ETV Bharat / state

ಫೆ. 20 ರಂದು ಗ್ರಾಮ ವಾಸ್ತವ್ಯ ಹೂಡಲಿರುವ ಯಾದಗಿರಿ ಡಿಸಿ ಡಾ.ರಾಗಪ್ರಿಯಾ - village stay program 20th

ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರ ಆದೇಶದ ಮೇರೆಗೆ ನಾನು ಸೇರಿದಂತೆ ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳು ಪ್ರತಿ ತಿಂಗಳ 3ನೇ ಶನಿವಾರ ಒಂದು ದಿನ ಹಳ್ಳಿಯಲ್ಲಿ ವಾಸ್ತವ್ಯ ಮಾಡಲಿದ್ದೇವೆ. ಈ ತಿಂಗಳ 20 ರಂದು ಸುರಪುರ ತಾಲೂಕಿನ ಖಾನಾಪೂರ ಎಸ್ ಹೆಚ್ ಗ್ರಾಮದಲ್ಲಿ ಒಂದು ದಿನ ವಾಸ್ತವ್ಯ ಮಾಡಲಿದ್ದೇವೆ ಎಂದು ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್ ತಿಳಿಸಿದರು.

ಯಾದಗಿರಿ ಡಿಸಿ ಡಾ.ರಾಗಪ್ರಿಯಾ
ಯಾದಗಿರಿ ಡಿಸಿ ಡಾ.ರಾಗಪ್ರಿಯಾ
author img

By

Published : Feb 18, 2021, 8:23 AM IST

ಯಾದಗಿರಿ: ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮದಡಿ ಯಾದಗಿರಿ ಡಿಸಿ ಡಾ.ರಾಗಪ್ರಿಯಾ ಆರ್ ಅವರು ಈ ತಿಂಗಳ 20 ರಂದು ಸುರಪುರ ತಾಲೂಕಿನ ಖಾನಾಪೂರ ಎಸ್ ಹೆಚ್ ಗ್ರಾಮದಲ್ಲಿ ಒಂದು ದಿನ ವಾಸ್ತವ್ಯ ಹೂಡಲಿದ್ದಾರೆ.

ಯಾದಗಿರಿ ಡಿಸಿ ಡಾ.ರಾಗಪ್ರಿಯಾ ಮಾಧ್ಯಮಗೋಷ್ಟಿ

ಈ ಕುರಿತು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಜಿಲ್ಲಾಧಿಕಾರಿ ಅವರು, ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರ ಆದೇಶದ ಮೇರೆಗೆ ನಾನು ಸೇರಿದಂತೆ ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳು ಪ್ರತಿ ತಿಂಗಳ 3ನೇ ಶನಿವಾರ ಒಂದು ದಿನ ಹಳ್ಳಿಯಲ್ಲಿ ವಾಸ್ತವ್ಯ ಮಾಡಲಿದ್ದೇವೆ. ಇದೇ 20 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಆ ಗ್ರಾಮದಲ್ಲಿನ ಗ್ರಾಮಸ್ಥರ ಪಹಣಿ, ಪಿಂಚಣಿ, ಆಶ್ರಯ ಮನೆಗಳ ಸಮಸ್ಯೆ, ಸರ್ಕಾರಿ ಭೂಮಿ ಒತ್ತುವರಿ, ಪಡಿತರ ಅಂಗಡಿಗಳ ಸಮಸ್ಯೆಗಳು ಸೇರಿದಂತೆ ಕಂದಾಯ ಇಲಾಖೆ ವ್ಯಾಪ್ತಿಗಳಲ್ಲಿ ಬರುವ ವಿವಿಧ ವ್ಯಾಜ್ಯಗಳಿಗೆ ಸ್ಥಳದಲ್ಲೇ ಪರಿಹಾರ ನೀಡುವ ಪ್ರಯತ್ನ ಮಾಡಲಾಗುತ್ತದೆ ಎಂದರು.

ಅದೇ ದಿನದಂದು ಜಿಲ್ಲೆಯ ಎಲ್ಲಾ ತಾಲೂಕಿನ ತಹಶೀಲ್ದಾರ್​ಗಳು‌ ಸಹ ತಮ್ಮ ತಾಲೂಕಿನ ‌ಒಂದು ಹಳ್ಳಿಯನ್ನು ಆಯ್ಕೆ ಮಾಡಿಕೊಂಡು ಒಂದು ದಿನ ಜನರ ಸಂಕಷ್ಟವನ್ನು ಆಲಿಸುತ್ತಾರೆ. ಕಂದಾಯ ಇಲಾಖೆ ಮಾತ್ರವಲ್ಲದೆ ಕೃಷಿ, ಪಂಚಾಯತ್, ಆಹಾರ ಮತ್ತು ನಾಗರಿಕ ಸರಬರಾಜು, ಪಶುಸಂಗೋಪನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆರೋಗ್ಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಸಹ ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.