ETV Bharat / state

ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ರೈತರು ಸೇರಿ ಎತ್ತು ಸ್ಥಳದಲ್ಲೇ ಸಾವು - farmers news

ಜಮೀನೊಂದರ ತಂತಿ ಬೇಲಿಗೆ ವಿದ್ಯುತ್ ತಂತಿ ತಾಕಿಕೊಂಡಿತ್ತು. ಈ ತಂತಿ ಬೇಲಿಗೆ ಎತ್ತು ಸಿಲುಕಿದಾಗ ಎತ್ತನ್ನು ರಕ್ಷಿಸಲು ಇವರಿಬ್ಬರೂ ತೆರಳಿದ ವೇಳೆ ವಿದ್ಯುತ್​ ಹರಿದು ಸಾವನಪ್ಪಿದ್ದಾರೆ.

Two farmers died from electric shock
ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ರೈತರು ಸೇರಿ ಎತ್ತು ಸ್ಥಳದಲ್ಲೇ ಸಾವು
author img

By

Published : Sep 28, 2020, 7:59 PM IST

ಯಾದಗಿರಿ: ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ರೈತರು ಹಾಗೂ ಒಂದು ಎತ್ತು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ವಡಗೇರಾ ತಾಲೂಕಿನ ಬೆಂಡೆಬೆಂಬಳಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ರೈತರು ಸೇರಿ ಎತ್ತು ಸ್ಥಳದಲ್ಲೇ ಸಾವು

ಬೆಂಡೆಬೆಂಬಳಿ ಗ್ರಾಮದ ಮೌಲಾಲಿ (33) ಹಾಗೂ ಬಸ್ಸಪ್ಪ ಪೂಜಾ (33) ಎಂಬಾತರು ಅಸುನೀಗಿದ್ದಾರೆ. ಜಮೀನು ಕೆಲಸ ಮುಗಿಸಿಕೊಂಡು ಎತ್ತಿನ ಸಮೇತ ರೈತ ಮೌಲಾಲಿ ಮತ್ತು ಬಸ್ಸಪ್ಪ ಮನೆಗೆ ಮರಳುವ ವೇಳೆ ಈ ದುರ್ಘಟನೆ ಸಂಭವಿಸಿದೆ.

ಜಮೀನೊಂದರ ತಂತಿ ಬೇಲಿಗೆ ವಿದ್ಯುತ್ ತಂತಿ ತಾಕಿಕೊಂಡಿತ್ತು. ಈ ತಂತಿ ಬೇಲಿಗೆ ಎತ್ತು ಸಿಲುಕಿದಾಗ ಎತ್ತನ್ನು ರಕ್ಷಿಸಲು ಇವರಿಬ್ಬರೂ ತೆರಳಿದ ವೇಲೆ ವಿದ್ಯುತ್​ ಹರಿದು ಸಾವನಪ್ಪಿದ್ದಾರೆ. ಇನ್ನು ಕರೆ ಮಾಡಿ ಘಟನೆ ಬಗ್ಗೆ ವಿವರಿಸಿದರೂ ಸ್ಥಳಕ್ಕೆ ಬಾರದ ಜೆಸ್ಕಾಂ ಸಿಬ್ಬಂದಿಯ ವಿರುದ್ಧ ಸ್ಥಳಿಯರು ಆಕ್ರೋಶ ಹೊರಹಾಕಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.