ETV Bharat / state

ಯಾದಗಿರಿಯಲ್ಲಿ ಹಲವು ಗ್ರಾಮಗಳು ಜಲಾವೃತ: ಸುರಕ್ಷಿತ ಸ್ಥಳಗಳಿಗೆ ಜನರ ಸ್ಥಳಾಂತರ - etv bharat

ಬಸವ ಸಾಗರ ಜಲಾಯಶಯದಿಂದ ಹೆಚ್ಚುವರಿ ನೀರು ಹೊರಬಿಟ್ಟ ಹಿನ್ನೆಲೆ ಯಾದಗಿರಿ ಜಿಲ್ಲೆಯ ಹಲವು ಗ್ರಾಮಗಳು ಜಲಾವೃತವಾಗಿದ್ದು, ಸಹಾಯಕ ಆಯುಕ್ತರ ಮನವಿಯಂತೆ ಜನರು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗಿದ್ದಾರೆ.

ಯಾದಗಿರಿ: ಪ್ರವಾಹದಿಂದ ಗ್ರಾಮಗಳು ಜಲಾವೃತ, ಸುರಕ್ಷಿತ ಸ್ಥಳಗಳಿಗೆ ಜನರ ಸ್ಥಳಾಂತರ
author img

By

Published : Aug 7, 2019, 9:39 AM IST

ಯಾದಗಿರಿ: ಜಿಲ್ಲೆಯಲ್ಲಿ ಉಂಟಾದ ಪ್ರವಾಹಕ್ಕೆ ಹಲವು ಗ್ರಾಮಗಳು ಜಲಾವೃತವಾಗಿದ್ದು, ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಹುಣಸಗಿ ತಾಲೂಕಿನ ಬಸವಸಾಗರ ಜಲಾಶಯದಿಂದ 3,90,797 ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಹರಿಸಿದ ಹಿನ್ನೆಲೆ ಜಿಲ್ಲೆಯಾದ್ಯಂತ ನದಿ ಪಾತ್ರದ ಗ್ರಾಮಗಳು ಜಲಾವೃತವಾಗಿವೆ.

ಜೊತೆಗೆ ಆಲಮಟ್ಟಿ ಜಲಾಶಯದಲ್ಲಿ ಒಳಹರಿವು ಹೆಚ್ಚಾದ ಹಿನ್ನೆಲೆ ನಾಲ್ಕು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರನ್ನು ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಹರಿಸಲಾಗಿದೆ. ಇದರಿಂದಾಗಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ಶೆಳ್ಳಗಿ ಗ್ರಾಮ ಕೃಷ್ಣಾ ನದಿಯ ಪ್ರವಾಹದಿಂದ ಮುಳುಗುವ ಸಾಧ್ಯತೆಯಿದೆ. ಈ ಹಿನ್ನೆಲೆ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಸ್ಥಳಕ್ಕೆ ಭೇಟಿ ನೀಡಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರವಾಗುವಂತೆ ಜನರ ಮನವೊಲಿಸಿದ್ದಾರೆ.

ಯಾದಗಿರಿ: ಪ್ರವಾಹದಿಂದ ಗ್ರಾಮಗಳು ಜಲಾವೃತ, ಸುರಕ್ಷಿತ ಸ್ಥಳಗಳಿಗೆ ಜನರ ಸ್ಥಳಾಂತರ

ಸಹಾಯಕ ಆಯುಕ್ತರ ಮನವಿಗೆ ಒಪ್ಪಿದ ಗ್ರಾಮಸ್ಥರು ಸುರಪೂರ ಎಪಿಎಂಸಿ ಆವರಣಕ್ಕೆ ಸ್ಥಳಾಂತರವಾಗಿದ್ದಾರೆ. ನಿರಾಶ್ರಿತ ಜನರಿಗೆ ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಎಪಿಎಂಸಿ ಆವರಣದಲ್ಲಿ ಮಾಡಲಾಗಿದೆ.

Intro:ಯಾದಗಿರಿ: ಹುಣಸಗಿ ತಾಲೂಕಿನ ಬಸವ ಸಾಗರ ಜಲಾಶಯದಿಂದ 3,90,797 ಕ್ಯೂಸೆಕ್ ನೀರು ಕೃಷ್ಣ‌ ನದಿಗೆ ಹರಿಸಿದ ಹಿನ್ನಲೆ ಜಿಲ್ಲೆಯಾದ್ಯಂತ ನದಿ ಪಾತ್ರದ ಗ್ರಾಮಗಳ ಜಮೀನುಗಳು ಜಲಾವೃತ್ತವಾಗಿವೆ.

ಇಂದು ಸಂಜೆ ಆಲಮಟ್ಟಿ ಜಲಾಶಯದಲ್ಲಿ ನೀರಿನ ಒಳಹರಿವೂ ಹೆಚ್ಚಾದ ಹಿನ್ನಲೆ ಬಸವ ಸಾಗರ ಜಲಾಶಯಕ್ಕೆ ನಾಲ್ಕು ಲಕ್ಷ ಅಧಿಕ್ಕೂ ನೀರು ಕೃಷ್ಣ ನದಿಗೆ ರಾತ್ರಿ ವೇಳೆಯಲ್ಲಿ ಕೆಬಿಜೆಎನ್ಲ ಆದಿಕಾರಿಗಳು ಹರಿಸುವ ಹಿನ್ನಲೆ ಗ್ರಾಮಸ್ಥರು ಸ್ಥಳಾಂತರವಾಗುತ್ತಿದ್ದಾರೆ .

Body:ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ಶೆಳ್ಳಗಿ ಗ್ರಾಮವು ಕೃಷ್ಣ ನದಿಯ ಪ್ರವಾಹದಿಂದ ಮುಳುಗುವ ಸಾಧ್ಯತೆ ಹೆಚ್ಚಾದ ಹಿನ್ನಲೆ ಸಹಾಯಕ ಆಯುಕ್ತ ಶಂಕರಗೌಡ ಸೋಮನಾಳ ಭೇಟಿ ನೀಡಿ ಸ್ಥಳಾಂತರವಾಗುವಂತೆ ಮನವೊಲಿಸಿದ್ದರು.

Conclusion:ಹೀಗಾಗಿ ಸಹಾಯಕ ಆಯುಕ್ತ ಶಮಕರಗೌಡ ಸೋಮನಾಳ ಮನವೊಲಿಕೆಗೆ ಗ್ರಾಮಸ್ಥರು ಸುರಪೂರ ಎಪಿಎಂಸಿ ಆವರಣಕ್ಕೆ ಸ್ಥಳಾಂತರವಾಗಿದ್ದಾರೆ. ಸಹಾಯಕ ಆಯುಕ್ತರು ನಿರಾಶ್ರಿತ ಜನರಿಗೆ ಊಟ ಬಡಿಸುವ ಮುಖಾಂತರ ಹಾಗೂ ಮಲಗುವುದಕ್ಕೆ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.