ETV Bharat / state

ಯಾದಗಿರಿಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಅಕ್ಕಿ ವ್ಯಾಪಾರಿ ಶವ ಪತ್ತೆ: ಕೊಲೆ ಶಂಕೆ - ಅನುಮಾನಸ್ಪದ ರೀತಿ ವ್ಯಕ್ತಿಯ ಶವ ಪತ್ತೆ

ಯಾದಗಿರಿ ಜಿಲ್ಲೆಯ ಗ್ರಾಮವೊಂದರಲ್ಲಿ ಅಕ್ಕಿ ವ್ಯಾಪಾರಿಯೊಬ್ಬರ ಶವ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ.

rice seller dead body found in yadgir
ಕೊಲೆ ಶಂಕೆ
author img

By

Published : Nov 22, 2021, 5:14 PM IST

ಯಾದಗಿರಿ: ತಾಲೂಕಿನ ಚಿಗನೂರು ಗ್ರಾಮದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಅಕ್ಕಿ ವ್ಯಾಪಾರಿ ಕುಷಿಕುಮಾರ್ (55) ಎಂಬುವರ ಶವ ಪತ್ತೆಯಾಗಿದೆ.

ನಗರದಲ್ಲಿ ವಾಸವಾಗಿದ್ದ ಕುಷಿಕುಮಾರ್, ಅಕ್ಕಿ ವ್ಯಾಪಾರದ ಜೊತೆಗೆ 30 ಎಕರೆ ಕಬ್ಬಿನ ಜಮೀನನ್ನು ಗುತ್ತಿಗೆಗೆ ಪಡೆದಿದ್ದರು. ಗಂಜ್​​ನಲ್ಲಿರುವ ತಮ್ಮ ಅಂಗಡಿಗೆ ಭಾನುವಾರ ಸಂಜೆ 7:30ಕ್ಕೆ ಬಂದಿದ್ದರು. ಆದರೆ ಸೋಮವಾರ ಬೆಳಗ್ಗೆ ಶವವಾಗಿ ಪತ್ತೆಯಾಗಿದ್ದಾರೆ.

ಅನುಮಾನಾಸ್ಪದ ರೀತಿಯಲ್ಲಿ ಶವ ಪತ್ತೆ

ಕುಟುಂಬಸ್ಥರು ಕುಷಿಕುಮಾರ್​ ಅವರನ್ನು ಯಾರೋ ಕೊಲೆ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಯಾದಗಿರಿ ಗ್ರಾಮೀಣ ಠಾಣೆಯ ಸಿಪಿಐ ದೀಪಕ್ ರೆಡ್ಡಿ, ಪ್ರೊಬೆಷನರಿ ಪಿಎಸ್​​ಐ ರೇಣುಕಾ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಯಾದಗಿರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:PUBG ಆಟದಿಂದ ಪ್ರಾಣಕ್ಕೆ ಕುತ್ತು.. ರೈಲ್ವೆ ಹಳಿ ಮೇಲೆ ಕುಳಿತು ಪಬ್​ಜಿ ಆಡುತ್ತಿದ್ದ ಇಬ್ಬರು ವಿದ್ಯಾರ್ಥಿಗಳು ದುರ್ಮರಣ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.