ಯಾದಗಿರಿ : ನಗರದ ಹೊಸ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರು ಕುಳಿತುಕೊಳ್ಳುವ ಆಸನದ ಕೆಳಗೆ ಸುಮಾರು ಒಂದು ತಿಂಗಳ ಹೆಣ್ಣು ಶಿಶುವನ್ನು ಬಟ್ಟೆಯಲ್ಲಿ ಸುತ್ತಿ ಬಿಟ್ಟು ಹೋದ ಘಟನೆ ಶನಿವಾರ ನಡೆದಿದೆ. ಶಿಶು ಅಳುವುದನ್ನು ಕೇಳಿ ನೌಕರರೊಬ್ಬರು ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಸ್ಥಳಕ್ಕೆ ಪೊಲೀಸರು ಬಂದು ಮಾಹಿತಿ ಸಂಗ್ರಹಿಸಲು ಮುಂದಾದರೂ ಶಿಶುವಿನ ತಾಯಿ, ಪಾಲಕರು ಪತ್ತೆ ಆಗಲಿಲ್ಲ. ತಾಯಿಯೇ ಬಸ್ ನಿಲ್ದಾಣದಲ್ಲಿ ಬಿಟ್ಟುಹೋಗಿರುವ ಶಂಕೆ ವ್ಯಕ್ತವಾಗಿದೆ.
ಸ್ಥಳಕ್ಕೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಆಗಮಿಸಿ ಶಿಶುವನ್ನು ವಶಕ್ಕೆ ಪಡೆದು ಮಗುವಿಗೆ ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಯಾದಗಿರಿಯ ದತ್ತು ಕೇಂದ್ರಕ್ಕೆ ಶಿಶುವನ್ನು ಕರೆದುಕೊಂಡು ಹೋಗಲಾಗಿದೆ. ಶಹಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: ಕೊಡಗು ಜಿಲ್ಲೆಯಲ್ಲಿ ಮತ್ತೆ ಭೂಕಂಪನದ ಅನುಭವ.. ಆತಂಕದಲ್ಲಿ ಜನ