ಯಾದಗಿರಿ: ಇಂದು ಜಿಲ್ಲೆಯಲ್ಲಿನ ಇಬ್ಬರು ಪತ್ರಕರ್ತರು ಮತ್ತು ಓರ್ವ ಕ್ಯಾಮರಾ ಮ್ಯಾನ್ ಕೋವಿಡ್ ವರದಿ ಪಾಸಿಟಿವ್ ಬಂದಿರುವುದು ಜಿಲ್ಲೆಯ ಉಳಿದ ಪತ್ರಕರ್ತರ ಆತಂಕಕ್ಕೆ ಕಾರಣವಾಗಿದೆ.
ಜಿಲ್ಲೆಗೆ ಮಹಾರಾಷ್ಟ್ರದ ಮಹಾ ನಂಜು ಬೆಂಬಿಡದೆ ಕಾಡುತ್ತಿದೆ. ಮಹಾರಾಷ್ಟ್ರದಿಂದ ವಲಸೆ ಬಂದ ಅನೇಕ ಕೂಲಿ ಕಾರ್ಮಿಕರಲ್ಲಿ ಸೋಂಕು ಕಾಣಿಸಿಕೊಂಡಿದೆ. ಸದ್ಯ ಜಿಲ್ಲೆಯಲ್ಲಿ 1,100ಕ್ಕೂ ಹೆಚ್ಚು ಜನರಲ್ಲಿ ಕೊರೊನಾ ಸೋಂಕು ದೃಢವಾಗಿದೆ.
ಖಾಸಗಿ ವಾಹಿನಿಯ 36 ವರ್ಷದ ಪತ್ರಕರ್ತ ಹಾಗೂ 26 ವರ್ಷದ ಕ್ಯಾಮರಾ ಮ್ಯಾನ್, 56 ವರ್ಷದ ಮುದ್ರಣ ಮಾಧ್ಯಮದ ವರದಿಗಾರನಿಗೂ ಮಹಾಮಾರಿ ಕೊರೊನಾ ಅಂಟಿದೆ. ಇದರಿಂದ ಯಾದಗಿರಿ ಜಿಲ್ಲೆಯ ಪತ್ರಕರ್ತ ವಲಯದಲ್ಲಿ ಭಾರೀ ಆತಂಕ ಮನೆ ಮಾಡಿದೆ.
ಪತ್ರಕರ್ತರು ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್, ಸ್ಯಾನಿಟೈಸರ್ ತಪ್ಪದೆ ಬಳಿಸಿ, ಆರೋಗ್ಯದ ಕಡೆ ಹೆಚ್ಚಿನ ನಿಗಾವಹಿಸಬೇಕೆಂದು ಕಾರ್ಯನಿರತ ಪತ್ರಕರ್ತರ ಸಂಘ ಸಲಹೆ ನೀಡಿದೆ.