ಯಾದಗಿರಿ: ಜಿಲ್ಲೆಯಲ್ಲಿಂದು ಮತ್ತೆ 7 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 956ಕ್ಕೆ ಏರಿಕೆಯಾಗಿದೆ.
ಸೋಂಕಿತರ ವಿವರ:
ಶಹಪುರ ತಾಲೂಕಿನ ನಾಯ್ಕಲ್ ಗ್ರಾಮದ 22 ವರ್ಷದ ಮಹಿಳೆ (ಪಿ-16826), ತಾಲೂಕಿನ ಹತ್ತಿಕುಣಿ ಗ್ರಾಮದ 45 ವರ್ಷದ ಪುರುಷ (ಪಿ-16827), ಶಹಾಪುರ ತಾಲೂಕಿನ ಹಾಲಭಾವಿ ಗ್ರಾಮದ 60 ವರ್ಷದ ಮಹಿಳೆ (ಪಿ-16828), ಬಸವೇಶ್ವರ ನಗರದ ಹೊನಗೇರಾ ಮೂಲದ 16 ವರ್ಷದ ಬಾಲಕ (ಪಿ-16829), ಬಸವೇಶ್ವರ ನಗರದ ಹೊನಗೇರಾ ಮೂಲದ 55 ವರ್ಷದ ಮಹಿಳೆ (ಪಿ-16830), ಗುರುಮಠಕಲ್‍ನ ಎಜೆಟಿ ಕಾಲೋನಿಯ 45 ವರ್ಷದ ಮಹಿಳೆ (ಪಿ-16831), ತಾಲೂಕಿನ ಕೂಡ್ಲೂರು ಗ್ರಾಮದ 30 ವರ್ಷದ ಪುರುಷ (ಪಿ-16832) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ.
ಪ್ರಕರಣ ಸಂಖ್ಯೆ ಪಿ-16826 ಮತ್ತು ಪಿ-16828 ವ್ಯಕ್ತಿಗಳು ಅಂತಾರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ತೆಲಂಗಾಣ ರಾಜ್ಯದ ಹೈದ್ರಾಬಾದ್ ಹಾಗೂ ಮಹಾರಾಷ್ಟ್ರದ ಮುಂಬೈಯಿಂದ ಜಿಲ್ಲೆಗೆ ಹಿಂದಿರುಗದ್ದಾವರಾಗಿದ್ದಾರೆ. ಉಳಿದ 5 ಜನರ ಸಂಪರ್ಕದ ಕುರಿತು ಪತ್ತೆ ಹಚ್ಚಲಾಗುತ್ತಿದೆ.
ಸೋಂಕಿತರೆಲ್ಲರನ್ನು ಚಿಕಿತ್ಸೆಗಾಗಿ ಜಿಲ್ಲೆಯ ನಿಗದಿತ ಕೋವಿಡ್ 19 ಆಸ್ಪತ್ರೆಗೆ ದಾಖಲಿಸಲಾಗಿದೆ. ಇದುವರೆಗೆ 854 ಜನರು ಸೋಂಕಿನಿಂದ ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ.