ಯಾದಗಿರಿ: ಜಿಲ್ಲೆಯ ಹಲವೆಡೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಈ ಬಾರಿ ಜಿಲ್ಲೆಯಾದ್ಯಂತ ಮಹಿಳೆಯರು ಹಾಗೂ ಯುವಕರು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
ಅದೇ ರೀತಿ ವಡಗೇರಾ ತಾಲೂಕಿನ ಐಕೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಮಹಿಳೆಯರ ಪಾಲಾಗಿದೆ. ಅಧ್ಯಕ್ಷರಾಗಿ ಶ್ರೀಮತಿ ಪಾರ್ವತೆಮ್ಮ ಶೇಖಪ್ಪ ಹಾಗೂ ಉಪಾಧ್ಯಕ್ಷರಾಗಿ ನಿಂಗಮ್ಮ ಬಸ್ಸಪ್ಪ ಆಯ್ಕೆಯಾಗಿದ್ದಾರೆ.
![President of Aikura Gram Panchayat](https://etvbharatimages.akamaized.net/etvbharat/prod-images/10514494_t.png)
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಸುಭಾಸ್ ಐಕೂರ, ಮುಖಂಡರಾದ ತಿಪ್ಪಣ್ಣ ದೊರೆ, ಪ್ರಭುಗೌಡ ಮಾಲಿ ಪಾಟೀಲ್, ಸಂಗನಗೌಡ ಮಾಲಿ ಪಾಟೀಲ್, ಮಾನಿಶಪ್ಪ ದೊರೆ ಹಾಗೂ ಶರಣಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.