ETV Bharat / state

ಯಾದಗಿರಿ: ಗಮನ ಬೇರೆಡೆ ಸೆಳೆದು 5 ಲಕ್ಷ ನಗದು ಕದ್ದ ಕಳ್ಳರು - 5ಲಕ್ಷ ಹಣ ಕಳ್ಳತನ

ಹತ್ತು ಮತ್ತು ನೂರು ರೂಪಾಯಿ ನೋಟುಗಳನ್ನು ಎಸೆದು ಗಮನ ಬೇರೆಡೆ ಸೆಳೆದು ಬ್ಯಾಂಕ್​ ನಿಂದ ಬಿಡಿಸಿದ್ದ 5 ಲಕ್ಷ ಹಣ ಕಳ್ಳತನವಾದ ಘಟನೆ ನಡೆದಿದೆ. ಪೊಲೀಸರು ತನಿಖೆ ಕೈಗೊಂಡಿದ್ದು ಸಿಸಿ ಕ್ಯಾಮೆರಾ ದೃಶ್ಯಗಳನ್ನು ಪರಿಶೀಲಿಸಿದ್ದಾರೆ.

5 lakhs of cash was stolen
ಯಾದಗಿರಿ: ಗಮನ ಬೇರೆಡೆ ಸೆಳೆದು 5 ಲಕ್ಷ ನಗದು ಕದ್ದ ಕಳ್ಳರು
author img

By

Published : May 6, 2022, 6:55 PM IST

Updated : May 6, 2022, 7:21 PM IST

ಯಾದಗಿರಿ: ಗಮನ ಬೇರೆಡೆ ಸೆಳೆದು 5ಲಕ್ಷ ರೂ. ಹಣ ದೋಚಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಹಳೆ ಬಸ್ ನಿಲ್ದಾಣದ ಸಮೀಪ ಇರುವ ಮಹಾಲಕ್ಷ್ಮಿ ಮೆಡಿಕಲ್ ಶಾಪ್ ಮುಂದೆ ಈ ಘಟನೆ ನಡೆದಿದೆ. ವಡಗೇರಾ ತಾಲೂಕಿನ ಕೋನಳ್ಳಿ ಗ್ರಾಮದ ಖಾಜಾಸಾಬ್​​​ ತಮ್ಮೂರಿನ ವೀರನಗೌಡ ಎಂಬುವವರೊಂದಿಗೆ ತನ್ನ ಬೈಕ್‌ನಲ್ಲಿ ಯಾದಗಿರಿಗೆ ಬಂದು ಸ್ಟೇಷನ್ ರಸ್ತೆಯ ಎಸ್‌ಬಿಐ ಬ್ಯಾಂಕಿನಲ್ಲಿ 5 ಲಕ್ಷ ರೂ. ಡ್ರಾ ಮಾಡಿಕೊಂಡಿದ್ದಾರೆ. ಅಲ್ಲಿಂದ ಹೊರಟು ಹಳೆ ಬಸ್ ನಿಲ್ದಾಣದ ಹತ್ತಿರ ಇರುವ ಮಹಾಲಕ್ಷ್ಮಿ ಮೆಡಿಕಲ್ ಸ್ಟೋರ್‌ಗೆ ಹೋದಾಗ ಅಪರಿಚಿತ ವ್ಯಕ್ತಿ ಹತ್ತು ಮತ್ತು ನೂರು ರೂಪಾಯಿ ನೋಟುಗಳನ್ನು ಎಸೆದು ಗಮನ ಬೇರೆಡೆ ಸೆಳೆದಿದ್ದಾರೆ.

ಗಮನ ಬೇರೆಡೆ ಸೆಳೆದು 5 ಲಕ್ಷ ನಗದು ಕದ್ದ ಕಳ್ಳರು

ಬೈಕ್‌ನ ಪೆಟ್ರೋಲ್ ಟ್ಯಾಂಕ್ ಬ್ಯಾಗ್‌ನಲ್ಲಿ ಇಟ್ಟಿದ್ದ 5 ಲಕ್ಷ ಹಣ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಎಸ್‌ಪಿ ಡಾ. ಸಿ.ಬಿ.ವೇದಮೂರ್ತಿ, ಡಿವೈಎಸ್‌ಪಿ ವೀರೇಶ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಈ ಪ್ರಕರಣದಲ್ಲಿ ಶಂಕಿತ ಆರೋಪಿ ಸಿಸಿಟಿವಿ ಸಾಕ್ಷ್ಯ ಫೋಟೋಗಳು ದೊರೆತಿವೆ ಎಂದು ಜಿಲ್ಲಾ ಎಸ್ಪಿ ಅವರು ತಿಳಿಸಿದ್ದಾರೆ.

ಪ್ರಮುಖ ವೃತ್ತಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಸಂಬಂಧಿಸಿದವರಿಗೆ ಮನವಿ ಮಾಡಿದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಅಕ್ರಮ ಮರಳು, ಅಧಿಕ ಭಾರದ ಮರಳು ಸಾಗಣೆಗೆ ಕಡಿವಾಣ, ಇಂಥ ಕಳ್ಳತನ ಪ್ರಕರಣಗಳಿಗೆ ಸಾಕ್ಷಿಯಾಗಿದೆ. ಕೂಡಲೇ ಕ್ಯಾಮೆರಾ ಅಳವಡಿಸಲು ಜನರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಮತ್ತೆ ಪಂಜಾಬ್​ನಲ್ಲಿ ಹಗಲು ದರೋಡೆ.. ಆರು ಲಕ್ಷ ಲೂಟಿ ಮಾಡಿ ಎಸ್ಕೇಪ್​ ಆದ ಖದೀಮರು!

Last Updated : May 6, 2022, 7:21 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.