ETV Bharat / state

ಮದುವೆ ಮನೆಯಲ್ಲಿ ಕುಡಿದು ಗಲಾಟೆ : ರೌಡಿ ಶೀಟರ್ ಬರ್ಬರ ಕೊಲೆ - ಮಹಮ್ಮದ ಹನೀಫ್

ಮದುವೆ ಮನೆಯಲ್ಲಿ ಕಂಠಪೂರ್ತಿ ಕುಡಿದು ಗಲಾಟೆ ಮಾಡಿದ ಎಂದು ರೌಡಿ ಶೀಟರ್​ನನ್ನು ಕೊಲೆ ಮಾಡಿರುವ ಘಟನೆ ಗುರಮಿಠಕಲ್ ತಾಲೂಕಿನ ಪರಮೇಶಪಲ್ಲಿ ಗ್ರಾಮದಲ್ಲಿ ನಡೆದಿದೆ.

ರೌಡಿ ಶೀಟರ್​​ ಮಹಮ್ಮದ ಹನೀಫ್ ಬರ್ಬರ ಕೊಲೆ
ರೌಡಿ ಶೀಟರ್​​ ಮಹಮ್ಮದ ಹನೀಫ್ ಬರ್ಬರ ಕೊಲೆ
author img

By

Published : Aug 11, 2020, 11:51 AM IST

ಯಾದಗಿರಿ: ಮದುವೆ ಮನೆಯಲ್ಲಿ ಕಂಠಪೂರ್ತಿ ಕುಡಿದು ಗಲಾಟೆ ಮಾಡಿದ ಎಂಬ ಕಾರಣಕ್ಕೆ ರೌಡಿ ಶೀಟರ್​ನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಗುರಮಿಠಕಲ್ ತಾಲೂಕಿನ ಪರಮೇಶಪಲ್ಲಿ ಗ್ರಾಮದಲ್ಲಿ ನಡೆದಿದೆ.

ಮಹಮ್ಮದ್ ಹನೀಫ್ (35)ಕೊಲೆಯಾದ ರೌಡಿ ಶೀಟರ್. ಚಿನ್ನಕಾರ ಗ್ರಾಮದ ನಿವಾಸಿಯಾದ ಮಹಮ್ಮದ ಹನೀಫ್, ಪರಮೇಶಪಲ್ಲಿ ಗ್ರಾಮದಲ್ಲಿರುವ ಸಂಬಂಧಿಕ ರಸೂಲ್ ಮಗಳ ಮದುವೆ ಸಮಾರಂಭಕ್ಕೆ ತೆರಳಿದ್ದ. ಸಮಾರಂಭದಲ್ಲಿ ಕಂಠಪೂರ್ತಿ ಕುಡಿದಿದ್ದ ಹನೀಫ್​ ಗಲಾಟೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಪಗೊಂಡ ರಸೂಲ್ ಹಾಗೂ ಆತನ ಮಕ್ಕಳು ಮದುವೆಗೆ ಆಗಮಿಸಿದ ನೆಂಟರ ಮುಂಭಾಗದಲ್ಲೇ ಕಬ್ಬಿಣದ ರಾಡ್, ಕೊಡಲಿ ಮತ್ತು ಬಡಗೆಯಿಂದ ಹನೀಫ್​ನ ತಲೆ ಮತ್ತು ಕುತ್ತಿಗೆ ಭಾಗಕ್ಕೆ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ರೌಡಿ ಶೀಟರ್​​ ಮಹಮ್ಮದ್​ ಹನೀಫ್ ಬರ್ಬರ ಕೊಲೆ

ವಿಷಯ ತಿಳಿದ ಯಾದಗಿರಿ ಎಸ್​ಪಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಗುರಮಿಠಕಲ್ ಪೊಲೀಸ್​​​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಮಾಡಿ ಪರಾರಿಯಾದ ರಸೂಲ್ ಹಾಗೂ ಆತನ ಮಕ್ಕಳ ಬಂಧನಕ್ಕೆ ಜಾಲ ಬೀಸಿದ್ದಾರೆ.

ಇನ್ನು ಕಳೆದ ನಾಲ್ಕು ವರ್ಷಗಳ ಹಿಂದೆ ರಸೂಲ್ ಮನೆಯಲ್ಲಿ ಹನೀಫ್ ಕಳ್ಳತನವೆಸಗಿದ್ದ ಎಂಬ ಆರೋಪವಿತ್ತು. ಈ ವಿಚಾರದಲ್ಲಿ ಇವರಿಬ್ಬರ ಕುಟುಂಬದ ನಡುವೆ ಆಗಾಗ ಜಗಳಗಳು ನಡೆಯುತ್ತಿತ್ತು ಎಂಬ ಮಾತು ಕೇಳಿ ಬಂದಿದೆ. ಸಮಯ ಕಳೆದಂತೆ ಈ ಘಟನೆ ಮರೆತ ರಸೂಲ್ ಮಗಳ ಮದುವೆಗೆ ಮಹಮ್ಮದ್ ಹನೀಫ್ ಕುಟುಂಬವನ್ನು ಆಹ್ವಾನಿಸಿದ್ದ. ಆದರೆ, ಸಮಾರಂಭದಲ್ಲಿ ಕೊಲೆ ನಡೆದಿರುವುದು ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.

ಇನ್ನು ಕೊಲೆಯಾದ ರೌಡಿಶೀಟರ್ ಮಹಮ್ಮದ್ ಹನೀಫ್ ಮೇಲೆ ಗುರಮಿಠಕಲ್ ಪೊಲೀಸ್​​​​​​​​ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.