ETV Bharat / state

ಸಗರ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವಕ್ಕೆ ಭಕ್ತಸಾಗರ; ಮನಸೆಳೆದ ಜಗಜಟ್ಟಿಗಳ ಕಾಳಗ - ಭರ್ಜರಿ ಭೋಜನ

ಶಹಾಪುರ ತಾಲೂಕು ಸಗರ ಗ್ರಾಮದಲ್ಲಿ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವ ಕಳೆಗಟ್ಟಿತ್ತು.

Sagara Yellamma Devi Jatra Mahotsava
ಸಗರ ಯಲ್ಲಮ್ಮ ದೇವಿ ಜಾತ್ರೆ ಮಹೋತ್ಸವ
author img

By

Published : Feb 2, 2023, 5:15 PM IST

ಸಗರ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವ

ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದಲ್ಲಿ ಯಲ್ಲಮ್ಮ ದೇವಿ ಜಾತ್ರಾ ಮಹೋತ್ಸವ ಪ್ರತಿ ವರ್ಷದಂತೆ ಸಂಭ್ರಮದಿಂದ ಜರುಗಿತು. ಗ್ರಾಮದ ಅರ್ಚಕ ಬಸಪ್ಪ ಸಿಂಪಿ ಅವರ ಮನೆಯಲ್ಲಿದ್ದ ಯಲ್ಲಮ್ಮ ದೇವಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿಟ್ಟು ಬಾಜಾ-ಬಜಂತ್ರಿ ಗಾನವಾದ್ಯಗಳಸಹಿತ ಊರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಈ ಭಾಗದ ಪ್ರಮುಖ ನದಿಯಾದ ಕೃಷ್ಣಾ ನದಿಯಲ್ಲಿ ಗಂಗಾಸ್ಥಾನ ನೆರವೇರಿತು. ಈ ಬಳಿಕ ಉತ್ಸವ ಮೂರ್ತಿಯ ಮೆರವಣಿಗೆ ಗುಡ್ಡದ ಮೇಲಿರುವ ದೇವಸ್ಥಾನಕ್ಕೆ ಆಗಮಿಸಿತು.

ಜಾತ್ರೆಗೆ ತಾಲೂಕಿನ ವಿವಿಧ ಗ್ರಾಮದ ಜನರು ಸೇರಿದಂತೆ ಮಹಾರಾಷ್ಟ್ರದಿಂದಲೂ ಹೆಚ್ಚಿನ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದರು. ಹರಕೆ ತೀರಿಸುವ ಅರೆಬೆತ್ತಲೆ ಮೆರವಣಿಗೆ ನಿಷೇಧಿಸಿದ್ದರಿಂದ ಮೈತುಂಬ ಸೊಪ್ಪು ಸುತ್ತಿಕೊಂಡು ತಲೆಯ ಮೇಲೆ ಆರತಿ ಹೊತ್ತು ಭಕ್ತರು ಹರಕೆ ಪೂರೈಸಿದರು. ಜಾತ್ರೆಯಲ್ಲಿ ಮಕ್ಕಳ ಆಟಿಕೆ ಸಾಮಗ್ರಿಗಳ ಮಳಿಗೆ, ಕಬ್ಬಿನ ಜ್ಯೂಸ್​ ಅಂಗಡಿ, ತಿಂಡಿ-ತಿನಿಸುಗಳ ಮಳಿಗೆ, ಹಣ್ಣಿನ ಮಳಿಗೆ, ಮಹಿಳೆಯರಿಗೆ ಸಂಬಂಧಿಸಿದ ಮಳಿಗೆ, ಪಳಾರು ಅಂಗಡಿ ಹಾಗೂ ಜೋಕಾಲಿಗಳಲ್ಲಿ ಜನಂಸಂದಣಿ ಕಂಡುಬಂತು. ಸಗರ ಗ್ರಾಮದಲ್ಲಿ ಯಲ್ಲಮ್ಮ ದೇವಿ ಜಾತ್ರೆಯ ಪ್ರಯುಕ್ತ ವಿವಿಧ ಮನರಂಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಕುಸ್ತಿ ಪಂದ್ಯವನ್ನೂ ಆಯೋಜಿಸಿದ್ದು ವೀಕ್ಷಣೆಗೆ ಸುತ್ತಮುತ್ತಲಿನ ಹಳ್ಳಿಗಳು ಹಾಗೂ ವಿವಿಧ ಜಿಲ್ಲೆಗಳಿಂದ ಜನರು ಬಂದಿದ್ದರು.

ಬಹಳಷ್ಟು ಜನರು ಕುಟುಂಬಸಮೇತ ಟಂಟಂ, ಜೀಪ್, ಕಾರ್, ಬೈಕ್‌ಗಳ​ ಮೂಲಕ ಜಾತ್ರೆಗೆ ಆಗಮಿಸಿದ್ದರು. ಭಕ್ತರು ಮನೆಯಲ್ಲೇ ಭರ್ಜರಿ ಭೋಜನ ತಯಾರಿಸಿಕೊಂಡು ಜಾತ್ರೆ ಬಂದಿದ್ದರು. ಎಲ್ಲರೂ ಸೇರಿಕೊಂಡು ಹೋಳಿಗೆ, ಕಡುಬು, ಖಡಕ್ ರೊಟ್ಟಿ, ಬದನೆಕಾಯಿ, ಪುಂಡಿಪಲ್ಯ ಹೀಗೆ ನಾನಾ ರೀತಿಯ ಆಹಾರ ಸವಿಯುತ್ತಿದ್ದ ದೃಶ್ಯ ಕಂಡುಬಂತು.

ಮನಸೆಳೆದ ಜಗಜಟ್ಟಿಗಳ ಕಾಳಗ: ಜಾತ್ರೆ ಅಂಗವಾಗಿ ಕುಸ್ತಿ ಪಂದ್ಯಾವಳಿ ಏರ್ಪಡಿಸಲಾಗಿತ್ತು. ಪಂದ್ಯಾವಳಿಗೆ ಸುತ್ತಲಿನ ಪೈಲ್ವಾನರು ಸೇರಿದಂತೆ ವಿವಿಧ ರಾಜ್ಯ, ಜಿಲ್ಲೆಗಳಿಂದಲೂ ಸ್ಪರ್ಧಿಗಳು ಆಗಮಿಸಿದ್ದರು. ಕುಸ್ತಿಪಟುಗಳ ಕಾಳಗ ನೆರದಿದ್ದ ಜನರನ್ನು ರೋಮಾಂಚನಗೊಳಿಸಿತು. ಪಂದ್ಯದಲ್ಲಿ ಗೆದ್ದ ಪೈಲ್ವಾನ​ರಿಗೆ ಶಿಳ್ಳೆ, ಚಪ್ಪಾಳೆ ತಟ್ಟುವ ಮೂಲಕ ಪ್ರೇಕ್ಷಕರು ಹುರಿದುಂಬಿಸುತ್ತಿದ್ದರು. ಅಂತಿಮವಾಗಿ ಗೆದ್ದ ಭೀಮರಾಯ ಗೋಗಿ ಅವರಿಗೆ 5 ತೊಲದ ಬೆಳ್ಳಿ ಖಡ್ಗ, 1,100 ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಸಗರ ಯಲ್ಲಮ್ಮ ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಹರಕೆ ತೀರಿಸಿ ಪುನೀತರಾದರು. ಜಾತ್ರೆಯಲ್ಲಿ ಯಲ್ಲಮ್ಮಳ ತುರುಬಕ್ಕೆ ಮಾತ್ರ ಪೂಜೆ ಸಲ್ಲಿಸುವುದು ಇಲ್ಲಿನ ವಿಶೇಷತೆ. ಒಂದೊಮ್ಮೆ ಹೊಲದಲ್ಲಿ ಬೆಳೆದ ಗೆಣಸು, ಬದನೆಕಾಯಿ ಹರಿಯುತ್ತಿದ್ದ ಯಲ್ಲಮ್ಮಳನ್ನು ನೋಡಿ ಆಕೆಯನ್ನು ಹೊಲದ ಮಾಲೀಕ ಹಿಡಿಯಲು ಹೋಗಿದ್ದನಂತೆ. ಆಗ ಆಕೆ ಓಡಿಹೋಗಿ ಗುಡ್ಡದಲ್ಲಿ ಅಡಗಿ ಕುಳಿತಳಂತೆ. ಈ ವೇಳೆ ಯಲ್ಲಮ್ಮಳ ತುರುಬ ಹಿಡಿದು ಜಗ್ಗಿದಾಗಲೂ ಬರಲೇ ಇಲ್ಲ ಎಂಬ ಜಾನಪದ ಕಥೆ ಇಲ್ಲಿ ಅಸ್ತಿತ್ವದಲ್ಲಿದೆ. ಅಂದಿನಿಂದ ಯಲ್ಲಮ್ಮ ದೇವಿಯ ಜಾತ್ರೆಯ ದಿನ ವಿಶೇಷವಾಗಿ ತುರುಬಕ್ಕೆ ಪೂಜೆ ಸಲ್ಲಿಸಿಕೊಂಡು ಬರಲಾಗುತ್ತಿದೆ.

ಇದನ್ನೂಓದಿ: ಹುರಿಯತ್​ ನಾಯಕರ ಅಕ್ರಮ ಕಟ್ಟಡ ನೆಲಸಮ.. ಒತ್ತುವರಿಯಾದ ಸರ್ಕಾರಿ ಭೂಮಿ ಅಧಿಕಾರಿಗಳ ವಶ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.