ETV Bharat / state

ಯಾದಗಿರಿ: 14 ಕೋಟಿ ವೆಚ್ಚದಲ್ಲಿ ನಿರಂತರ ನೀರು ಯೋಜನೆ ಆರಂಭಿಸಿದ್ರೂ ತಪ್ಪಿಲ್ಲ ನೀರಿನ ಸಮಸ್ಯೆ - ನಿರಂತರ ನೀರು ಯೋಜನೆ

ಯಾದಗಿರಿ ಜಿಲ್ಲೆಯ ಜನರ ನೀರಿನ ಸಮಸ್ಯೆ ಬಗೆಹರಿಸಲು ಸರ್ಕಾರ 14 ಕೋಟಿ ವೆಚ್ಚದಲ್ಲಿ ನಿರಂತರ ನೀರು ಯೋಜನೆ ಆರಂಭಿಸಿ, ಯೋಜನೆಯಡಿಯಲ್ಲಿ ಜನರ ಮನೆಗಳಿಗೆ ನಲ್ಲಿ ಫಿಕ್ಸ್​ ಮಾಡಿ ಮೀಟರ್ ಕೂಡಾ ಅಳವಡಿಸಿದೆ. ಆದ್ರೆ ಸದ್ಯ ಮೀಟರ್ ಅಳವಡಿಸಿರೋದೆ ಜನರಿಗೆ ದೊಡ್ಡ ಸಮಸ್ಯೆಯಾಗಿದ್ದು, ಬರದೇ ಇರೋ ನೀರಿಗೆ ಜನರು ಬಿಲ್ ಪಾವತಿ ಮಾಡಬೇಕಾಗಿದೆ.

Tap
ನೆಲ್ಲಿ
author img

By

Published : Nov 4, 2020, 8:21 PM IST

ಯಾದಗಿರಿ: ಬಿಸಿಲ ನಾಡು ಹಿಂದುಳಿದ ಜಿಲ್ಲೆ ಯಾದಗಿರಿಯಲ್ಲಿ ಜನರು ನೀರಿಗಾಗಿ ಪರದಾಡುವುದು ಹೊಸದೇನಲ್ಲ, ಆದ್ರೆ ಈ ಪರದಾಟ ತಪ್ಪಿಸಲು ಸರ್ಕಾರ 14 ಕೋಟಿ ರೂ. ಖರ್ಚು ಮಾಡಿ ನಿರಂತರ ನೀರು ಸರಬರಾಜು ಯೋಜನೆ ಮಾಡಿದೆ. ಆದ್ರೆ ಈ ಯೋಜನೆ ಬಂದ ಮೇಲೆ ಜನರ ಕಷ್ಟ ಇನ್ನಷ್ಟು ದುಪ್ಪಟ್ಟಾಗಿದೆ. ಈ ಯೋಜನೆ ಜನರಿಗೆ ಗಾಯದ ಮೇಲೆ ಬರೆ ಎಳೆದಂತೆ ಮಾಡಿದ್ದು ಜನರ ಗೋಳು ಕೇಳುವವರಿಲ್ಲದಂತಾಗಿದೆ.

ಕಳೆದ ಐದು ವರ್ಷಗಳ ಹಿಂದೆ ಯಾದಗಿರಿ ಜಿಲ್ಲೆಯ ಜನರ ನೀರಿನ ಸಮಸ್ಯೆ ಬಗೆಹರಿಸಲು ಸರ್ಕಾರ 14 ಕೋಟಿ ವೆಚ್ಚದಲ್ಲಿ ನಿರಂತರ ನೀರು ಯೋಜನೆ ಆರಂಭಿಸಿ, ಈ ಯೋಜನೆಯಡಿಯಲ್ಲಿ ಜನರ ಮನೆಗಳಿಗೆ ನಲ್ಲಿ ಫಿಕ್ಸ್​ ಮಾಡಿ ಮೀಟರ್ ಕೂಡಾ ಅಳವಡಿಸಿದೆ. ಆದ್ರೆ ಸದ್ಯ ಮೀಟರ್ ಅಳವಡಿಸಿರೋದೆ ಜನರಿಗೆ ದೊಡ್ಡ ಸಮಸ್ಯೆಯಾಗಿದ್ದು, ಬರದೇ ಇರೋ ನೀರಿಗೆ ಜನರು ಬಿಲ್ ಪಾವತಿ ಮಾಡಬೇಕಾಗಿದೆ. ಇತ್ತ ಬಿಲ್ ಕೂಡಾ ಪಾವತಿಸಬೇಕು, ಅತ್ತ ನೀರು ಬರದೆ ಬೇರೆ ಕಡೆಯಿಂದ ನೀರು ತರಬೇಕು ಎನ್ನುವುದು ಸ್ಥಳೀಯರ ವಾದವಾಗಿದೆ.

ನೀರಿನ ಸಮಸ್ಯೆ

ಈ ನೀರಿನ ಯೋಜನೆಯಿಂದ ಜನರಿಗೆ ಯಾವುದೇ ಉಪಯೋಗವಾಗಿಲ್ಲ, ಹಾಕಿರೋ ನಲ್ಲಿಗಳು ಸಹ ಹಾಳಾಗಿದ್ದು. ಬಿಲ್ ಪಾವತಿಸುವಂತೆ ಅಧಿಕಾರಿಗಳು ದುಂಬಾಲು ಬಿದ್ದಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕೂಡಲೇ ಕೆಟ್ಟು ಹೋಗಿರುವ ನಲ್ಲಿಯ ಪೈಪ್ ಲೈನ್, ಹಾಗೂ ಮೀಟರ್​ಗಳನ್ನು ಸರಿಪಡಿಸುವ ಮೂಲಕ ಜನರಿಗೆ ನಿರಂತರ ನೀರು ಕೊಡಿಸುವ ಕೆಲಸ ಮಾಡಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ನಗರದಲ್ಲಿ ಇಷ್ಟೆಲ್ಲ ನೀರಿನ ಸಮಸ್ಯೆ ಇದ್ರು ಸಹ ಅಧಿಕಾರಿಗಳು ಮಾತ್ರ ಜನರಿಗೆ ಬಿಲ್ ನೀಡುತ್ತಿದ್ದಾರೆ, ಇದು ಜನರಿಗೆ ಹೊರೆಯಾಗುತ್ತಿದೆ. ಈ ವಿಚಾರವನ್ನು ನಗರ ಸಭೆ ಅಧಿಕಾರಿಗಳಿಗೆ ಈಟಿವಿ ಭಾರತ ಸಂಪರ್ಕಿಸಿ ವಿಚಾರಿಸಿದಾಗ, ಅಧಿಕಾರಿಗಳು ಹೇಳುವುದೇ ಬೇರೆ. 30 ವರ್ಷ ಹಳೆಯ ಸ್ಟೋರೆಜ್ ಟ್ಯಾಂಕ್ ಇದೆ. ನಗರದಲ್ಲಿ 10 ಎಮ್​ಎಲ್​ಡಿ ನೀರು ಪ್ರತಿದಿನ ಸರಬರಾಜು ಮಾಡಲಾಗುತ್ತೆ, ಆದ್ರೆ ಕೆಲವು ಪ್ರದೇಶಗಳಿಗೆ ನೀರು ಸರಬರಾಜಾಗುತ್ತಲ್ಲ, ಇದಕ್ಕೆ ಕಾರಣ ಕೇಳಿದ್ರೆ ನಗರದಲ್ಲಿ ನೀರು ಶೇಖರಣೆಗೆ ಅವಕಾಶ ಇಲ್ಲ, ಟ್ಯಾಂಕ್ ಪ್ರಮಾಣ ಕೂಡಾ ಸಣ್ಣದಿದೆ ಹೀಗಾಗಿ ಸಮರ್ಪಕವಾಗಿ ನೀರು ಸರಬರಾಜು ಮಾಡಲು ಸಾಧ್ಯವಾಗುತ್ತಿಲ್ಲ ಎಂದು ನಗರ ಸಭೆಯ ಎಇಇ ಅಶೋಕ್ ಕುಮಾರ್ ತಿಳಿಸಿದ್ದಾರೆ.

ಜನರ ಅನುಕೂಲಕ್ಕೆಂದು 14 ಕೋಟಿ ಖರ್ಚು ಮಾಡಿದ್ರು ಸಹ ಜನರಿಗೆ ನೀರು ತಲುಪುತ್ತಿಲ್ಲ, ಇತ್ತ ಮೀಟರ್ ಹಾಕಿ ಬಿಲ್ ಪಾವತಿಸುವಂತೆ ಜನರಿಗೆ ಕೂಡಾ ಅಧಿಕಾರಿಗಳು ಹೇಳುತ್ತಿದ್ದು ಜನರನ್ನು ಹೈರಾಣಾಗಿಸಿದೆ. ಸರ್ಕಾರ ಇತ್ತ ಕಡೆ ಗಮನ ಹರಿಸಿ ಸಮಸ್ಯೆ ಪರಿಹರಿಸಬೇಕಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.