ETV Bharat / state

ಬಯಲು ಶೌಚಕ್ಕೆ ಹೋದವ್ರಿಗೆ ಹೂವಿನ ಹಾರ ಹಾಕಿ ಅರಿವು ಮೂಡಿಸಿದ ಅಧಿಕಾರಿಗಳು - ಹೂಮಾಲೆ ಹಾಕಿ ಸನ್ಮಾನ

ನಮ್ಮ ನಡೆ ತ್ಯಾಜ್ಯ ಮುಕ್ತ ಕಡೆ ಕಾರ್ಯಕ್ರಮದ ಅಡಿಯಲ್ಲಿ ಬೆಳಗ್ಗೆ ಮನೆಮನೆಗೆ ತೆರಳಿ, ಬಯಲು ಶೌಚಕ್ಕೆ ಹೋಗುವವರನ್ನು ಮತ್ತು ಹೋದವರನ್ನು ತಡೆದು ಹೂಮಾಲೆ ಹಾಕಿ ಶೌಚಾಲಯ ಕುರಿತು ಮತ್ತು ಸ್ವಚ್ಛತೆಯ ಕುರಿತು ಅರಿವು ಮೂಡಿಸಿದ್ದಾರೆ.

Officers who create awareness of those who went to the toilet outside
ಬಯಲು ಶೌಚಕ್ಕೆ ಹೋದವರಿಗೆ ಹೂವಿನ ಹಾರ ಹಾಕಿ ಅರಿವು ಮೂಡಿಸಿದ ಅಧಿಕಾರಿಗಳು
author img

By

Published : Mar 18, 2021, 10:48 PM IST

ಗುರುಮಠಕಲ್ (ಯಾದಗಿರಿ): ತಾಲೂಕಿನ ಚಿನ್ನಕಾರ ಗ್ರಾಮದಲ್ಲಿ ಬಯಲು ಶೌಚಕ್ಕೆ ತೆರಳಿದ್ದರಿಗೆ ಹೂಮಾಲೆ ಹಾಕಿ ಸನ್ಮಾನಿಸಿ ಅರಿವು ಮೂಡಿಸಿದರು. ಮನೆಯಲ್ಲಿ ಶೌಚಾಲಯ ಕಟ್ಟಿಸಿಕೊಳ್ಳುವ ಕುರಿತು ಗ್ರಾಮ ಪಂಚಾಯಿತಿ ಅಧಿಕಾರಿಗಳಿಂದ ವಿನೂತನ ರೀತಿಯಲ್ಲಿ ಅರಿವು ಮೂಡಿಸಲಾಯಿತು.

ತಾಲೂಕಿನ ಇಓ ಬಸವರಾಜ, ಪಿಡಿಓ ಶರಣಪ್ಪ ಮೈಲಾರಿ ಸೇರಿದಂತೆ ಗ್ರಾಮ ಪಂಚಾಯಿತಿ ಸದಸ್ಯರು ಕೂಡಿ ನಮ್ಮ ನಡೆ ತ್ಯಾಜ್ಯ ಮುಕ್ತ ಕಡೆ ಕಾರ್ಯಕ್ರಮದ ಅಡಿಯಲ್ಲಿ ಬೆಳಗ್ಗೆ ಮನೆಮನೆಗೆ ತೆರಳಿ, ಬಯಲು ಶೌಚಕ್ಕೆ ಹೊಗುವವರನ್ನು ಮತ್ತು ಹೊದವರನ್ನು ತಡೆದು ಹೂಮಾಲೆ ಹಾಕಿ ಶೌಚಾಲಯ ಕುರಿತು ಮತ್ತು ಸ್ವಚ್ಚತೆಯ ಕುರಿತು ಅರಿವು ಮೂಡಿಸಲಾಯಿತು.

ಬಯಲು ಶೌಚಕ್ಕೆ ಹೋದವರಿಗೆ ಹೂವಿನ ಹಾರ ಹಾಕಿ ಅರಿವು ಮೂಡಿಸಿದ ಅಧಿಕಾರಿಗಳು

ಸ್ವಚ್ಛ ಭಾರತ ಅಭಿಯಾನದ ಅಂಗವಾಗಿ ಸರ್ಕಾರ ಬಯಲು ಶೌಚ ಮುಕ್ತ ಪರಿಸರ ನಿರ್ಮಾಣಕ್ಕೆ ಕೋಟ್ಯಂತರ ರೂ. ಖರ್ಚು ಮಾಡಿದರೂ ಗ್ರಾಮದಲ್ಲಿ ಬಯಲು ಶೌಚ ಇನ್ನೂ ಜೀವಂತವಾಗಿದೆ.

ಅಲ್ಲದೆ ಈ ವೇಳೆ ಬಯಲು ಶೌಚದಿಂದಾಗುವ ದುಷ್ಪರಿಣಾಮಗಳ ಕುರಿತು ಹಾಗೂ ರೋಗ ರುಜಿನಗಳ ಕುರಿತು ಜನರಿಗೆ ಅರಿವು ಮೂಡಿಸಿದ್ದು, ಶೌಚಾಲಯ ನಿರ್ಮಾಣ ಕುರಿತು ನೀಡಲಾಗುವ ಧನಸಹಾಯ ನೀಡುವ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಬಯಲು ಶೌಚ ಮುಕ್ತ ಜಿಲ್ಲೆಯಾಗಿಸುವ ನಿಟ್ಟಿನಲ್ಲಿ ಗ್ರಾಮಸ್ಥರು ಕೈಜೋಡಿಸಬೇಕು ಎಂದು ಮನವರಿಕೆ ಮಾಡಿಕೊಟ್ಟರು.

ಇದನ್ನೂ ಓದಿ: ರಾಜ್ಯದಲ್ಲಿ ಸದ್ಯದಲ್ಲೇ ಸರ್ಕಾರಿ ಒಡೆತನದ ಆಭರಣ ಮಳಿಗೆ ತಲೆ ಎತ್ತಲಿದೆ: ಸಚಿವ ಮುರುಗೇಶ್​ ನಿರಾಣಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.