ಯಾದಗಿರಿ : ಯಾದಗಿರಿಯ ಗುರಮಿಠಕಲ್ ತಾಲೂಕಿನ ಇಡ್ಲೂರ ಗ್ರಾಮದ ಮೌನೇಶ್ ಎಂಬಾತ ಹೈದರಾಬಾದ್ನ ಖಾಸಗಿ ಕಂಪನಿಯೊಂದರಲ್ಲಿ ಈವೆಂಟ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ಕೊರೊನಾ ವೈರಸ್ ವಕ್ಕರಿಸಿದ್ಮೇಲೆ ಲಾಕ್ಡೌನ್ ಘೋಷಣೆಯಾದ್ಮೇಲೆ ಎಲ್ಲರಂತೆ ಈತನೂ ಕೂಡಾ ತನ್ನ ಗ್ರಾಮಕ್ಕೆ ವಾಪಸ್ ಬಂದ. ಇದ್ದ ಕೆಲಸವೂ ಹೋಯ್ತು.. ಇದರಿಂದ ಧೃತಿಗೆಡದ ಮೌನೇಶ್ ಗ್ರಾಮದ ಹೊರಭಾಗದಲ್ಲಿ ಐದು ಎಕರೆ ಭೂಮಿಯನ್ನು ಲೀಸ್ಗೆ ಪಡ್ಕೊಂಡು ವ್ಯವಸಾಯ ಆರಂಭಿಸಿದ್ದಾರೆ.
ಹೈದರಾಬಾದ್ನಲ್ಲಿ ಕೈತುಂಬಾ ಸಂಬಳ ಪಡೀತಿದ್ದ ಮೌನೇಶ್ ತಮ್ಮ ಕುಟುಂಬಕ್ಕೆ ಆಸರೆಯಾಗಿದ್ದರು. ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಕಂಪನಿ ಮುಚ್ಚಿದಾಗ ದಿಕ್ಕು ತೋಚದ ಮೌನೇಶ್, ದುಡಿಯೋ ಹುಮ್ಮಸ್ಸಿನಲ್ಲಿ 5 ಎಕರೆ ಜಮೀನು ಲೀಸ್ ಪಡೆದು ಹತ್ತಿ ಬೆಳೆಯಲು ಮುಂದಾಗಿದ್ದಾರೆ. ಈತನ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.