ETV Bharat / sukhibhava

ನಿಮ್ಮ ಫಿಟ್ನೆಸ್ ಹೆಚ್ಚಿಸಿಕೊಳ್ಳಬೇಕೇ: ಹಾಗಾದರೆ 5 ಆರೋಗ್ಯಕರ ಆಯುರ್ವೇದ​ ಪದಾರ್ಥಗಳನ್ನು ನೀವೂ ಟ್ರೈ ಮಾಡಿ - etv bharat kannada

ಫಿಟ್ನೆಸ್ ಉತ್ಸಾಹಿಗಳು ಫಿಟ್ನೆಸ್ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುವ ಆಯುರ್ವೇದ ಪದಾರ್ಥಗಳು - ನೈಸರ್ಗಿಕವಾಗಿ ನಿಮ್ಮ ಫಿಟ್ನೆಸ್ ಹೆಚ್ಚಿಕೊಳ್ಳಲು ಬಳಸಿ 5 ಆರೋಗ್ಯಕರ ಆಯುರ್ವೇದ​ ಪದಾರ್ಥಗಳು.

5 Healthy Ingredients for Fitness Enthusiasts
5 ಆರೋಗ್ಯಕರ ಆಯುರ್ವೇದ​ ಪದಾರ್ಥಗಳು
author img

By

Published : Jan 30, 2023, 4:19 PM IST

ನವದೆಹಲಿ: ಫಿಟ್ನೆಸ್ ಉತ್ಸಾಹಿಗಳು ಯಾವಾಗಲೂ ತಮ್ಮ ಫಿಟ್ನೆಸ್​ ಹೆಚ್ಚಿಸಿಕೊಳ್ಳಲು ಸಹಾಯ ಮಾಡುವ ಪದಾರ್ಥಗಳಿಗಾಗಿ ಹುಡುಕುತ್ತಿರುತ್ತಾರೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ರಾಸಾಯನಿಕಗಳಿಂದ ಕೂಡಿದ ಅನೇಕ ಆಹಾರ ಪದಾರ್ಥಗಳು ಲಭ್ಯವಿದ್ದು, ಫಿಟ್ನೆಸ್​ ಪ್ರೀಯರು ಹೆಚ್ಚಾಗಿ ಇವುಗಳನ್ನು ಬಳಸುತ್ತಿರುತ್ತಾರೆ. ನಮ್ಮ ದೇಶಿಯ ಆಯುರ್ವೇದ ಪದಾರ್ಥಗಳು ಅಂತವರ ಗಮನ ಸೆಳೆಯುವುದಿಲ್ಲ. ಆಯುರ್ವೇದವು ಶತಮಾನಗಳಷ್ಟು ಹಳೆಯದಾದ ಭಾರತೀಯ ಆರೋಗ್ಯ ಪದ್ಧತಿಯಾಗಿದೆ.

ಇದು ಮನಸ್ಸು, ದೇಹ ಮತ್ತು ಆತ್ಮವನ್ನು ಸಮತೋಲನಗೊಳಿಸುವ ಮೂಲಕ ಆರೋಗ್ಯ ಮತ್ತು ಮನಸಿಕ ಕ್ಷೇಮವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ ಮತ್ತು ಇದು ರೋಗದ ಚಿಕಿತ್ಸೆಗಿಂತ, ರೋಗವನ್ನು ತಡೆಗಟ್ಟುವಿಕೆಯ ಮೇಲೆ ಹೆಚ್ಚು ಕೇಂದ್ರೀಕರಿಸುತ್ತದೆ. ಫಿಟ್ನೆಸ್​ ಸಾಧಿಸಲು, ಪೌಷ್ಠಿಕಾಂಶಯುಕ್ತ ಆಹಾರ, ವ್ಯಾಯಾಮ ಮತ್ತು ಜೀವನಶೈಲಿ ಹೊಂದಾಣಿಕೆಗಳನ್ನು ಒಳಗೊಂಡಿರುವ ಸಮಗ್ರ ವಿಧಾನದ ಅಗತ್ಯವಿದೆ. ಆಯುರ್ವೇದ ಗಿಡಮೂಲಿಕೆಗಳು ಮತ್ತು ಮಸಾಲೆಗಳು ಈ ವಿಧಾನದಲ್ಲಿ ಮಹತ್ವದ ಪಾತ್ರವಹಿಸುತ್ತವೆ. ಅವು ಉತ್ತಮ ಜೀರ್ಣಕ್ರಿಯೆ ಮತ್ತು ಮಾನಸಿಕ ಆರೋಗ್ಯ ಸೇರಿದಂತೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ ಮತ್ತು ನಮ್ಮ ದೇಹವನ್ನು ಅನಾರೋಗ್ಯದಿಂದ ರಕ್ಷಿಸುತ್ತವೆ ಎಂದು ತಿಳಿದುಬಂದಿದೆ.

ಡಾ. ಕೃತಿ ಸೋನಿ ಅವರು ಫಿಟ್ನೆಸ್ ಉತ್ಸಾಹಿಗಳಿಗೆ ತಿಳಿಸಿರುವ 5 ಆರೋಗ್ಯಕರ ಪದಾರ್ಥಗಳು ಇಲ್ಲಿವೆ:

  • ಅಶ್ವಗಂಧ (ವಿಥಾನಿಯಾ ಸೊಮ್ನಿಫೆರಾ) ಮೂಲತಃ ಭಾರತದ ಸಸ್ಯವಾಗಿದೆ. ಇದರ ಬೇರುಗಳು ಮತ್ತು ಹಣ್ಣುಗಳನ್ನು ಪ್ರಸಿದ್ಧ ಆಯುರ್ವೇದ ಔಷಧವನ್ನು ತಯಾರಿಸಲು ಬಳಸಲಾಗುತ್ತದೆ. ಇದನ್ನು ಅಡಾಪ್ಟೋಜೆನ್ ಎಂದು ವರ್ಗೀಕರಿಸಲಾಗಿದೆ. ಅಂದರೆ ನಿಮ್ಮ ದೇಹವು ಒತ್ತಡವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿಭಾಯಿಸಲು ಸಹಾಯ ಮಾಡುತ್ತದೆ. ಕಾರ್ಟಿಸೋಲ್ ಒತ್ತಡಕ್ಕೆ ಪ್ರತಿಕ್ರಿಯೆಯಾಗಿ ನಿಮ್ಮ ಮೂತ್ರಜನಕಾಂಗದ ಗ್ರಂಥಿಗಳು ರಚಿಸುವ ಹಾರ್ಮೋನ್ ಆಗಿದೆ. ಮತ್ತು ಅಶ್ವಗಂಧವು ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ದೈಹಿಕ ಮತ್ತು ಮಾನಸಿಕ ಎರಡೂ ಒತ್ತಡವನ್ನು ನಿವಾರಿಸಿಕೊಳ್ಳಲು ಫಿಟ್‌ನೆಸ್ ಉತ್ಸಾಹಿಗಳು ಇದರಿಂದ ಪ್ರಯೋಜನ ಪಡೆಯಬಹುದು. ಅಶ್ವಗಂಧವು ಸ್ನಾಯುಗಳ ಬೆಳವಣಿಗೆ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸುತ್ತದೆ.
  • ಶಿಲಾಜಿತ್ ಪದಾರ್ಥವನ್ನು ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಆಯುರ್ವೇದ ಔಷಧವಾಗಿ ಬಳಸಲಾಗುತ್ತದೆ. ಇದರಲ್ಲಿ ಮಿನರಲ್ಸ್ ಹೇರಳವಾಗಿದೆ ಮತ್ತು ಫುಲ್ವಿಕ್ ಆಮ್ಲ ಎಂದು ಕರೆಯಲ್ಪಡುವ ಪ್ರಮುಖ ಸಂಯುಕ್ತವನ್ನು ಇದು ಹೊಂದಿದೆ. ವ್ಯಾಯಾಮ ಮಾಡುವಾಗ, ಫಿಟ್ನೆಸ್ ಉತ್ಸಾಹಿಗಳು ಬೆವರುವ ಮೂಲಕ ನೀರಿನ ಸಮತೋಲನ, ಸ್ನಾಯು ಸಂಕೋಚನಗಳು, ನರ ಪ್ರಚೋದನೆಗಳು ಮತ್ತು ಚಯಾಪಚಯವನ್ನು ನಿಯಂತ್ರಿಸಲು ಸಹಾಯ ಮಾಡುವ ಅಗತ್ಯ ಎಲೆಕ್ಟ್ರೋಲೈಟ್​ಗಳನ್ನು ಕಳೆದುಕೊಳ್ಳುತ್ತಾರೆ.
  • ಶಿಲಾಜಿತ್​ನಲ್ಲಿರುವ ಕೆಲವು ಖನಿಜಾಂಶಗಳಲ್ಲಿ ಇದು ಸಮೃದ್ಧವಾಗಿದೆ, ದೇಹದಲ್ಲಿ ಎಲೆಕ್ಟ್ರೋಲೈಟ್​ಗಳನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ, ಇದರಿಂದಾಗಿ ದೈಹಿಕ ಕಾರ್ಯಕ್ಷಮತೆ ಮತ್ತು ಸಹಿಷ್ಣುತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
  • ತ್ರಿಫಲ ಇದನ್ನು ಮೂರು ಔಷಧೀಯ ಹಣ್ಣುಗಳಿಂದ ತಯಾರಿಸಿದ ಆಯುರ್ವೇದ ಔಷಧಿಯಾಗಿದೆ, ನೆಲ್ಲಿಕಾಯಿ (ಎಂಬ್ಲಿಕಾ ಅಫಿಷಿನಾಲಿಸ್, ಅಥವಾ ಇಂಡಿಯನ್ ಗೂಸ್ಬೆರ್ರಿ) ಬಿಭಿಟಾಕಿ (ಟರ್ಮಿನಾಲಿಯಾ ಬೆಲ್ಲಿರಿಕಾ) ಹರಿಟಾಕಿ (ಟರ್ಮಿನಾಲಿಯಾ ಚೆಬುಲಾ) ಸಂಶೋಧನೆಯ ಪ್ರಕಾರ, ತ್ರಿಫಲವು ಸಂಧಿವಾತದ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಕ್ಯಾನ್ಸರ್ ತಡೆಯುತ್ತದೆ. ಇದಲ್ಲದೆ, ತ್ರಿಫಲವು ಜೀರ್ಣಕ್ರಿಯೆ ಮತ್ತು ಬಾಯಿಯ ಆರೋಗ್ಯಕ್ಕೆ ಸಹ ಪ್ರಯೋಜನಕಾರಿಯಾಗಿದೆ. ಫಿಟ್ನೆಸ್ ಉತ್ಸಾಹಿಗಳು ತಮ್ಮ ಆಹಾರದಲ್ಲಿ ತ್ರಿಫಲವನ್ನು ಸೇರಿಸುವುದರಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು, ಏಕೆಂದರೆ ಇದು ಒಟ್ಟಾರೆ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುತ್ತದೆ. ಇದು ಕರುಳಿನ ಟೋನರ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ಕರುಳಿನ ಅಂಗಾಂಶಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಪರಿಣಾಮವಾಗಿ, ಇದು ದೇಹದ ತೂಕವನ್ನು ನಿತಂತ್ರಿಸಲು ಸಹಾಯ ಮಾಡುತ್ತದೆ.
  • ಮನೆಯಲ್ಲಿ ಹೆಚ್ಚು ಬಳಕೆಯಾಗುವ ಮತ್ತು ಆಯುರ್ವೇದ ಚಿಕಿತ್ಸೆಯಲ್ಲಿ ಬಳಸುವ ಅರಿಶಿನ, ಇದು ಅಡುಗೆಯಲ್ಲಿ ಅದರ ವಿಶಿಷ್ಟವಾದ ಹಳದಿ ಬಣ್ಣವನ್ನು ನೀಡುವ ಅಂಶವಾಗಿದೆ. ಇದರ ಪ್ರಾಥಮಿಕ ಸಕ್ರಿಯ ಘಟಕಾಂಶವಾದ ಕರ್ಕ್ಯುಮಿನ್ ಪ್ರಬಲವಾದ ರೋಗ ನಿರೋಧಕ ಮತ್ತು ಉರಿಯೂತದ ನಿವಾರಕವಾಗಿದೆ. ಟೆಸ್ಟ್-ಟ್ಯೂಬ್ ಸಂಶೋಧನೆಯು ಇದು ಇತರ ಉರಿಯೂತದ ಔಷಧಿಗಳಂತೆಯೇ ಪರಿಣಾಮಕಾರಿಯಾಗಿರಬಹುದು ಎಂದು ಹೇಳಿದೆ, ಯಾವುದೇ ನಕಾರಾತ್ಮಕ ಪರಿಣಾಮಗಳಿಲ್ಲದೆ. ಅರಿಶಿನವು ರಕ್ತದ ಹರಿವನ್ನು ಹೆಚ್ಚಿಸುವ ಮೂಲಕ ಹೃದ್ರೋಗವನ್ನು ತಡೆಗಟ್ಟುವಲ್ಲಿ ಸಹಾಯ ಮಾಡುತ್ತದೆ.

ಆಯುರ್ವೇದ ಗಿಡಮೂಲಿಕೆಗಳು ಮತ್ತು ಮಸಾಲೆಗಳು ಶತಮಾನಗಳಿಂದ ಸಾಂಪ್ರದಾಯಿಕ ಭಾರತೀಯ ಔಷಧದ ಅವಿಭಾಜ್ಯ ಅಂಗವಾಗಿದೆ. ಹೆಚ್ಚಿನ ಪ್ರಮಾಣದ ವೈಜ್ಞಾನಿಕ ಪುರಾವೆಗಳು ಟೈಪ್ 2 ಡಯಾಬಿಟಿಸ್ ಮತ್ತು ಹೃದ್ರೋಗದ ವಿರುದ್ಧ ರಕ್ಷಣೆ ನೀಡುತ್ತವೆ ಎಂದು ತಿಳಿಸಿವೆ. ಜೊತೆಗೆ ಆರೋಗ್ಯ ಪ್ರಯೋಜನಗಳನ್ನು ನೀಡಿತ್ತವೆ. ಹೀಗಾಗಿ, ಈ ಪದಾರ್ಥಗಳನ್ನು ಸಣ್ಣ ಪ್ರಮಾಣದಲ್ಲಿ ಆಹಾರದಲ್ಲಿ ಸೇರಿಸುವುದರಿಂದ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ದೊಡ್ಡ ಪ್ರಮಾಣಗಳು ಎಲ್ಲರಿಗೂ ಸೂಕ್ತವಲ್ಲ, ಆದ್ದರಿಂದ ಆಯುರ್ವೇದ ಪದಾರ್ಥ( supplements) ಬಳಸುವ ಮೊದಲು ಆಯುರ್ವೇದಿಕ್​ ತಜ್ಞರಿಂದ ಸೂಕ್ತ ಸಲಹೆ ಪಡೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ:ಪ್ರತಿನಿತ್ಯ ಮಿಶ್ರ ಒಣಹಣ್ಣು ಸೇವನೆಯಿಂದ ಹೃದಯರಕ್ತನಾಳ ಸಮಸ್ಯೆ ಕಡಿಮೆಯಾಗುವ ಸಾಧ್ಯತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.