ಸುರಪುರ: ನಗರದ ಕುಂಬಾರಪೇಟೆಯ ಎಪಿಎಂಸಿ ಆವರಣದಲ್ಲಿನ ಎಪಿಎಂಸಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಚೇರಿ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಮಾತನಾಡಿದ ಪ್ರತಿಭಟನಾಕಾರರು ರೈತ ವಿರೋಧಿಯಾದ ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ಕೈಬಿಡಬೇಕು. ಅಲ್ಲದೆ ಲಾಕ್ಡೌನ್ನಿಂದ ಜನರು ಸಂಕಷ್ಟದಲ್ಲಿದ್ದು ಸರ್ಕಾರಿ ಗೋದಾಮುಗಳಲ್ಲಿರುವ ಆಹಾರ ಪದಾರ್ಥಗಳನ್ನು ಬಿಪಿಎಲ್, ಎಪಿಎಲ್ ತಾರತಮ್ಯ ಮಾಡದೆ ಪ್ರತಿಯೊಬ್ಬ ವ್ಯಕ್ತಿಗೆ ಮಾಸಿಕ 15 ಕೆಜಿ ಅಂತಃಕರಣ ಮಾಡಬೇಕು ಎಂದರು.
ಇನ್ನು ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು ಮತ್ತು ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು ಹಾಗೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಸಬೇಕು ಎಂದು ಅನೇಕ ವಿಷಯಗಳ ಕುರಿತು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು. ಮುಖ್ಯಮಂತ್ರಿಗಳಿಗೆ ಬರೆದ ಒಟ್ಟು 13 ಬೇಡಿಕೆಗಳ ಮನವಿಯನ್ನು ಎಂಪಿಎಂಸಿ ಕಚೇರಿಯ ಕಾರ್ಯದರ್ಶಿಗಳ ಮೂಲಕ ಸಲ್ಲಿಸಿದರು.
ಇನ್ನು ಈ ಸಂದರ್ಭದಲ್ಲಿ ಯಲ್ಲಪ್ಪ ಚಿನ್ನಾಕರ ಧರ್ಮಣ್ಣ ದೊರೆ ದವಲಸಾಬನದಾಫ್ ರಾಜು ದೊಡ್ಮನಿ ಶರಣಬಸವ ಜಂಬಲದಿನ್ನಿ ಕೃಷ್ಣಾ ನಾಯ್ಕ್ ಖಾಜಾಸಾಬ ದಳಪತಿ ಸಿದ್ದಮ್ಮ ಭಜಂತ್ರಿ ಉಪಸ್ಥಿತರಿದ್ದರು.