ನವದೆಹಲಿ: ಭಾರತದಲ್ಲಿ ಕಂಡು ಬರುವ ಶೇ 15 ರಿಂದ 20ರಷ್ಟು ಬೆನ್ನುಮೂಳೆ ಮುರಿತ ಪ್ರಕರಣಗಳು ರಸ್ತೆ ಅಪಘಾತದಿಂದ ಸಂಭವಿಸುತ್ತವೆ. ಇದನ್ನು ಕನಿಷ್ಠ ಆಕ್ರಮಣಶೀಲ ಶಸ್ತ್ರ ಚಿಕಿತ್ಸೆಗಳ ಮೂಲಕ ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಬಹುದು ಎಂದು ಮೂಳೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ವಿಶ್ವ ಬೆನ್ನು ಮೂಳೆ ಮುರಿತ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 5ರಂದು ಆಚರಿಸಲಾಗುತ್ತದೆ. ಈ ಮೂಲಕ ಬೆನ್ನು ಮೂಳೆ ಮುರಿತದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ.
ಫರೀದಾಬಾದ್ನ ಸರ್ವೋದಯ ಆಸ್ಪತ್ರೆಯ ಮೂಳೆ ಮತ್ತು ಬೆನ್ನುಹುರಿ ತಜ್ಞ ಡಾ ಅಶೀಶ್ ಥೋಮರ್ ಮಾತನಾಡಿ, ರಸ್ತೆ ಅಪಘಾತದಿಂದ ಗಂಭೀರ ಬೆನ್ನುಹುರಿ ಸಮಸ್ಯೆ ಮತ್ತು ಇದಕ್ಕೆ ಸಂಬಂಧಿಸಿದ ಅನೇಕ ಗಾಯಗಳಿಗೆ ಒಳಗಾಗುತ್ತಿರುವವರ ಸಂಖ್ಯೆ ಸಮಾಜದಲ್ಲಿ ಹೆಚ್ಚಾಗುತ್ತಿದೆ. ಟ್ರಾಮ ಮತ್ತು ಬೆನ್ನು ಹುರಿ ಗಾಯ ಸಂಬಂಧ ಅನೇಕ ರೋಗಿಗಳು ಇಂದು ಹೆಚ್ಚಾಗುತ್ತಿದ್ದು, ಇದಕ್ಕೆ ಕಾರಣ ಅಪಘಾತಗಳ ಸಂಖ್ಯೆ ಕೂಡ ಹೆಚ್ಚಿರುವುದು. ವಾಹನಗಳ ನಿರ್ಮಾಣದಲ್ಲಿ ಸುರಕ್ಷತಾ ಮಟ್ಟ ಕಡಿಮೆ, ಅಸಮರ್ಪಕತೆ ಮತ್ತು ಕಳಪೆ ರಸ್ತೆಗಳು ಮತ್ತು ಚಾಲನೆಯ ಗುಣಮಟ್ಟದಲ್ಲಿನ ಸಮಸ್ಯೆಗಳು ರಸ್ತೆ ಅಪಘಾತಗಳಿಗೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.
ಕಳೆದ 10 ವರ್ಷದಲ್ಲಿ ರಸ್ತೆ ಅಪಘಾತದಲ್ಲಿ ಬೆನ್ನು ಹುರಿ ಮೂಳೆ ಸಮಸ್ಯೆಗೆ ಒಳಗಾಗುವ ಸಂಖ್ಯೆ ಶೇ 15ರಿಂದ 20ರಷ್ಟು ಹೆಚ್ಚಾಗಿದೆ. ಶೇ 90ರಷ್ಟು ಬೆನ್ನು ಹುರಿ ಮೂಳೆ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ, ಕನಿಷ್ಠ ಅಕ್ರಮಣಶೀಲ ಶಸ್ತ್ರ ಚಿಕಿತ್ಸೆ ಮೂಲಕ ನಿರ್ವಹಿಸಬಹುದಾಗಿದೆ. ಬೆನ್ನು ಮೂಳೆ ಶಸ್ತ್ರಚಿಕಿತ್ಸೆಗಳು ಸುರಕ್ಷಿತವಾಗಿದ್ದು, ಸಾಮಾನ್ಯ ಅಪಾಯವನ್ನು ಹೊಂದಿದೆ. ಆದಾಗ್ಯೂ ಅನೇಕ ರೋಗಿಗಳು ಹಲವು ವರ್ಷಗಳ ಕಾಲ ಈ ಬೆನ್ನು ಮೂಳೆ ಶಸ್ತ್ರಚಿಕಿತ್ಸೆಯಿಂದ ಬಳಲುತ್ತಾರೆ. ಮತ್ತೆ ಕೆಲವರು ಈ ಶಸ್ತ್ರ ಚಿಕಿತ್ಸೆಗೆ ಒಳಗಾಗುವುದನ್ನು ತಪ್ಪಿಸುತ್ತಾರೆ. ಕೆಲವರ ಬೆನ್ನು ಮೂಳೆ ಸಮಸ್ಯೆ ಉಲ್ಬಣಕ್ಕೆ ಕಾರಣ, ರೋಗಿಗಳು ಹಲವು ವರ್ಷಗಳ ಕಾಲ ತಮ್ಮ ಈ ಸಮಸ್ಯೆಗೆ ಚಿಕಿತ್ಸೆಯನ್ನು ಪಡೆಯಲು ಮುಂದಾಗದಿರುವುದು ಎಂದಿದ್ದಾರೆ.
ಬೆನ್ನು ಮೂಳೆ ಸಮಸ್ಯೆಗಳು ಕನಿಷ್ಠ ಆಕ್ರಮಣಶೀಲ ಶಸ್ತ್ರ ಚಿಕಿತ್ಸೆಗಳಿಂದ ಶೇ 15ರಿಂದ 20 ವರ್ಷ ಜಾಗತಿಕ ಮತ್ತು ಭಾರತದಲ್ಲಿ ನಿರ್ವಹಣೆ ಮಾಡಬಹುದಾಗಿದೆ.
ಇದೀಗ ಶೇ 90ರಷ್ಟು ಬೆನ್ನು ಮೂಳೆ ಶಸ್ತ್ರಚಿಕಿತ್ಸೆ ಸಾಮಾನ್ಯ ಆಕ್ರಮಣಶೀಲವಾಗಿದೆ. ಬಹುತೇಕ ಪ್ರಕರಣದಲ್ಲಿ ಈ ಗಾಯಗಳು ಬೆನ್ನು ಮೂಳೆಯ ಕೆಳ ಪ್ರದೇಶದಲ್ಲಿ ಕಂಡು ಬರುತ್ತದೆ. ಇದನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಬಹುದಾಗಿದೆ. ಮೇಲಿನ ಮಟ್ಟದ ಅಂದರೆ ಕುತ್ತಿಗೆ ಪ್ರದೇಶದ ಗಾಯಗಳಿಗೂ ಶಸ್ತ್ರ ಚಿಕಿತ್ಸೆ ನಡೆಸಲಾಗುವುದು. ಕನಿಷ್ಠ ಆಕ್ರಮಣಶೀಲ ಶಸ್ತ್ರಚಿಕಿತ್ಸೆ ಬಳಿಕ ರೋಗಿಗಳು ಒಂದೆರಡು ದಿನಗಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ತಮ್ಮ ದೈನಂದಿನ ಚಟುವಟಿಕೆಗೆ ಬೇಗ ಮರಳಬಹುದಾಗ. ಇದು ಸಾಂಪ್ರದಾಯಿಕ ಶಸ್ತ್ರಚಿಕಿತ್ಸೆಗೆ ವ್ಯತಿರಿಕ್ತವಾಗಿದ್ದು, ವ್ಯಕ್ತಿಯೊಬ್ಬ ತನ್ನ ದೈನಂದಿನ ಜೀವನಶೈಲಿಗೆ ಮರಳಲು 3 ರಿಂದ 4 ತಿಂಗಳುಗಳ ಅಗತ್ಯವಿದೆ ಎನ್ನುತ್ತಾರೆ.
ಇದೇ ವೇಳೆ ಶಸ್ತ್ರ ಚಿಕಿತ್ಸೆಗೆ ಒಳಗಾದ ವ್ಯಕ್ತಿ ಅನೇಕ ರಕ್ಷಣಾತ್ಮಕ ಕ್ರಮವನ್ನು ನಡೆಸುವುದು ಮುಖ್ಯ. ರಕ್ಷಣಾತ್ಮಕ ಸೀಟ್ ಬೆಲ್ಟ್ಗಳು ಬೆನ್ನು ಮೂಳೆ ಗಾಯಗಳಿಂದ ರಕ್ಷಣೆ ಮಾಡುತ್ತದೆ. ಜೊತೆಗೆ ಕೆಟ್ಟ ಕುಳಿತುಕೊಳ್ಳುವ ಭಂಗಿಗಳು ಕೂಡ ಮೂಳೆಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ ಡಾ ಥೋಮರ್.
ಕೆಟ್ಟ ಕುಳಿತುಕೊಳ್ಳುವ ಭಂಗಿ ವಿಶೇಷವಾಗಿ ಕುರ್ಚಿಯಲ್ಲಿ ದೀರ್ಘಕಾಲ ಕುಳಿತುಕೊಳ್ಳುವಾಗ ಬೆನ್ನು ಸಂಕುಚಿತಗೊಳ್ಳುತ್ತದೆ. ಇದು ಮೈಲೊಪಥಿಯಂತಹ ಸುಸ್ಥಿರ ಬೆನ್ನು ಮೂಳೆ ಸಮಸ್ಯೆಗೆ ಕಾರಣವಾಗುತ್ತದೆ. ಹಲವು ವರ್ಷ ಇದೇ ರೀತಿ ಸಂಕುಚಿತಗೊಂಡಾಗ ಅದು ದುರ್ಬಲವಾಗಿ ಇದು ಗಂಭೀರ ಸಮಸ್ಯೆಗೆ ಕಾರಣವಾಗಬಹುದು ಎಂದಿದ್ದಾರೆ.
ಇದನ್ನೂ ಓದಿ: ಶ್ವಾಸಕೋಶ ಸಮಸ್ಯೆ ಹೊಂದಿರುವವರ ಮಕ್ಕಳು, ವಯಸ್ಕರಲ್ಲಿ ಹವಾಮಾನ ಬದಲಾವಣೆ ಮತ್ತಷ್ಟು ಅಪಾಯ ಹೆಚ್ಚಿಸಿದೆ: ಅಧ್ಯಯನ