ಯಾದಗಿರಿ: ಕಣ್ವಮಠದ ನಿರ್ಗಮಿತ ವಿದ್ಯಾವಾರಿಧಿ ತೀರ್ಥರು ಮಹಿಳೆವೋರ್ವಳೊಂದಿಗೆ ಅಸಭ್ಯ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದು ಪೀಠತ್ಯಾಗ ಮಾಡಿದ್ದರು. ಈ ಹಿನ್ನೆಲೆ ಸುರಪುರ ತಾಲೂಕಿನ ಹುಣಸಿಹೊಳೆ ಕಣ್ವಮಠಕ್ಕೆ ನೂತನ ಪೀಠಾಧಿಪತಿಯಾಗಿ ರವೀಂದ್ರಚಾರ್ಯ ಜೋಷಿ ಅವರನ್ನ ಆಯ್ಕೆ ಮಾಡಲಾಗಿದೆ.
ವಿದ್ಯಾವಾರಿಧಿ ತೀರ್ಥರು ಹಾಗೂ ಮಹಿಳೆವೋರ್ವಳ ನಡುವೆ ನಡೆದಿದೆ ಎನ್ನಲಾದ ವಾಟ್ಸ್ಯಾಪ್ ಸಂದೇಶಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಈ ಹಿನ್ನೆಲೆಯಲ್ಲಿ ಕಣ್ವಮಠದ ಭಕ್ತರು ಹಾಗೂ ಸುರಪುರ ಸಂಸ್ಥಾನ ಅರಸರು ನೂತನ ಪೀಠಾಧಿಪತಿಯಾಗಿ ರವೀಂದ್ರಚಾರ್ಯ ಜೋಷಿ ಅವರನ್ನು ಆಯ್ಕೆ ಮಾಡಿದ್ದಾರೆ. ನೂತನ ಪೀಠಾಧಿಪತಿಗಳ ಪಟ್ಟಾಭಿಷೇಕ ಕಾರ್ಯಕ್ರಮ ನಾಳೆ ಜರುಗಲಿದೆ. ಇಂದಿನಿಂದಲೇ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಿವೆ.