ಸುರಪುರ(ಯಾದಗಿರಿ): ತಾಲೂಕಿನ ಲಕ್ಷ್ಮೀಪುರ ಶ್ರೀಗಿರಿ ಮಠದ ಆವರಣದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಸಭೆಯನ್ನು ಇಂದು ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಶ್ರೀಗಿರಿ ಮಠದ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಭಾಗವಹಿಸಿ ರೈತರೊಂದಿಗೆ ಚರ್ಚೆ ನಡೆಸಿದರು.
ಸಭೆಯಲ್ಲಿ ಚೆನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯವರು ಮಾತನಾಡಿ, ಆಳುವವರ ಇಚ್ಛಾಶಕ್ತಿಯ ಕೊರತೆಯಿಂದ ರೈತಾಪಿ ವರ್ಗ ಅಭಿವೃದ್ಧಿ ಕಾಣದೆ ಸೊರಗಿದೆ. ಅಲ್ಲದೇ ಪ್ರತಿ ದಿನ ಒಂದಿಲ್ಲೊಂದು ಸಮಸ್ಯೆ ಎದುರಿಸುವಂತಾಗಿದೆ. ಸಮಸ್ಯೆಗಳು ಕುಣಿಕೆಯಾಗಲಾರಂಭಿಸಿದಾಗ ರೈತರೆಲ್ಲಾ ಒಂದಾಗಿ ಒಗ್ಗಟ್ಟಿನಿಂದ ಸಮಸ್ಯೆಗಳ ಬಗೆಹರಿಕೆಗೆ ಮುಂದಾಗಬೇಕು ಎಂದರು.
ನೆರೆದಿದ್ದ ರೈತರೊಂದಿಗೆ, ರೈತ ಮುಖಂಡರೊಂದಿಗೆ ಚರ್ಚಿಸಿ ಅವರ ಸಮಸ್ಯೆಗಳನ್ನು ಆಲಿಸಿದರು. ಒಗ್ಗಟ್ಟಾಗಿ ಪರಿಹಾರ ಮಾರ್ಗ ಕಂಡುಕೊಳ್ಳುವಂತೆ ತಿಳಿಸಿದರು. ಈ ವೇಳೆ ಕನ್ನಡಪರ ಹೋರಾಟಗಾರ ಶಿವರಾಜ್ ಕಲಕೇರಿ ಕರ್ನಾಟಕ ರಾಜ್ಯ ರೈತ ಸಂಘಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.