ಯಾದಗಿರಿ: ನಟ ಪುನೀತ್ ರಾಜ್ಕುಮಾರ್ ಅಭಿನಯದ ಕೊನೆಯ ಸಿನಿಮಾ 'ಜೇಮ್ಸ್' ಚಲನಚಿತ್ರ ವೀಕ್ಷಿಸಲು ಜಿಲ್ಲೆಯಲ್ಲಿ ಅಭಿಮಾನಿಗಳು ಕಾತರರಾಗಿದ್ದು, ಶಹಾಪುರ ನಗರದ ಜಯಶ್ರೀ ಚಿತ್ರಮಂದಿರದಲ್ಲಿ ಟಿಕೆಟ್ ಖರೀದಿಸುವಾಗ ನೂಕುನುಗ್ಗಲು ಉಂಟಾಗಿದೆ. ಚಿತ್ರಮಂದಿರದ ಸ್ಕ್ರೀನ್ ಮುಂದೆ ಫ್ಯಾನ್ಸ್ ಕುಣಿದು ಕುಪ್ಪಳಿಸಿದರು.
ತಮ್ಮ ನೆಚ್ಚಿನ ನಟ ಅಪ್ಪು ಅಭಿನಯದ ಕೊನೆಯ ಚಿತ್ರ 'ಜೇಮ್ಸ್' ಸಿನಿಮಾ ನೋಡಲು ಅಭಿಮಾನಿಗಳು ನಸುಕಿನ ಜಾವವೇ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಪುನೀತ್ ಭಾವಚಿತ್ರಕ್ಕೆ ಕ್ಷಿರಾಭಿಷೇಕ ಮಾಡಿ ಅಭಿಮಾನ ಮೆರೆದರು. ಚಿತ್ರಮಂದಿರದ ಸುತ್ತಮುತ್ತಲು ಮತ್ತು ನಗರದ ರಸ್ತೆ ಬದಿಗಳು ಹಾಗೂ ಗಲ್ಲಿಗಳಲ್ಲಿ ಪುನೀತ್ ರಾಜಕುಮಾರ್ ಅವರ ಕಟೌಟ್, ಬ್ಯಾನರ್ಗಳು ರಾರಾಜಿಸುತ್ತಿವೆ.
ಅಲ್ಲದೇ, ಪುನೀತ್ ಅವರ ಹುಟ್ಟು ಹಬ್ಬ ನಿಮಿತ್ತ ಸಿನಿಮಾ ವೀಕ್ಷಿಸಲು ಬರುವ ಜನರಿಗೆ ಅಭಿಮಾನಿಗಳಿಂದ ಶಿರಾ, ಲಾಡು, ಅನ್ನದಾನ ಮಾಡಲಾಯಿತು. ಮುಂಚಿತವಾಗಿ ಟಿಕೆಟ್ಕೊಳ್ಳಲು ಕೂಡ ಟಾಕೀಸ್ನಲ್ಲಿ ಜನರು ಮುಗಿಬಿದ್ದಿರಿವುದು ಕಂಡುಬಂತು.
ಇದನ್ನೂ ಓದಿ: ಜೇಮ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತೇನೆ: ಬಿಎಸ್‌ವೈ