ETV Bharat / sukhibhava

ತುಂಬಾನೇ ಆರೋಗ್ಯಕಾರಿ ಈ 'ಮಖಾನ' ಬೀಜಗಳು: ದೈನಂದಿನ ಆಹಾರ ಕ್ರಮದಲ್ಲಿ ನೀವೂ ಬಳಸಬಹುದು! - ಮಖಾನಾ ತಿನಿಸು

'ಮಖಾನ' ಎಂದ ಕೂಡಲೇ ತುಂಬಾ ಜನರಿಗೆ ತಿಳಿಯುವುದಿಲ್ಲ. ಈ ಹೆಸರು ಕೊಂಚ ಅಪರಿಚಿತ. ಲೋಟಸ್​ ಅಥವಾ ಫಾಕ್ಸ್ ಸೀಡ್ಸ್​ ಎಂದು ಕರೆಯಲ್ಪಡುವ ಮಖಾನವನ್ನು ಕನ್ನಡದಲ್ಲಿ ತಾವರೆ ಬೀಜಗಳು ಎಂದು ಹೇಳುತ್ತಾರೆ

makhana
'ಮಖಾನ' ಬೀಜ
author img

By

Published : Jul 16, 2022, 10:09 AM IST

ನವದೆಹಲಿ: ಫಾಕ್ಸ್‌ ನಟ್ ಎಂದು ಕರೆಯಲ್ಪಡುವ 'ಮಖಾನ'ವನ್ನು ದೇಶದ ಪೂರ್ವ ಪ್ರದೇಶಗಳಲ್ಲಿ ಹೇರಳವಾಗಿ ಬೆಳೆಯಲಾಗುತ್ತದೆ. ಬಿಹಾರದಲ್ಲಿ ಇದನ್ನು ವ್ಯಾಪಕವಾಗಿ ವಿವಿಧ ರೂಪಗಳಲ್ಲಿ ಸೇವಿಸಲಾಗುತ್ತದೆ. ಆಯುರ್ವೇದದ ಪ್ರಕಾರ ಈ ಬೀಜವು ಅನೇಕ ಪ್ರಯೋಜನಗಳನ್ನು ಹೊಂದಿದೆ. ಇದು ಹೃದಯ ರಕ್ತನಾಳದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಪ್ರಸವಾ ನಂತರದ ಗುಣಪಡಿಸುವಿಕೆಯನ್ನು ಉತ್ತೇಜಿಸುತ್ತದೆ ಮತ್ತು ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳ ಉತ್ತಮ ಮೂಲವಾಗಿದೆ.

ಪ್ರೊಟೀನ್ ಮತ್ತು ಖನಿಜಾಂಶಗಳಲ್ಲಿ ಅಧಿಕವಾಗಿರುವ ಮಖಾನ ಸುಲಭವಾಗಿ ಜೀರ್ಣವಾಗುವ ತಿನಿಸಾಗಿದೆ. ಮಖಾನ ಬೀಜಗಳು ತುಂಬಾ ಆರೋಗ್ಯಕಾರಿ ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ನೀವು ಮಖಾನವನ್ನು ಸೇರಿಸಿಕೊಳ್ಳಬಹುದು.

ಸಂಜೆಯ ಸ್ನ್ಯಾಕ್ಸ್ ಆಗಿ ಸವಿಯಬಹುದು: ಸಂಜೆಯ ವೇಳೆಯಲ್ಲಿ ಹೊಟ್ಟೆ ವಿಪರೀತವಾಗಿ ತಾಳ ಹಾಕಲು ಆರಂಭಿಸುತ್ತದೆ. ತಜ್ಞರ ಪ್ರಕಾರ ಈ ಸಮಯದಲ್ಲಿ ಹೊಟ್ಟೆಗೆ ಪೋಷಕಾಂಶಭರಿತ ಮತ್ತು ಹೊಟ್ಟೆಯನ್ನು ತುಂಬಿಸುವ ಆಹಾರವನ್ನು ನೀಡಬೇಕು. ಈ ಸಮಯದಲ್ಲಿ ನೀವು ಮಖಾನವನ್ನು ನಿಮ್ಮ ನೆಚ್ಚಿನ ಸಂಜೆಯ ಸ್ನ್ಯಾಕ್ಸ್ ಆಗಿ ನೀವು ಸವಿಯಬಹುದು.

ಮಖಾನ ಕ್ಯಾಲ್ಶಿಯಂ, ಮೆಗ್ನೇಷಿಯಮ್, ಐರನ್ ಹಾಗೂ ಜಿಂಕ್‌ನಿಂದ ಕೂಡಿದೆ. ಇದು ಒಳ್ಳೆಯ ಪ್ರಮಾಣದ ಕಾರ್ಬ್‌ಗಳನ್ನು ಒಳಗೊಂಡಿರುವುದರಿಂದ ನಿಮ್ಮ ಹೊಟ್ಟೆಯನ್ನು ಬೇಗನೇ ತುಂಬಿಸುತ್ತದೆ ಮತ್ತು ಹೆಚ್ಚು ಹೊತ್ತು ಹಸಿವಾಗುವಂತೆ ಮಾಡುವುದಿಲ್ಲ. ಇದು ಮೂಳೆಗಳನ್ನು ಬಲಪಡಿಸುತ್ತದೆ ಅಂತೆಯೇ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ದೇಹದಲ್ಲಿರುವ ಚಯಾಪಚಯ ಕ್ರಿಯೆಯನ್ನು ತ್ವರಿತಗೊಳಿಸುತ್ತದೆ.

ಮಧು ಮೇಹಿಗಳಿಗೆ ಸೂಕ್ತ: ಮಖಾನ ಬೀಜಗಳು ಮಧುಮೇಹಿ ಮತ್ತು ಹೃದಯ ರಕ್ತನಾಳಗಳ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಬಹಳ ಒಳ್ಳೆಯ ಆಹಾರ ಎನಿಸಿವೆ. ಏಕೆಂದರೆ ಇವುಗಳಲ್ಲಿ ದೇಹಕ್ಕೆ ಅಗತ್ಯ ಇರುವ ಒಳ್ಳೆಯ ಕೊಬ್ಬಿನ ಅಂಶಗಳು ಹೇರಳವಾಗಿದ್ದು, ಸ್ಯಾಚುರೇಟೆಡ್ ಕೊಬ್ಬಿನ ಅಂಶಗಳು ಬಹಳಷ್ಟು ಕಡಿಮೆ ಇವೆ. ಗ್ಲುಟನ್ ರಹಿತ, ಕಾರ್ನ್ ರಹಿತ, ಪ್ರೊಟೀನ್‌ನಿಂದ ಸಮೃದ್ಧವಾಗಿರುವ ಮಖಾನ ಪಾಪ್‌ಕಾರ್ನ್‌ಗಿಂತ ಕಡಿಮೆ ಕ್ಯಾಲೊರಿಯನ್ನು ಹೊಂದಿದೆ. ಇದರಲ್ಲಿ ಶೇ. 67ಕ್ಕಿಂತ ಕಡಿಮೆ ಕೊಬ್ಬಿನಂಶವಿದ್ದು, ಶೇ.20ಕ್ಕಿಂತ ಕಡಿಮೆ ಕ್ಯಾಲರಿಗಳಿವೆ ಮತ್ತು ಶೇ.50ಕ್ಕಿಂತ ಹೆಚ್ಚಿನ ಪ್ರೊಟೀನ್ ಅಂಶವಿದೆ.

ತ್ವಚೆಯ ಹೊಳಪಿಗೆ ಸಹಾಯಕ: ಮಖಾನದಲ್ಲಿ ಆ್ಯಂಟಿ -ಆಕ್ಸಿಡೆಂಟ್‌ಗಳು ಹೇರಳವಾಗಿರುವುದರಿಂದ ಇದು ತ್ವಚೆಗೆ ಅತ್ಯುತ್ತಮವಾಗಿದೆ. ಇದು ಕೂದಲಿನ ಕಾಳಜಿಯನ್ನೂ ಮಾಡುತ್ತದೆ. ಹೃದಯ ರೋಗ, ಕ್ಯಾನ್ಸರ್, ಟೈಪ್ 2 ಡಯಾಬಿಟೀಸ್ ವಿರುದ್ಧ ಹೋರಾಡಲು ಇದು ಉಪಯುಕ್ತವಾಗಿದೆ. ಉರಿಯೂತವನ್ನು ಕಡಿಮೆ ಮಾಡಲು ಸಹ ಸಹಾಯಕವಾಗಿವೆ.

ಸಂಧಿವಾತ, ಸೋರಿಯಾಸಿಸ್ ಮತ್ತು ಉರಿಯೂತದ ಕರುಳಿನ ಕಾಯಿಲೆಯಂತಹ ಅಪಾಯವನ್ನು ನಿವಾರಿಸಬಹುದು. ಸಂಜೆಯ ಸಮಯ ಜಂಕ್ ಫುಡ್, ಕುರುಕಲು ತಿಂಡಿ ಸೇವಿಸಿ ಆರೋಗ್ಯವನ್ನು ಹೆದಗೆಡಿಸಿಕೊಳ್ಳುವುದಕ್ಕಿಂತ ಆರೋಗ್ಯಕ್ಕೆ ಅತ್ಯುತ್ತಮವಾಗಿರುವ ಮಖಾನ ಸೇವನೆ ತುಂಬಾ ಒಳ್ಳೆಯದು.

ಡಯಟ್ ಮಾಡುವವರಿಗೆ ಸಹಕಾರಿ: ಮಖಾನ ಬೀಜಗಳಲ್ಲಿ ಪ್ರೋಟೀನ್ ಅಂಶ ಅಧಿಕವಾಗಿದೆ. ಡಯಟ್ ಮಾಡಿ ದೇಹದ ತೂಕ ಕರಗಿಸಿಕೊಳ್ಳುವ ವ್ಯಕ್ತಿಗಳಿಗೆ ಉಪವಾಸದ ಸಮಯದಲ್ಲಿ ಇವುಗಳು ಸಹಾಯಕ್ಕೆ ಬರುತ್ತವೆ. ಬೆಳಗಿನ ಸಮಯದಲ್ಲಿ ಒಂದು ಹಿಡಿ ಮಖಾನ ಬೀಜಗಳನ್ನು ಸೇವಿಸಿದರೆ ಇಡೀ ದಿನ ಹಸಿವಿಲ್ಲದೇ ಸುಲಭವಾಗಿ ತಮ್ಮ ತಮ್ಮ ಕಾರ್ಯ ಚಟುವಟಿಕೆಗಳಲ್ಲಿ ಭಾಗವಹಿಸಬಹುದು.

ಇದನ್ನೂ ಓದಿ: ಯಾವ ವಯಸ್ಸಿನವರು ಎಷ್ಟು ಆಲ್ಕೊಹಾಲ್ ಸೇವಿಸಬಹುದು? ಸಂಶೋಧನಾ ವರದಿ ಇಲ್ಲಿದೆ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.