ಯಾದಗಿರಿ: ಜಿಲ್ಲೆಯ ಕೆಂಭಾವಿ ಸಮೀಪದ ಗುತ್ತಿ ಬಸವೇಶ್ವರ ದೇವಸ್ಥಾನದಲ್ಲಿ ಬಸವಣ್ಣನ ಬೆಳ್ಳಿ ಕವಚ ಸೋಮವಾರ ರಾತ್ರಿ ಕಳ್ಳತನವಾಗಿದೆ. ಧಾರ್ಮಿಕ ದತ್ತಿ ಇಲಾಖೆಗೆ ಒಳಪಡುವ ಪ್ರಸಿದ್ಧ ಗುತ್ತಿ ಬಸವೇಶ್ವರ ಮಂದಿರದ ಬೀಗ ಮುರಿದು 3 ಕೆಜಿ ದೇವರ ಎರಡು ಬೆಳ್ಳಿ ಮೂರ್ತಿ ಹಾಗೂ ಆಭರಣ ಕಳ್ಳತನವಾಗಿದೆ.
ಪಿಎಸ್ಐಗೆ ನೀನು ಮೊದಲು ಕೇಸ್ ಮಾಡು. ಸಿಸಿ ಕ್ಯಾಮರಾ ಅಳವಡಿಸಿದ್ದನ್ನು ಏನು ಕೇಳ್ತಿಯಾ?. ಪೋನ್ ಮಾಡಿದ ಭಕ್ತರು ಇಲ್ಲಿ ಬರೋದಿಲ್ಲ. ಏನು ಮಾಡಿಕೊಳ್ತಿರಿ ಎಂದು ಸುರಪುರ ತಹಶಿಲ್ದಾರ್ ಸುಬ್ಬಣ್ಣ ಜಮಖಂಡಿಗೆ ಆವಾಜ್ ಹಾಕಿದ ಪ್ರಸಂಗ ನಡೆದಿದೆ.
ಮಂದಿರದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸದೇ ಇರುವುದು ಹಾಗೂ ಕಳ್ಳತನ ನಂತರವೂ ಸ್ಥಳಕ್ಕೆ ಭೇಟಿ ನೀಡದೇ ಇರುವುದು ತಹಶೀಲ್ದಾರ್ ನಿರ್ಲಕ್ಷ್ಯ ಎಂದು ದೂರಿ ಅವರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಕೆಂಭಾವಿ ಪಿಎಸ್ಐ ವಿಶ್ವನಾಥ ಮುದರಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಬೆರಳಚ್ಚು ತಜ್ಞರು ಮತ್ತು ಶ್ವಾನದಳ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಓದಿ: ಕೃಷಿಯಲ್ಲಿ ದೇಶ ಆತ್ಮನಿರ್ಭರವಾಗಬೇಕಿದೆ: ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್