಮತ್ತು ಉಸಿರಾಟದ ವ್ಯಾಯಾಮವನ್ನೂ ಸಹ ಅಭ್ಯಾಸ ಮಾಡಬಹುದು. ಧ್ಯಾನವು ನಿಮ್ಮ ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ ಮತ್ತು ಎರಡನೆಯದು ಶ್ವಾಸಕೋಶವನ್ನು ಆರೋಗ್ಯವಾಗಿಡಲು ಮತ್ತು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.