ETV Bharat / sukhibhava

ಅಸುರಕ್ಷಿತ ಆಹಾರ ಕ್ರಮದಿಂದ ವರ್ಷಕ್ಕೆ 4 ಲಕ್ಷ ಮಂದಿ ಸಾವು! ತಡೆಯುವುದು ಹೇಗೆ? - ಳವಣಿಗೆ ಮತ್ತು ಅಭಿವೃದ್ಧಿ ಕುಂಠಿತ

ಶುಚಿತ್ವ ಕಾಪಾಡದೇ ಇರುವುದು ಆಹಾರ ಕಲುಷಿತಗೊಳ್ಳುವುದಕ್ಕೆ ಕಾರಣ. ಈ ಬಗ್ಗೆ ಪ್ರತಿಯೊಬ್ಬರೂ ಕಾಳಜಿವಹಿಸಬೇಕಿದೆ.

4 lakh people die every year due to consumption of contaminated food; How to prevent food contamination?

author img

By

Published : May 18, 2023, 12:59 PM IST

ಅಸುರಕ್ಷಿತ ಆಹಾರ ಕಳಪೆ ಆರೋಗ್ಯಕ್ಕೆ ಹೆಚ್ಚಿನ ಕೊಡುಗೆ ನೀಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್​ಒ) ತಿಳಿಸಿದೆ. ಇದರಿಂದ ಬೆಳವಣಿಗೆ ಮತ್ತು ಅಭಿವೃದ್ಧಿ ಕುಂಠಿತ, ಸೂಕ್ಷ್ಮ ಪೌಷ್ಠಿಕಾಂಶ ಕೊರತೆ, ಸಾಂಕ್ರಾಮಿಕವಲ್ಲದ ಸೋಂಕಿನ ರೋಗ ಮತ್ತು ಮಾನಸಿಕ ಅಸ್ವಸ್ಥತೆಯ ಅಪಾಯ ಕಾಡುತ್ತದೆ. ಜಾಗತಿಕವಾಗಿ ಪ್ರತಿ ವರ್ಷ 10ರಲ್ಲಿ ಒಂದು ಮಕ್ಕಳು ಈ ಆಹಾರದಿಂದ ಹರಡುವ ರೋಗಕ್ಕೆ ತುತ್ತಾಗುತ್ತಿದ್ದಾರೆ. ಈ ಕುರಿತು ಆಫ್ರಿಕನ್ ಜನಸಂಖ್ಯೆ ಮತ್ತು ಆರೋಗ್ಯ ಸಂಶೋಧನಾ ಕೇಂದ್ರದ ಪೌಷ್ಠಿಕಾಂಶ ಸಂಶೋಧಕರಾಗಿರುವ ಅನ್ಟೊನಿನ ಮುತೊರೊ ತಿಳಿಸಿದ್ದು, ಯಾವುದೇ ಕಲುಷಿತ ಆಹಾರ, ಹೇಗೆ ಅಪಾಯದ ಕಡಿಮೆ ಮಾಡಿಕೊಳ್ಳಬಹುದು ಎಂದು ವಿಶ್ಲೇಷಿಸಿದ್ದಾರೆ.

ಸುರಕ್ಷಿತ ಮತ್ತು ಪೌಷ್ಟಿಕಾಂಶ ಆಹಾರ ಪಡೆಯುವುದು ಮಾನವನ ಮೂಲಭೂತ ಹಕ್ಕಾಗಿದೆ. ಆದರೆ, ಇದನ್ನು ಅನೇಕರು ಪಡೆಯುತ್ತಿಲ್ಲ. ಇದಕ್ಕೆ ಕಾರಣ ಕಲುಷಿತ ಆಹಾರ. ಹಾನಿಕಾರಕ ರಾಸಾಯನಿಕ, ಆಹಾರದಲ್ಲಿನ ಸೂಕ್ಷ್ಮಜೀವಿಗಳು ಅನಾರೋಗ್ಯವನ್ನು ಉಂಟು ಮಾಡುತ್ತದೆ. ಡಬ್ಲ್ಯೂಎಚ್​ಒ ಪ್ರಕಾರ, ಕಲುಷಿತ ಆಹಾರದಿಂದ ವಾರ್ಷಿಕವಾಗಿ 4,20,000 ಮಂದಿ ಸಾವನ್ನಪ್ಪುತ್ತಿದ್ದಾರೆ.

ಹೀಗೂ ಕಲುಷಿತವಾಗಬಹುದು ಆಹಾರ: ಭೌತಿಕ: ಆಹಾರಗಳು ರೋಗಕಾರಕ ಸೂಕ್ಷ್ಮಜೀವಿಗಳ ಸಾಗಣೆ ಮಾಡಬಹುದು. ಲೋಹ, ಗಾಜು ಅಥವಾ ಕಲ್ಲಿನ ತುಣುಕುಗಳು ಉಸಿರಿನಲ್ಲಿ ಸಿಲುಕಬಹುದು ಅಥವಾ ಹಲ್ಲಿಗೆ ಹಾನಿ ಮಾಡಬಹುದು. ಕೂದಲು ಕೂಡ ಭೌತಿಕ ಕಲುಷಿತವಾಗಿದೆ.

ಜೈವಿಕ: ಬ್ಯಾಕ್ಟೀರಿಯಾ, ವೈರಸ್​, ಪ್ರೊಟೊಜೋವಾ ಸೂಕ್ಷ್ಮ ಜೀವಿಗಳು, ಜಿರಳೆ, ಇಲಿಯಂತಹ ಕೀಟಗಳು, ಹುಳುಗಳಂತಹ ಪರಾವಲಂಬಿಗಳು ಕೂಡ ಇದಕ್ಕೆ ಕಾರಣವಾಗಬಹುದು.

ರಾಸಾಯನಿಕ: ಸೋಪ್​ ಅವಶೇಷ, ರಸಗೊಬ್ಬರದ ಅವಶೇಷ ಮತ್ತು ಅಫ್ಲಾಟೊಕ್ಸಿನ್ಸ್​​ ಸೂಕ್ಷ್ಮ ಜೀವಿಗಳ ಉತ್ಪಾದಿಸುವ ಹಾನಿಕಾರಕ ಉತ್ಪನ್ನಗಳು ವಿಷವಾಗುತ್ತದೆ.

ಆಹಾರ ಕಲುಷಿತಕ್ಕೆ ಸಾಮಾನ್ಯ ಕಾರಣ: ಕಳಪೆ ಆಹಾರ ನಿರ್ವಹಣೆ ಇದಕ್ಕೆ ಸಾಮಾನ್ಯ ಕಾರಣವಾಗಿದೆ. ಆಹಾರ ಸೇವನೆ ಮತ್ತು ತಯಾರಿಸುವ ಮೊದಲು, ಶೌಚಾಲಯ ಬಳಕೆ, ಮೂಗು ಶುಚಿ ಬಳಿಕ ಅಥವಾ ಕೆಮ್ಮು, ಸೀನಿನ ಬಳಿಕ ಸರಿಯಾಗಿ ಕೈ ತೊಳೆಯದೇ ಇರುವುದು ಇದಕ್ಕೆ ಕಾರಣವಾಗುತ್ತದೆ.

ಅಶುಚಿ ಕ್ರಮ: ಅಶುಚಿಯಾದ ಪಾತ್ರೆಗಳ ಬಳಕೆ, ಹಣ್ಣು ಮತ್ತು ತರಕಾರಿಗಳನ್ನು ಸರಿಯಾಗಿ ತೊಳೆಯದೇ ಇರುವುದು, ಕಚ್ಛಾ ಆಹಾರಗಳ ಸಂಗ್ರಹ ಮತ್ತು ಅದೇ ಸ್ಥಳದಲ್ಲಿ ಬೇಯಿಸುವುದು ಕೂಡ ಹಾನಿಕಾರಕವೇ. ರೋಗಿಗಳು ಆಹಾರ ನಿರ್ವಹಣೆ ಮಾಡುವುದು ಕೂಡ ಸರಿಯಲ್ಲ. ಅವರಿಂದ ತಯಾರಿಸಿದ ಆಹಾರಗಳನ್ನು ಸೇವಿಸುವುದು ಅದರಲ್ಲೂ ಮಾಂಸಾಹಾರ ಸೇವಿಸುವುದು ತಪ್ಪಿಸಬೇಕು. ಬೆಳೆಗಳಿಗೆ ಹೆಚ್ಚಿನ ಕ್ರೀಮಿನಾಶಕ, ಆ್ಯಂಟಿಬಯೋಟಿಕ್​ ಬಳಕೆ ಮಾಡುವುದು. ಅಶುದ್ದ ಮಣ್ಣು, ನೀರಿನಲ್ಲಿ ತರಕಾರಿ ಬೆಳೆಯುವುದು ಕೂಡ ಒಳ್ಳೆಯದಲ್ಲ.

ತಾಜಾ ಆಹಾರಗಳು ಕೂಡ ಅನೇಕ ಸಮಸ್ಯೆಗಳನ್ನು ತರುತ್ತದೆ. ಕೀನ್ಯಾದಲ್ಲಿ ಹಣ್ಣು ಮತ್ತು ತರಕಾರಿಗಳು ಮಾನವನ ತ್ಯಾಜ್ಯಕ್ಕೆ ಸಮಾನವಾಗಿ ಕಲುಷಿತಗೊಂಡಿರುತ್ತದೆ. ಕಾರಣ ಇವುಗಳನ್ನು ಕಲುಷಿತ ನೀರಿನಲ್ಲಿ ಬಳಕೆ ಮಾಡುವುದು. ನೊಣಗಳು ಮಲಗಳ ಮೇಲೆ ಕುಳಿತು ಗಿಡದ ಎಲೆ ಅಥವಾ ಹಣ್ಣುಗಳ ಮೇಲೆ ಕೂರುವುದರಿಂದಲೂ ಬ್ಯಾಕ್ಟೀರಿಯಾಗಳು ಸಾಗಣೆಯಾಗುತ್ತದೆ. ಬೀದಿ ಬದಿಯ ಅಹಾರಗಳು ಮತ್ತೊಂದು ಕಲುಷಿತ ಆಹಾರದ ಮೂಲವಾಗಿದೆ. ಈ ಆಹಾರಗಳನ್ನು ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳಲ್ಲಿ ಕಾಣಬಹುದು. ಇವು ಅಗ್ಗ ಮತ್ತು ಸುಲಭವಾಗಿ ಸಿಗುವ ಹಿನ್ನೆಲೆಯಲ್ಲಿ ಇದರ ಮೊರೆ ಹೋಗುತ್ತಾರೆ.

ಕಲುಷಿತ ಆಹಾರ ಸೇವಿಸಿದ್ದೀರಿ ಎಂಬುದರ ಲಕ್ಷಣವೇನು?: ಸಾಮಾನ್ಯವಾಗಿ ಜೈವಿಕ ಮತ್ತು ರಾಸಾಯಾನಿಗಳು ಆಹಾರದಲ್ಲಿನ ಕಲುಷಿತವಾಗಿದೆ. ಇದು ಟೈಫೈಡ್​​​, ಕಾಲಾರ ಸೇರಿದಂತೆ 200 ಆಹಾರ ಸಂಬಂಧಿತ ಸಮಸ್ಯೆಗಳನ್ನು ತರಬಹುದು. ಡಯೇರಿಯಾ, ವಾಂತಿ ಮತ್ತು ಹೊಟ್ಟೆ ನೋವುಗಳು ಆಹಾರ ಸಂಬಂಧಿತ ಸಮಸ್ಯೆಗಳಾಗಿವೆ.

ಬಹುತೇಕ ಪ್ರಕರಣದಲ್ಲಿ ಈ ಆಹಾರ ಸಂಬಂಧಿತ ಸಮಸ್ಯೆಗಳು ನರವ್ಯವಸ್ಥೆಯ ಸಮಸ್ಯೆ, ಅಂಗಾಂಗಗಳ ವೈಫಲ್ಯ ಮತ್ತು ಸಾವಿಗೂ ಕಾರಣವಾಗಬಹುದು. ಈ ಹಿನ್ನೆಲೆಯಲ್ಲಿ ಏನಾದರೂ ತಿಂದ ಬಳಿಕ ಅಥವಾ ಕುಡಿದ ಬಳಿಕ ಡಯೇರಿಯಾ, ವಾಂತಿ ಲಕ್ಷಣ ಕಂಡಾಕ್ಷಣ ಚಿಕಿತ್ಸೆ ಪಡೆಯುವುದು ಉತ್ತಮ. ಐದು ವರ್ಷದ ಮಕ್ಕಳು ಈ ಆಹಾರ ಸಂಬಂಧಿತ ರೋಗದಿಂದ ಹೆಚ್ಚು ದುರ್ಬಲವಾಗುತ್ತಾರೆ. ಇದರಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಅಭಿವೃದ್ಧಿ ಹೊಂದುತ್ತಿರುವ ಹಿನ್ನೆಲೆಯಲ್ಲಿ ಅವರು ದೊಡ್ಡವರಂತೆ ಸೋಂಕಿನ ವಿರುದ್ಧ ಹೋರಾಡಲು ಸಾಧ್ಯವಾಗುವುದಿಲ್ಲ.

ಕಡಿಮೆ ಮತ್ತು ಮಧ್ಯಮ ಆದಾಯದ ದೇಶದಲ್ಲಿ ಮಕ್ಕಳಲ್ಲಿನ ಇಮ್ಯೂನಿಟಿ ಶಕ್ತಿ ಕುಗ್ಗುವಿಕೆಯಿಂದ ಅವರು ಅಪೌಷ್ಟಿಕಾಂಶತೆಗೆ ಒಳಗಾಗುತ್ತಾರೆ. ಅವರು ಪದೇ ಪದೇ ಕಳಪೆ ಸ್ವಚ್ಚತೆ ಆಹಾರಕ್ಕೆ ತೆರೆದು ಕೊಳ್ಳುವುದರಿಂದ ಅಪಾಯ ಹೆಚ್ಚುತ್ತದೆ. ಅನಾರೋಗ್ಯಕ್ಕೆ ಒಳಗಾಗುವ ಅವರಲ್ಲಿ ದುರ್ಬಲ ಜೀರ್ಣಾಂಗ ರಚನೆಯಾಗುತ್ತದೆ. ಇದರಿಂದ ಆಹಾರ ತೆಗೆದುಕೊಳ್ಳುವ ಪ್ರಮಾಣ ಕಡಿಮೆಯಾಗುತ್ತದೆ.

ಗರ್ಭಿಣಿಯರು ಮತ್ತು ಜನರು ಕೂಡ ಅನಾರೋಗ್ಯದಿಂದ ರೋಗ ನಿರೋಧಕ ಶಕ್ತಿ ಕಡಿಮೆ ಹೋಗುತ್ತದೆ. ಇವರು ಹೆಚ್ಚಿನ ಕಾಳಜಿವಹಿಸಬೇಕಿದೆ. ಆಹಾರ ಸಂಬಂಧಿತ ರೋಗಗಳು ಆರ್ಥಿಕ ನಕಾರಾತ್ಮಕ ಪರಿಣಾಮ ಹೊಂದಿರುತ್ತದೆ. ವಿಶೇಷವಾಗಿ ಕಡಿಮೆ ಮತ್ತು ಮಧ್ಯಮ ಅಪಾಯ ಹೊಂದಿರುವ ದೇಶದಲ್ಲಿ ಹೊರೆಯಾಗಲಿದೆ. ವಿಶ್ವಬ್ಯಾಂಕ್​ ವಾರ್ಷಿಕವಾಗಿ ಈ ಸಮಸ್ಯೆ ಚಿಕಿತ್ಸೆಗೆ 15 ಬಿಲಿಯನ್​ ವ್ಯಯ ಮಾಡುತ್ತಿದೆ.

ಈ ರೀತಿ ತಡೆಗಟ್ಟಬಹುದು: ಆಹಾರ ಸೇವನೆ ಮತ್ತು ತಯಾರಿಸುವ, ಶೌಚಾಲಯದ ಬಳಕೆ ಬಳಿಕ ಕೈಗಳನ್ನು ಸರಿಯಾಗಿ ಶುಚಿಗೊಳಿಸಬೇಕು. ಆಹಾರ ತಯಾರಿಸುವ ಮುನ್ನ ಶುಚಿಯಾದ, ರಕ್ಷಣಾತ್ಮಕ ಬಟ್ಟೆ ಧರಿಸಬೇಕು. ಆಹಾರವನ್ನು ಸರಿಯಾಗಿ ಸಂಗ್ರಹಿಸಬೇಕು. ಕಚ್ಛಾ ಆಹಾರಗಳನ್ನು ಸರಿಯಾಗಿ ಶುಚಿ ಮಾಡಬೇಕು. ಕಚ್ಚಾ ಮತ್ತು ಬೇಯಿಸಿದ ಆಹಾರವನ್ನು ಬೇರೆಯಾಗಿ ಇಡಬೇಕು. ಮಾಂಸ ಮತ್ತು ಇತರೆ ಆಹಾರಕ್ಕೆ ಪ್ರತ್ಯೇಕ ಪಾತ್ರೆ ಇಡಬೇಕು. ಬೇಸಾಯದಲ್ಲಿ ಉತ್ತಮ ಅಭ್ಯಾಸಗಳು, ಶುಚಿಯಾದ ನೀರಿನ ಬಳಕೆ, ಒಪ್ಪಿತ ರಸಗೊಬ್ಬರ ಬಳಕೆಗಳು ಕೂಡ ಆಹಾರ ಕಲುಷಿತವಾಗದಂತೆ ತಡೆಯುತ್ತದೆ.

ಇದನ್ನೂ ಓದಿ: ಮಾಂಸ ಬೇಯಿಸುವ ಹೊಗೆಯಿಂದ ಆರ್ಥರೈಟಿಸ್​ ಸಾಧ್ಯತೆ: ಸಂಶೋಧನಾ ವರದಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.