ಸುರಪುರ (ಯಾದಗಿರಿ): ಭಾವಸಾರ ಕ್ಷತ್ರಿಯ ಸಮಾಜ ಗಜಾನನ ಸಮಿತಿ ಹಾಗೂ ಧನ್ಯೋಸ್ಮಿ ಭರತ ಭೂಮಿ ಸಂಘದ ನೇತೃತ್ವದಲ್ಲಿ 50ನೇ ವರ್ಷದ ಗಜಾನನ ಉತ್ಸವ ಆಚರಿಸಲಾಯಿತು.
ಕೊರೊನಾ ಸಾಂಕ್ರಾಮಿಕದ ಕಾರಣದಿಂದಾಗಿ ಗಜಾನನ ಉತ್ಸವವನ್ನು ಸರಳವಾಗಿ ಆಚರಿಸಲಾಯಿತು. ಇದೇ ಸಂದರ್ಭದಲ್ಲಿ ಕೊರೊನಾ ನಿಯಂತ್ರಣಕ್ಕಾಗಿ ಶ್ರಮಿಸುತ್ತಿರುವ ಕೊರೊನಾ ವಾರಿಯರ್ ಗಳಿಗೆ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ನಗರಸಭೆ ಸ್ವಚ್ಛತಾ ಕಾರ್ಮಿಕರು, ಆಶಾ ಕಾರ್ಯಕರ್ತೆಯರು ಹಾಗೂ ಕೊರೊನಾ ನಿರ್ಮೂಲನೆಗೆ ಸ್ವಯಂ ಸೇವಕರಾಗಿ ದುಡಿದ ಅನೇಕರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ತಾಲೂಕು ಆರೋಗ್ಯಾಧಿಕಾರಿ ಡಾ. ಆರ್. ವಿನಾಯಕ ಮಾತನಾಡಿ, ಕೊರೊನಾ ಇಡೀ ಜಗತ್ತನ್ನೆ ಇಂದು ಕಾಡುತ್ತಿರುವ ಮಹಾ ಪಿಡುಗಾಗಿದೆ. ಇದರ ನಿರ್ಮೂಲನೆಗೆ ನಾವೆಲ್ಲರೂ ಶ್ರಮಿಸುವುದರ ಜೊತೆಗೆ ಸಾರ್ವಜನಿಕರು ಸಾಮಾಜಿಕ ಅಂತರ ಕಾಪಾಡುವ ಜೊತೆಗೆ ಮಾಸ್ಕ್ ಧರಿಸಿಕೊಂಡು ಸುರಕ್ಷತೆಯಿಂದಿರಬೇಕು ಎಂದು ತಿಳಿಸಿದರು.