ಯಾದಗಿರಿ: ಮೋದಿ ಚೌಕಿದಾರ್ ನಹಿ ಡೋಂಗಿದಾರ್ ಹೈ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಧಾನಿ ಮೋದಿ ವಿರುದ್ಧ ಲೇವಡಿ ಮಾಡಿದ್ದಾರೆ.
ಜಿಲ್ಲೆಯ ಗುರುಮಿಠಕಲ್ ತಾಲೂಕಿನ ಬಂದಳ್ಳಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಸಾರ್ವತ್ರಿಕ ಲೋಕಸಭೆ ಚುನಾವಣೆ ಪ್ರಚಾರಕ್ಕೆ ಆಗಮಿಸಿದ ಮೋದಿ ಮಹಾ ಮೋಡಿಗಾರ. ಅವರು ಚೌಕಿದಾರ್ ಅಲ್ಲ, ಚೋರ್ ಹೈ ಎಂದು ವ್ಯಂಗ್ಯ ಮಾಡಿದ್ದಾರೆ. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಎಂದು ಹೇಳುವ ಮೋದಿಗೆ ದೇಶದ ರೈತರ ಸಮಸ್ಯೆ ತಿಳಿಯುತ್ತಿಲ್ಲವೆ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಏನೂ ಮಾಡಿಲ್ಲ ಎಂದು ಬೊಬ್ಬೆ ಹೊಡೆಯುವ ಮೋದಿ ಸರ್ಕಾರ ಐದು ವರ್ಷದಲ್ಲಿ ಏನು ಕೆಲಸ ಮಾಡಿದೆ ಎಂದು ದೇಶದ ಜನತೆಗೆ ಲೆಕ್ಕ ಕೊಡಿ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡಿ ನಿರುದ್ಯೋಗ ಸಮಸ್ಯೆ ಕಡಿಮೆ ಮಾಡುತ್ತೇನೆ ಎಂದು ಹೇಳಿ 5 ವರ್ಷ ಕಳೆಯಿತು. ಏನು ಉದ್ಯೋಗ ಸೃಷ್ಟಿ ಮಾಡಿದ್ದೀರಾ ಲೆಕ್ಕ ಕೊಡಿ. ದೇಶದ ಜನರ ಖಾತೆಗಳಿಗೆ ಹದಿನೈದು ಲಕ್ಷ ಹಣವನ್ನು ಹಾಕಲಾಗುವುದೆಂದು ಹೇಳಿ ಜನರಿಗೆ ಮೋಸ ಮಾಡಿದ್ದೀರಿ. ನಾವು ಮಾಡಿದ ಕೆಲಸವನ್ನು ಬಿಜೆಪಿ ಸರ್ಕಾರ ಮಾಡಿದ್ದು ಎಂದು ಹೇಳುವ ಸರ್ಕಾರ ನಿಮ್ಮದು. ನಿಮಗೆ ನಾಚಿಕೆಯಾಗಬೇಕು ಎಂದು ಲೇವಡಿ ಮಾಡಿದರು.
ಈ ವೇಳೆ ಪ್ರಿಯಾಂಕ್ ಖರ್ಗೆ ಮಗಳು ಪ್ರಾರ್ಥನಾ ಚುನಾವಣೆ ಪ್ರಚಾರಕ್ಕೆ ಆಗಮಿಸಿ ತಾತ ಮಲ್ಲಿಕಾರ್ಜುನ ಖರ್ಗೆ ಪರ ಪ್ರಚಾರ ನಡೆಸಿದರು.